ಲಕ್ನೋದಲ್ಲಿ ರೈಲಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ, ಫೆಬ್ರವರಿ 25: ಲಕ್ನೋದ ಮಹಾರಾಜ್‌ಗಂಜ್ ನ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಂಜೆ ಯುವತಿಯನ್ನು ಆಕೆಯ ತಂದೆ ಸಿಸವಾ ಬಜಾರ್ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾರೆ. ರೈಲು ಬರೋದಕ್ಕೂ ಮೊದಲೇ ಯುವತಿ ತಂದೆ ಹಿಂದಿರುಗಿದ್ದರು. ಹಾಗಾಗಿ ಯುವತಿ ತಾನೊಬ್ಬಳೇ ಸಂಬಂಧಿಕರ ಮನೆಗೆ ಹೋಗಲು ರೈಲು ಕಾಯುತ್ತಿದ್ದಳು. ಈ ವೇಳೆ ರೈಲಿನಲ್ಲಿ ತಿಂಡಿ ಮಾರುವವ ಬಂದಿದ್ದಾನೆ. ಆತನ ಬಳಿ ತಿಂಡಿ ಖರೀದಿಸಿ ತಿಂಡಿದ್ದಾರೆ.

ಅದರಲ್ಲಿ ಮೊದಲೇ ಮತ್ತು ಬರುವ ಔಷಧ ಬೆರೆಸಲಾಗಿತ್ತು ಎಂಬುದು ನಂತರದಲ್ಲಿ ತಿಳಿದುಬಂದಿದೆ. ಯುವತಿಗೆ ನಶೆ ಪದಾರ್ಥ ತಿನ್ನಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾತ್ರಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

Gang Rape At Lucknows Railway Station

ಸುಮಾರು ಆರು ಜನರು ಅತ್ಯಾಚಾರ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವನ ವಶಕ್ಕೆ ಪಡೆದು ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸಂತ್ರಸ್ತೆ ಗೆಳೆಯನನನ್ನು ಭೇಟಿಯಾಗಲು ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಯುವತಿ ಜೊತೆ ಮಾತನಾಡುತ್ತಾ ಬಲವಂತವಾಗಿ ನಶೆ ಪದಾರ್ಥ ಮಿಶ್ರಿತ ಆಹಾರ ನೀಡಿದ್ದಾರೆ. ಕೊನೆಗೆ ಅವರು ನೀಡಿದ ಚಹಾ ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ರಾತ್ರಿ ಇಡೀ ಅತ್ಯಾಚಾರ ಎಸಗಿ ಓಡಿ ಹೋಗಿದ್ದಾರೆ.

ಯುವತಿ ರಾತ್ರಿಯೆಲ್ಲ ರೈಲ್ವೇ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆಹೀನಾ ಸ್ಥಿತಿಯಲ್ಲಿದ್ದಳು. ಕೊನೆಗೆ ಆಕೆಯ ತಂದೆಯ ನಂಬ್ ಹುಡುಕಿ ಕರೆ ಮಾಡಿಇದ ಬಳಿಕ ಅವರು ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ನಾಲ್ಕು ದಿನಗಳ ನಂತರ ಯುವತಿಗೆ ಪ್ರಜ್ಞೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆ ಹೇಳಿದ ಮೂವರಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಶುಕ್ಲಾ, ರಾಮಸನೇಹಿ ಅಲಿಯಾಸ್ ಸನೇಹಿ, ಬುವಾರ ಅಲಿಯಾಸ್ ಅನಿಲ್ ಮತ್ತು ಲಾಲಾ ಅಲಿಯಾಸ್ ರಾಹುಲ್ ಶ್ರೀವಾತ್ಸವ್ ಮೇಲೆ ಪ್ರಕರಣ ದಾಖಲಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+