ಲಾಕ್‌ಡೌನ್‌ ವೇಳೆ ಕೋಳಿಮಾಂಸ ಸಾಗಣೆ: 5 ಮಂದಿಗೆ ಜಾಮೀನು ನೀಡಿದ ಕೋರ್ಟ್

ಅಲಹಾಬಾದ್, ಮೇ 21: ಕೊರೊನಾ ವೈರಸ್‌ ಲಾಕ್‌ಡೌನ್‌ ವೇಳೆ 300 ಕೆ.ಜಿ ಕೋಳಿಮಾಂಸ ಸಾಗಣೆ ಮಾಡಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಐದು ಮಂದಿಗೆ ಬುಧವಾರ ಅಲಹಾಬಾದ್ ಹೈ ಕೋರ್ಟ್ ಜಾಮೀನು ನೀಡಿದೆ.

ಅಸ್ಜಾದ್ ಗಾಜಿ, ಇರ್ಷಾದ್ ರಾಝಾ, ನಿಹಾಲುದ್ದೀನ್, ಮೊಹಮ್ಮದ್ ಅಕೀಲ್ ಮತ್ತು ಮೊಹಮ್ಮದ್ ಶಾಹಿದ್ ಬಂಧಿತ ವ್ಯಕ್ತಿಗಳು. ಏಪ್ರಿಲ್ 13 ರಂದು ಇವರನ್ನು ಬಂಧಿಸಲಾಗಿದ್ದು, ಸುಮಾರು ಒಂದು ತಿಂಗಳ ನಂತರ ಜೈಲಿನಿಂದ ಹೊರಬಂದಿದ್ದಾರೆ.

ನಾಲ್ಕು ಚಕ್ರ ವಾಹನದಲ್ಲಿ 300 ಕೆ.ಜಿ ಕೋಳಿಮಾಂಸ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಒಟ್ಟು ಏಳು ಜನರನ್ನು ಬಂಧಿಸಲಾಗಿತ್ತು. ಲಕ್ನೋದಾದ್ಯಂತ ವಿವಿಧ ಹೋಟೆಲ್‌ಗಳಿಗೆ ಇವರು ಕೋಳಿ ಮಾಂಸವನ್ನು ಪೂರೈಸುತ್ತಿದ್ದರು ಎಂದು ಅವರ ವಕೀಲ ಅಜಯ್ ಕುಮಾರ್ ಶುಕ್ಲಾ ಹೇಳಿದ್ದಾರೆ.

Allahabad Court Granted Bail To 5 Men Who Carried 300 Kg Of Chicken During Lockdown

ಸೆಕ್ಷನ್ 188 (ಸಾರ್ವಜನಿಕ ಸೇವಕನ ಆದೇಶವನ್ನು ಧಿಕ್ಕರಿಸುವುದು), 268 (ಸಾರ್ವಜನಿಕ ಗಲಾಟೆ), 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ಹರಡುವ ನಿರ್ಲಕ್ಷ್ಯದ ಕೃತ್ಯ), ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.

ಏಳು ಜನರಲ್ಲಿ ಇಬ್ಬರಿಗೆ ಮೇ 7 ರಂದು ಜಾಮೀನು ಸಿಕ್ಕಿತ್ತು. ಉಳಿದ ಅರ್ಜಿಗಳನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಈಗ ಉಳಿದ ಐವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+