ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಯಾರಿಗೆಲ್ಲಾ ಆಹ್ವಾನ? ಇಲ್ಲಿದೆ ಪಟ್ಟಿ

ಲಕ್ನೋ, ಆ 2: ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಬುಧವಾರ, ಆಗಸ್ಟ್ ಐದರಂದು ಈ ಕಾರ್ಯಕ್ರಮ ನಡೆಯಲಿದೆ.

ಶ್ರೀರಾಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯಾರೆನ್ನೆಲ್ಲಾ ಆಹ್ವಾನಿಸಿದೆ ಎನ್ನುವ ವಿಚಾರದಲ್ಲಿ ಇನ್ನೂ ಗೊಂದಲಗಳಿವೆ. ರಾಮ ಮಂದಿರ ಚಳುವಳಿಯ ಪ್ರಮುಖ ರೂವಾರಿಗಳಾದ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಇನ್ನು, ವಿರೋಧ ಪಕ್ಷದ ನಾಯಕರು, ಅಯೋಧ್ಯೆ ತೀರ್ಪು ನೀಡಿದ ಮಾಜಿ ಸಿಜೆಐ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್, ಬಿಜೆಪಿ ಮುಖಂಡರಾದ ಸುಬ್ರಮಣಿಯನ್ ಸ್ವಾಮಿ, ವಿವಿಧ ಧಾರ್ಮಿಕ / ಸಂಘಟನೆ ಮುಖಂಡರುಗಳಲ್ಲಿ, ಯಾರನ್ನೆಲ್ಲಾ ಆಹ್ವಾನಿಸಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.

ಉತ್ತರ ಪ್ರದೇಶದ ಸಿಎಂ ಹೊರತು ಪಡಿಸಿ ಯಾವದೇ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಭೂಮಿಪೂಜೆಗೆ ಆಹ್ವಾನಿಸುತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿರುವ (ಆಗಸ್ಟ್ 1ರಂತೆ) ಅತಿಥಿಗಳ ಪಟ್ಟಿ ಇಂತಿದೆ:

ಅಯೋಧ್ಯೆ ರಾಮ ಮಂದಿರ

ಅಯೋಧ್ಯೆ ರಾಮ ಮಂದಿರ

ನರೇಂದ್ರ ಮೋದಿ
ಯೋಗಿ ಆದಿತ್ಯನಾಥ್
ಉಮಾಭಾರತಿ
ವಿನಯ್ ಕತಿಯಾರ್
ಸಾಧ್ವಿ ರಿತಾಂಬರ
ಕಲ್ಯಾಣ್ ಸಿಂಗ್
ಜೈಭಾನ್ ಸಿಂಗ್ ಪೊವಾಯಿಯಾ
ರಾಜನಾಥ್ ಸಿಂಗ್

ಆಗಸ್ಟ್ ಐದರಂದು ರಾಮ ಮಂದಿರ ಭೂಮಿಪೂಜೆ

ಆಗಸ್ಟ್ ಐದರಂದು ರಾಮ ಮಂದಿರ ಭೂಮಿಪೂಜೆ

ಅಮಿತ್ ಶಾ
ಎಲ್.ಕೆ ಆಡ್ವಾಣಿ
ಮುರಳಿ ಮನೋಹರ ಜೋಷಿ
ಮೋಹನ್ ಭಾಗವತ್
ಕೃಷ್ಣ ಗೋಪಾಲ
ಇಂದ್ರೇಶ್ ಕುಮಾರ್
ಬಾಬಾ ರಾಮದೇವ್
ಅನುಜ್ ಝಾ (ಡಿಸಿ, ಅಯೋಧ್ಯೆ)
ಅವನೀಶ್ ಕುಮಾರ್ ಅವಸ್ಥಿ (ಸಿಎಸ್, ಉ.ಪ್ರ ಸರಕಾರ)
ರಾಜೇಂದ್ರ ದೇವಾಚಾರ್ಯ ಸ್ವಾಮೀಜಿ

ವಿಶ್ವಹಿಂದೂ ಪರಿಷತ್ ಮುಖಂಡರು

ವಿಶ್ವಹಿಂದೂ ಪರಿಷತ್ ಮುಖಂಡರು

ಅಲೋಕ್ ಕುಮಾರ್
ಸದಾಶಿವ ಕೊಕಜೆ
ದಿನೇಶ್ ಚಂದ್ರ
ಪ್ರಕಾಶ್ ಶರ್ಮಾ
ಮಿಲಿಂದ್ ಪರಾಂಡೆ

ಇಕ್ಬಾಲ್ ಅನ್ಸಾರಿ (ದಾವೆ ಹೂಡಿದ್ದವರು)
ವಾಸಿಂ ರಿಜ್ವಿ (ಶಿಯಾ ವಕ್ಫ್ ಬೋರ್ಡ್)
ಜಫರ್ ಫಾರೂಖಿ (ಸನ್ನಿ ವಕ್ಫ್ ಬೋರ್ಡ್)

ರಾಮಜನ್ಮಭೂಮಿ ಟ್ರಸ್ಟ್ ಸದಸ್ಯರು

ರಾಮಜನ್ಮಭೂಮಿ ಟ್ರಸ್ಟ್ ಸದಸ್ಯರು

ಮಹೇಂದ್ರ ನೃತ್ಯ ಗೋಪಾಲ ದಾಸ್
ಸ್ವಾಮಿ ಗೋವಿಂದ್ ದೇವಗಿರಿ
ಚಂಪತ್ ರೈ
ನೃಪೇಂದ್ರ ಮಿಶ್ರಾ
ಕೆ.ಪರಶರನ್
ಸ್ವಾಮಿ ವಾಸುದೇವಾನಂದ ಸರಸ್ವತಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (ಭಾಗವಹಿಸುತ್ತಿಲ್ಲ)
ಪರಮಾನಂದ ಗಿರಿ
ವಿಮಲೇಂದ್ರ ಮೋಹನ್ ಪ್ರತಾಪ ಮಿಶ್ರಾ
ಅನಿಲ್ ಮಿಶ್ರಾ
ಕಾಮೇಶ್ವರ ಚೌಪಾಲ
ಮಹಾಂತ ದಿನೇಂದ್ರ ದಾಸ್
ಗ್ಯಾನೇಶ್ ಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+