ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಸಂಪೂರ್ಣ ದಿಗ್ಬಂಧನ

ಲಕ್ನೋ, ಏಪ್ರಿಲ್ 8: ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವ್ಯಾಪಿಸುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಉತ್ತರ ಪ್ರದೇಶದ 15 ಜಿಲ್ಲೆಗಳನ್ನು ಏಪ್ರಿಲ್ 15ರ ವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ಯಾರೂ ಕೂಡ ಈ ಹದಿನೈದು ಜಿಲ್ಲೆಗಳಿಗೆ ಹೋಗುವಂತಿಲ್ಲ ಯಾರೂ ಕೂಡ ಆ ಜಿಲ್ಲೆಗಳಿಂದ ಬರುವಂತಿಲ್ಲ.

ಅಗತ್ಯ ಸಾಮಗ್ರಿಗಳ ಹೋಂ ಡೆಲಿವರಿಗೆ ಹಾಗೂ ವೈದ್ಯಕೀಯ ತಂಡಗಳಿಗೆ ಮಾತ್ರ ಈ ಜಿಲ್ಲೆಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಕೋವಿಡ್‌-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ಸಮುದಾಯಗಳಿಗೆ ವ್ಯಾಪಿಸುವುದನ್ನು ನಿಯಂತ್ರಿಸಲು ಈ ಕ್ರಮ ವಹಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಆರ್‌.ಕೆ.ತಿವಾರಿ ಹೇಳಿದ್ದಾರೆ.

Coronavirus Hotspots In 15 Districts Sealed Till April 15 In Uttar Pradesh

ಲಕ್ನೋ, ನೋಯ್ಡಾ, ಘಾಜಿಯಾಬಾದ್, ಮೀರತ್, ಆಗ್ರ, ಶಾಮ್ಲಿ, ಸಹರನಾಪುರ್ ಸೇರಿದಂತೆ 15 ಜಿಲ್ಲೆಗಳಲ್ಲಿ ಸಂಪೂರ್ಣ ಲಾಡ್ ಡೌನ್ ಘೋಷಿಸಲಾಗಿದ್ದು, ಅಗತ್ಯ ವಸ್ತುಗಳಿಗೂ ಜನ ಮನೆಯಿಂದ ಹೊರ ಬರುವಂತಿಲ್ಲ ಎಂದು ಆದೇಶಿಸಿದೆ.

15 ಜಿಲ್ಲೆಗಳಲ್ಲಿ ಏಪ್ರಿಲ್‌ 15ರ ವರೆಗೂ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದ್ದು, ಜನರು ದಿನಸಿ ಹಾಗೂ ತರಕಾರಿ ಖರೀದಿಗೂ ಮನೆಯಿಂದ ಹೊರಬರುವುದನ್ನು ನಿರ್ಬಂಧಿಸಲಾಗಿದೆ.

ಕುಟುಂಬಕ್ಕೆ ಅವಶ್ಯವಿರುವ ಆಹಾರ ಪದಾರ್ಥಗಳು ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ಶೇ. 100ರಷ್ಟು ಮನೆಯ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+