ಸೈಕಲ್ ಚಿಹ್ನೆಗೆ ಮತ ಹಾಕು ಎಂದ ಚುನಾವಣಾಧಿಕಾರಿಗೆ ಬಿತ್ತು ಗೂಸಾ
ಲಕ್ನೋ, ಏ.23: ಬಿಜೆಪಿ ಕಾರ್ಯಕರ್ತರೊಬ್ಬರು ಚುನಾವಣಾಧಿಕಾರಿಗೆ ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಚುನಾವಣಾಧಿಕಾರಿಯೊಬ್ಬರು ಮಹಿಳಾ ಮತದಾರರೊಬ್ಬರಿಗೆ ಸೈಕಲ್ ಚಿಹ್ನೆಗೆ ಮತಹಾಕಿ ಎಂದು ಒತ್ತಡ ಹೇರುತ್ತಿದ್ದ ಕಾರಣ ಬಿಜೆಪಿ ಕಾರ್ಯಕರ್ತರೊಬ್ಬರು ಚುನಾವಣಾಧಿಕಾರಿಗೆ ಥಳಿಸಿದ್ದಾರೆ.
#WATCH Moradabad: BJP workers beat an Election Official at booth number 231 alleging he was asking voters to press the 'cycle' symbol of Samajwadi party pic.twitter.com/FokdXCAJ1z
— ANI UP (@ANINewsUP) April 23, 2019
ಚುನಾವಣಾಧಿಕಾರಿ ಸಮಾಜವಾದಿ ಪಕ್ಷಕ್ಕೆ ಮತಹಾಕಿ ಎಂದು ಬರುವ ಮತದಾರರಿಗೆಲ್ಲ ಒತ್ತಡ ಹೇರುತ್ತಿದ್ದರು. ಚುನಾವಣಾಧಿಕಾರಿ ಮೊಹದ್ ಜುಬೇರ್ ಅವರನ್ನು ಬೂತ್ ನಂಬರ್ 231ರಿಂದ ವಜಾಗೊಳಿಸಲಾಗಿದೆ.

ಅಖಿಲೇಶ್ ಯಾದವ್ ಅವರ ಪಕ್ಷದ ಚಿಹ್ನೆಯನ್ನು ತೋರಿಸಿ ಅದಕ್ಕೆ ಮತಹಾಕು ಎಂದು ಹೇಳುತ್ತಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಅಧಿಕಾರಿಯನ್ನು ಕರೆದೊಯ್ದಿದ್ದಾರೆ. ಬಳಿಕ ಸಾಕಷ್ಟು ಮತದಾರರು ಈ ಕುರಿತು ದೂರು ನೀಡಿದ್ದಾರೆ.












Click it and Unblock the Notifications