ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಬಾಯಿಯಲ್ಲಿ ಸ್ಫೋಟವಾಗಿ ಮಹಿಳೆ ಸಾವು

ಅಲೀಗಢ (ಉತ್ತರಪ್ರದೇಶ), ಮೇ 16: ಉತ್ತರಪ್ರದೇಶ ಅಲೀಗಢದಲ್ಲಿ ವಿಚಿತ್ರ ಘಟನೆಯೊಂದು ವರದಿ ಆಗಿದೆ. ಚಿಕಿತ್ಸೆ ನಡೆಯುವ ವೇಳೆಯೇ ಮಹಿಳೆ ಬಾಯಿಯಲ್ಲಿ ಸ್ಪೋಟವಾಗಿ ಮೃತಪಟ್ಟಿದ್ದಾಳೆ. ವಿಷ ಸೇವಿಸಿದ್ದ ಮಹಿಳೆಯೊಬ್ಬಳನ್ನು ಅಲೀಗಢದ ಜೆ.ಎನ್.ಮೆಡಿಕಲ್ ಕಾಲೇಜಿಗೆ ಬುಧವಾರ ಸಂಜೆ ಚಿಕಿತ್ಸೆಗಾಗಿ ಕರೆತರಲಾಯಿತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆ ತಕ್ಷಣವೇ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ವಿಷವನ್ನು ಹೊರಗೆ ತೆಗೆಯಲು ಬಾಯಿಯೊಳಗೆ ನಳಿಕೆ ಹಾಕಲಾಗಿದೆ. ಆ ವೇಳೆ ಬಾಯಿಯೊಳಗೆ ಸ್ಫೋಟವಾಗಿದ್ದು, ಅದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ವೈದ್ಯರು ತಂಡವು ಹೇಳುವ ಪ್ರಕಾರ, ಮಹಿಳೆಯು ಸಲ್ಫ್ಯೂರಿಕ್ ಆಸಿಡ್ ಸೇವಿಸಿರುವ ಎಲ್ಲ ಸಾಧ್ಯತೆ ಇದೆ.

Blast in woman mouth during treatment in hospital

ಬಾಯೊಳಗೆ ಹಾಕಿದ ನಳಿಕೆ ಮೂಲಕ ಅದು ಯಾವಾಗ ಆಮ್ಲಜನಕದ ಸಂಪರ್ಕಕ್ಕೆ ಬಂದಿತೋ ಆಗ ಸ್ಫೋಟ ಸಂಭವಿಸಿರಬಹುದು. ಆದರೆ ಈ ಘಟನೆ ಬಗ್ಗೆ ತೀವ್ರವಾದ ಸಂಶೋಧನೆ ನಡೆಸಿದ ಬಳಿಕವಷ್ಟೇ ಸ್ಫೋಟದ ಕಾರಣ ತಿಳಿದುಬರುತ್ತದೆ ಎಂದು ಆಸ್ಪತ್ರೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+