ನಾನು ಓದಬೇಕಪ್ಪಾ..ಅಂಗಲಾಚಿದರೂ ಮಗಳಿಗೆ ಚಾಕುವಿನಿಂದ ಇರಿದ ತಂದೆ

ಶಹಜಹಾನ್‌ಪುರ, ಜೂನ್ 16: ನಾನು ಓದಬೇಕಪ್ಪಾ ನನ್ನ ಬಿಟ್ಟು ಬಿಡಿ ಏನು ಮಾಡಬೇಡಿ ಎಂದು ಮಗಳು ಎಷ್ಟೇ ಅಂಗಲಾಚಿದರೂ ತಂದೆ ಹಾಗೂ ಅಣ್ಣ ಬಾಲಕಿಗೆ ಚಾಕುವಿನಿಂದ ಇರಿದ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ಮಗಳಿಗೆ ಓದು ಆಸೆ ಆದರೆ ತಂದೆಗೆ ತಂದೆ ಎಂಬ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಆತುರ, ಇದೆಲ್ಲದರ ಮಧ್ಯೆ ಬಾಲಕಿ ಪರಿಸ್ಥಿತಿ ಏನಾಗಿರಬಹುದು ಎಂದು ಒಮ್ಮೆ ಯೋಚನೆ ಮಾಡಿ, ಬಾಲಕಿಗೆ 15 ವರ್ಷಕ್ಕೆ ತಂದೆ ಮದುವೆ ಮಾಡಲು ಹೊರಟಿದ್ದ.

ಅದನ್ನು ವಿರೋಧಿಸಿ ಓದುವ ಆಸೆಯನ್ನು ತಂದೆಯ ಮುಂದಿಟ್ಟಿದ್ದಕ್ಕೆ ಬಾಲಕಿಗೆ ತಂದೆ ಹಾಗೂ ಅಣ್ಣ ಇಬ್ಬರೂ ಸೇರಿಕೊಂಡು ಹಲವು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಇದಾಗಿದೆ.

Girl Stabbed By Father in Uttar pradesh

ಚಾಕುವಿನಿಂದ ನಿರಂತರವಾಗಿ ತಿವಿದ ಬಳಿಕ ಕಾಲುವೆಗೆ ನನ್ನನ್ನು ತಳ್ಳಿದರು. ಬಳಿಕ ನಾನು ಬದುಕಿದ್ದೇನೋ ಇಲ್ಲವೋ ಎಂದು ನೋಡಲು ಬಂದರು. ಆ ವೇಳೆಗೆ ಅಲ್ಲಿಂದ ನಾನು ಈಜಿಕೊಂಡು ಬೇರೆಡೆ ತೆರಳಿದ್ದೆ ಎಂದು ಹೇಳಿದ್ದಾಳೆ.

ನನ್ನ ತಂದೆ ನನ್ನನ್ನು ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನನ್ನ ಅಣ್ಣನು ಅವರನ್ನು ಸೇರಿಕೊಂಡ. ಬಳಿಕ ಕುತ್ತಿಗೆಗೆ ಬಟ್ಟೆ ಹಾಕಿ ಹಿಡಿದುಕೊಂಡಾಗ ನನ್ನ ತಂದೆ ಹಿಂದಿನಿಂದ ನಿಂತು ಚಾಕುವಿನಿಂದ ನಿರಂತರವಾಗಿ ತಿವಿದರು.

ನಿಲ್ಲಿಸುವುಂತೆ ಬೇಡಿಕೊಂಡರು ಬಿಡದೆ ಚಾಕುವಿನಿಂದ ಹಲ್ಲೆ ನಡೆಸಿದರು. ನನ್ನ ಓದನ್ನು ನಿಲ್ಲಿಸಿ ಮದುವೆಯಾಗಬೇಕೆನ್ನುವುದು ಅವರ ಆಸೆಯಾಗಿತ್ತು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಸದ್ಯ ಸಂತ್ರಸ್ತೆಯ ತಂದೆ ಮತ್ತು ಅಣ್ಣನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಬಾಲಕಿಯಿಂದ ಹೇಳಿಕೆಯನ್ನು ಪಡೆದಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಳ್ಳುತ್ತಿದ್ದೇವೆ. ದೊರಕುವ ಆಧಾರಗಳ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ದಿನೇಶ್‌ ತ್ರಿಪಾಠಿ ತಿಳಿಸಿದ್ದಾರೆ.

ಬಾಲಕಿ ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿದ್ದರಿಂದಾಗಿ ಆಕೆಯನ್ನು ಅಕ್ಕನ ಗಂಡ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು. ನಾನು ಆಕೆಯ ಅಕ್ಕನ ಪತಿ. ಎರಡು ತಿಂಗಳಿಂದ ಆಕೆ ನಮ್ಮೊಂದಿಗೆ ವಾಸವಿದ್ದಾಳೆ. ಅವರ ಪಾಲಕರಿಗೆ ಆಕೆ ಓದುವುದು ಇಷ್ಟವಿಲ್ಲ. ಬದಲಿಗೆ ಮದುವೆ ಮಾಡಲು ಮುಂದಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+