ಕುಟುಂಬದವರಿಗೆ ವಿಷ ಹಾಕಿ ಪ್ರಿಯಕರನ ಜೊತೆ ಓಡಿ ಹೋದ ಅಪ್ರಾಪ್ತೆ
ಲಕ್ನೋ, ಸೆಪ್ಟೆಂಬರ್ 12: ಕುಟುಂಬದವರಿಗೆ ವಿಷ ಹಾಕಿ ಅಪ್ರಾಪ್ತೆ ಪ್ರಿಯಕರನ ಜೊತ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಮ್ಮ ಪ್ರೀತಿಗೆ ಕುಟುಂಬದವರು ಮುಳ್ಳಾಗುತ್ತಾರೆ ಎಂದು ಭಾವಿಸಿ ಅಪ್ರಾಪ್ತೆಯೊಬ್ಬಳು ಕುಟುಂಬದವರಿಗೇ ವಿಷ ಹಾಕಿದ್ದಾಳೆ. ಬಳಿಕ ರಾತ್ರಿ ಓಡಿಹೋಗಿದ್ದಾರೆ.
ರಾತ್ರಿ ತಯಾರಿಸಿದ್ದ ಅಡುಗೆಯಲ್ಲಿ ಆಕೆ ವಿಷ ಬೆರೆಸಿದ್ದಾಳೆ, ಆಹಾರ ಸೇವಿಸಿದ ಬಳಿಕ ಬಾಲಕಿಯ ತಾಯಿ, ಸಹೋದರ, ಸಹೋದರಿಯರು, ಅತ್ತಿಗೆ ಪ್ರಜ್ಞೆ ತಪ್ಪಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮೇಲೆ ಯುವಕ ಜೈಲು ಸೇರಿದ್ದ. ಈ ಸಂಬಂಧ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಯುವಕ ಜೈಲಿನಿಂದ ಹೊರಬಂದಿದ್ದು ಅದೇ ಬಾಲಕಿ ಜೊತೆಗೆ ಇದೀಗ ಓಡಿಹೋಗಿದ್ದಾನೆ.
ಈ ವೇಳೆ ಬಾಲಕಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಆಹಾರದಲ್ಲಿ ವಿಷದ ಪ್ರಮಾಣ ಕಡಿಮೆ ಇದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ ಅಷ್ಟೇ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಬಾದ್ ನಲ್ಲಿ ನಡೆದಿದೆ.












Click it and Unblock the Notifications