ಅತ್ಯಾಚಾರ ದೂರು ನೀಡಿ 2 ದಿನದಲ್ಲಿ ಸಂತ್ರಸ್ತೆ ತಂದೆ ಅಪಘಾತದಲ್ಲಿ ಸಾವು

ಕಾನ್ಪುರ, ಮಾರ್ಚ್ 10: ಹದಿಮೂರು ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಬಂದಿದ್ದ ತಂದೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಈ ಅಪಘಾತದ ಬಗ್ಗೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು, ಪೊಲೀಸರಿಗೆ ದೂರು ನೀಡಲಾಗಿತ್ತು, ಆರೋಪಿಗಳ ಕಡೆಯಿಂದ ಕೊಲೆ ಬೆದರಿಕೆ ನಿರಂತರವಾಗಿ ಬರುತ್ತಿತ್ತು.

ಮಗಳ ಮೆಡಿಕಲ್ ಚೆಕ್‌ಅಪ್‌ಗೆಂದು ಆಸ್ಪತ್ರೆಗೆ ಬಂದಿದ್ದಾಗ ಕಾನ್ಪುರದ ಆಸ್ಪತ್ರೆಯ ಎದುರೇ ಅಪಘಾತವಾಗಿ ಸಂತ್ರಸ್ತೆಯ ತಂದೆ ಕೊನೆಯುಸಿರೆಳೆದಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ಪ್ರಮುಖ ಆರೋಪಿಯಾಗಿರುವ ಗೋಲು ಯಾದವ್ ವಿರುದ್ಧ ದೂರು ನೀಡಲಾಗಿತ್ತು, ಗೋಲು ಯಾದವ್‌ ಬಂಧಿಸಿದಾಗಿನಿಂದ ಅವರ ಕುಟುಂಬದಿಂದ ಸಂತ್ರಸ್ತೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು. ಪ್ರಕಣವನ್ನು ಹಿಂಪಡೆಯುವಂತೆ ಒತ್ತಡ ಹಾಕಲಾಗುತ್ತಿತ್ತು.

Day After Filing Gang-Rape Case, UP Girls Father Dies In Road Accident

ನನ್ನ ಮಗನದ್ದು ಸಹಜ ಸಾವಲ್ಲ ಯಾರೋ ಕೊಲೆ ಮಾಡಿದ್ದಾರೆ ಎಂದು ಯುವತಿಯ ಅಜ್ಜ ಹೇಳಿಕೆ ನೀಡಿದ್ದಾರೆ. ಮಗಳ ಆರೋಗ್ಯ ಚೆಕ್‌ಅಪ್ ಮಾಡಿಸಿ, ಟೀ ತರಲೆಂದು ಆಸ್ಪತ್ರೆಯಿಂದ ಹೊರಗೆ ಬಂದಿದ್ದರು, ಟ್ರಕ್ ಬಂದು ಅವರಿಗೆ ಗುದ್ದಿತ್ತು. ತಕ್ಷಣವೇ ಕಾನ್ಪುರ ಆಸ್ಪತ್ರೆಗೆ ಸೇರಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+