• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವಕ್ಕೆ ಕೊರೊನಾ ಹರಡಿಸಲು ಸಂಚು ಮಾಡಿದ್ರಾ ಚೀನಾ ಅಧ್ಯಕ್ಷ?

|

ಲಕ್ನೋ, ಮಾರ್ಚ್ 16: ಕೊರೊನಾ ವೈರಸ್ ಸಾಂಕ್ರಮಿಕ ರೋಗ ಎಂದ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಚೀನಾದಲ್ಲಿ ಆರಂಭವಾದ ಈ ವೈರಾಣು ಈಗ ವಿಶ್ವದ ಅನೇಕ ದೇಶಗಳಲ್ಲಿ ಮಾರಣಹೋಮ ನಡೆಸುತ್ತಿದೆ.

ಕೊರೊನಾ ವೈರಸ್‌ ದಾಳಿಗೆ ಜಗತ್ತಿನಾದ್ಯಂತ 6500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇಂತಹ ಭೀಕರ ಸ್ಥಿತಿಗೆ ಚೀನಾ ಕಾರಣವಾಗಿದೆ ಎಂದು ವಿಶ್ವದ ಹಲವು ದೇಶಗಳು ಟೀಕಿಸುತ್ತಿದೆ. ಇದೊಂದು ಪೂರ್ವನಿಯೋಜಿತ ದಾಳಿ, ಉದ್ದೇಶಪೂರ್ವಕವಾಗಿ ಕೊರೊನಾವನ್ನು ಬೇರೆ ದೇಶಗಳಿಗೆ ಚೀನಾ ಹರಡಿಸಿದೆ ಎಂಬ ಅನುಮಾನ ಎದ್ದು ಕಾಣುತ್ತಿದೆ.

ಕೊರೊನಾ ಹೊಡೆತಕ್ಕೆ ಕಂಗೆಟ್ಟ ಯೂರೋಪ್: ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸಾವು

ಇದೇ ಅನುಮಾದ ಹಿನ್ನೆಲೆ ಭಾರತದಲ್ಲಿ ಚೀನಾ ಅಧ್ಯಕ್ಷ ಮತ್ತು ಚೀನಾದ ರಾಯಭಾರಿ ವಿರುದ್ಧ ದೂರು ದಾಖಲಾಗಿದೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ ವಿಚಾರಣಗೆ ದಿನಾಂಕ ನಿಗದಿ ಮಾಡಿದೆ. ಮುಂದೆ ಓದಿ...

ಚೀನಾ ನಿಜಕ್ಕೂ ವೈರಸ್ ಹರಿಡಿಸಿದ್ಯಾ?

ಚೀನಾ ನಿಜಕ್ಕೂ ವೈರಸ್ ಹರಿಡಿಸಿದ್ಯಾ?

ಕೊರೊನಾ ವೈರಸ್ ಹರಡುವಿಕೆಗೆ ಬಗ್ಗೆ ಚೀನಾದ ಮೇಲೆ ಅನುಮಾನ ಇದ್ದೇ ಇದೆ. ವಿಶ್ವದ ಬಲಿಷ್ಠ ರಾಷ್ಟ್ರಗಳ ವಿರುದ್ಧ ನೇರವಾಗಿ ಹೋರಾಡಲು ಸಾಧ್ಯವಾಗದೇ ವೈರಸ್ ಹರಡಿಸಿ ದೇಶ ಜನರ ಮತ್ತು ಆರ್ಥಿಕ ಸ್ಥಿತಿಗೆ ನಷ್ಟ ತರುವುದು ಈ ದಾಳಿಯ ಉದ್ದೇಶ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆ ಯಾವುದೇ ಸಾಕ್ಷಿ ಇಲ್ಲ.

ಚೀನಾ ಅಧ್ಯಕ್ಷನ ವಿರುದ್ಧ ದೂರು

ಚೀನಾ ಅಧ್ಯಕ್ಷನ ವಿರುದ್ಧ ದೂರು

ಉತ್ತರ ಪ್ರದೇಶದ ವಕೀಲ ಸುಧೀರ್ ಕುಮಾರ್ ಓಜಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಾಯಭಾರಿ ಸನ್ ವಿಡಾಂಗ್ ವಿರುದ್ಧ ಮುಜಾಫರ್ ಪುರ ನ್ಯಾಯಾಲಯದಲ್ಲಿ ''ಕೊರೊನಾ ವೈರಸ್ ಹರಡಿಸುವ ಪಿತೂರಿ ನಡೆಸಿ, ಬೇರೆ ದೇಶಗಳಿಗೆ ಸೋಂಕು ತಗುಲುವಂತೆ ಮಾಡಿದ್ದಾರೆ'' ಎಂಬ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಕೊರೊನಾ ಭೀತಿ: ಯುಎಸ್‌ ಗನ್ ಅಂಗಡಿ ಮಾಲೀಕ ಬಿಚ್ಚಿಟ್ಟ ಆತಂಕಕಾರಿ ವಿಷಯ

ಏಪ್ರಿಲ್ 11ಕ್ಕೆ ವಿಚಾರಣೆ

ಏಪ್ರಿಲ್ 11ಕ್ಕೆ ವಿಚಾರಣೆ

ವಕೀಲ ಸುಧೀರ್ ಕುಮಾರ್ ಓಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಏಪ್ರಿಲ್ 11 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ನಡೆಯಲಿದೆ. ಈ ಮೂಲಕ ಚೀನಾ ದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಭಾರತದ ವಕೀಲರೊಬ್ಬರು ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸುದ್ದಿಯಾಗಿದೆ.

100ರ ಗಡಿ ದಾಟಿದ ಕೊರೊನಾ ಕೇಸ್

100ರ ಗಡಿ ದಾಟಿದ ಕೊರೊನಾ ಕೇಸ್

ಜಗತ್ತಿನಾದ್ಯಂತ 1.70 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ ದಾಖಲಾಗಿದೆ. ಅದರಲ್ಲಿ 6500 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸುಮಾರು 110 ಕೊರೊನಾ ಸೋಂಕಿತರು ಬೆಳಕಿಗೆ ಬಂದಿದ್ದಾರೆ. ಇದುವರೆಗೂ ಇಬ್ಬರು ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ

English summary
A complaint was filed in a muzaffarpur court against china president and china's ambassador to india for allegedly spreading coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X