ರೋಡ್ ರೋಮಿಯೋಗೆ ನಡುರೋಡಿನಲ್ಲೇ ಊಟ್-ಬೈಟ್

ಲಕ್ನೋ, ಡಿಸೆಂಬರ್.11: ಮಧ್ಯರಾತ್ರಿಯಲ್ಲಿ ಒಂಟಿ ಮಹಿಳೆ ಏಕಾಂಗಿಯಾಗಿ ಓಡಾಡುವಂತೆ ಆದಾಗಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ, ಅವರ ಕನಸಿನ ಭಾರತಕ್ಕೂ ಸದ್ಯದ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಮಧ್ಯರಾತ್ರಿ ಇರಲಿ, ಹಾಡುಹಗಲೇ ಇಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವ ಹಾಗಿಲ್ಲ. ಪುಂಡು-ಪೋಕರಿಗಳ ಹಾವಳಿ ದಿನೇ ದಿನೆ ಹೆಚ್ಚುತ್ತಲೇ ಇದೆ. ನಡುರಸ್ತೆಯಲ್ಲೇ ಕಾದು ನಿಲ್ಲುವ ಪೋಕರಿಗಳಿಗೆ ಉತ್ತರ ಪ್ರದೇಶದಲ್ಲಿ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಚಿಸಿರುವ ರೋಮಿಯೋ ನಿಗ್ರಹ ಪಡೆ ನಡುರಸ್ತೆಯಲ್ಲೇ ಪೋಕರಿಯೊಬ್ಬನಿಗೆ ಶಿಸ್ತಿನ ಪಾಠ ಮಾಡಿದೆ. ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಭೂಪ ರಸ್ತೆಯಲ್ಲಿ ಓಡಾಡುವ ಹುಡುಗಿಯರನ್ನೇ ರೇಗಿಸುತ್ತಾ, ಕಿಚಾಯಿಸುತ್ತಾ ಎಂಜಾಯ್ ಮಾಡುತ್ತಿದ್ದನು. ಹೀಗೆ ಕಪಿಚೇಷ್ಟೇ ಮಾಡುತ್ತಿದ್ದ ಕಪಿರಾಯನ ಬಾಲವನ್ನು ಪೊಲೀಸರು ಕಟ್ ಮಾಡಿದ್ದಾರೆ.

 Anti-Romeo Squad Arrested A Man Involved In Sexually Assault

ನಡುರಸ್ತೆಯಲ್ಲೇ ಊಟ್-ಬೈಟ್

ಅಷ್ಟಕ್ಕೂ ಇಂಥದೊಂದು ಘಟನೆ ನಡೆದಿದ್ದು ಉತ್ತರ ಪ್ರದೇಶ ಸಂಭಾಳ್ ಜಿಲ್ಲೆಯ ಗುನ್ನೌರ್ ಪ್ರದೇಶದಲ್ಲಿ. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಭೂಪ, ಇವತ್ತು ಆಂಟಿ ರೋಮಿಯೋ ಸ್ಕ್ವಾಡ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಎಸ್ಪಿ ಯಮುನಾ ಪ್ರಸಾದ್, ನಡುರಸ್ತೆಯಲ್ಲಿ ಊಟ್-ಬೈಟ್ ಮಾಡಿಸಿದ್ದಾರೆ.

 Anti-Romeo Squad Arrested A Man Involved In Sexually Assault

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಹಿಳೆಯರು ನಿರಾತಂಕವಾಗಿ ಓಡಾವಂತಾ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೋಮಿಯೋ ನಿಗ್ರಹ ಪಡೆ ಕಾರ್ಯ ನಿರ್ವಹಿಸಲಿದೆ ಎಂದು ಎಸ್ಪಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+