Get Updates
Get notified of breaking news, exclusive insights, and must-see stories!

ಎಸ್ಪಿ ಸಂಸದ ಅಜಂ ಖಾನ್ ಹಾಗೂ ಕುಟುಂಬಕ್ಕೆ ಜೈಲುವಾಸ

ರಾಂಪುರ್(ಉ.ಪ್ರ) ಫೆಬ್ರವರಿ 26: ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಹಾಗೂ ಅವರ ಪತ್ನಿ ಶಾಸಕಿ ತಾನ್ಜಿನ್ ಫಾತಿಮಾ, ಪುತ್ರ ಶಾಸಕ ಅಬ್ದುಲ್ಲಾ ಅಜಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸುವಂತೆ ರಾಂಪುರ ನ್ಯಾಯಾಲಯ ನಿರ್ದೇಶಿಸಿದೆ.

Recommended Video

      ICC Ranking : KL Rahul rises up high whereas virat kohli drops | K L Rahul | Virat Kohli

      ಅಬ್ದುಲ್ಲಾ ಅಜಂ ಜನನ ಪ್ರಮಾಣ ಪತ್ರ ನಕಲಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಅಜಂ ಖಾನ್ ಕುಟುಂಬದ ಮೂವರನ್ನು ಮಾರ್ಚ್ 02ರ ತನಕ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ರಾಂಪುರ್ ಎಸ್ಪಿ ಸಂತೋಷ್ ಕುಮಾರ್ ಮಿಶ್ರಾ ಹೇಳಿದ್ದಾರೆ.

      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿತ್ತು. ನ್ಯಾಯಲಯಕ್ಕೆ ಹಾಜರಾದ ಅಜಂಖಾನ್, ಪತ್ನಿ ಹಾಗೂ ಪುತ್ರನಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

      Azam Khan, wife, son sent to judicial custody

      ಸಮಾಜವಾದಿ ಪಕ್ಷದ ಸಂಸದ ಅಜಂಖಾನ್, ಪತ್ನಿ ತಂಜೀನ್ ಫಾತಿಮಾ ಹಾಗೂ ಪುತ್ರ ಅಬ್ದುಲ್ಲಾ ಆಜಂ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಅಜಂ ಪುತ್ರನ ಜನನ ಪ್ರಮಾಣಪತ್ರ ನಕಲಿಯಾಗಿದ್ದು, ಸುಳ್ಳು ಅಫಿಡವಿಟ್ ಸಲ್ಲಿಸಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮಾರ್ಚ್ 2ಕ್ಕೆ ಮುಂದೂಡಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+