ಮದುವೆಯಾಗಿ 24 ಗಂಟೆಗಳಲ್ಲೇ ಪತ್ನಿಗೆ ತಲಾಖ್ ಕೊಟ್ಟಿದ್ದು ಇದೇ ಕಾರಣಕ್ಕೆ
ಲಕ್ನೋ, ಜುಲೈ 15: ಮದುವೆಯಾಗಿ 24 ಗಂಟೆ ಕಳೆಯುವ ಮುನ್ನವೇ ವ್ಯಕ್ತಿಯೊಬ್ಬ ಪತ್ನಿಗೆ ತಲಾಖ್ ನೀಡಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಬೈಕನ್ನು ವರದಕ್ಷಿಯಾಗಿ ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.
ಉಸ್ಮಾನ್ ಗನಿ ತಲಾಖ್ ಕೊಟ್ಟ ಪತಿ. ಜುಲೈ 13ರಂದು ಉಸ್ಮಾನ್ ಗನಿ, ಹಸನಪುರ ತಾಂಡಾದ ನಿವಾಸಿಯಾದ ಖುತುಬುದ್ದೀನ್ ಅವರ ಮಗಳು ರುಕ್ಸಾನಾರನ್ನು ಮದುವೆ ಆಗಿದ್ದ.
ರುಕ್ಸಾನಾಳನ್ನು ಯಾವುದೋ ಶಾಸ್ತ್ರಕ್ಕಗಿ ಮನೆಗೆ ಆಹ್ವಾನಿಸಿದಾಗ ಆಕೆಗೆ ಹುಷಾರಿಲ್ಲ ಎಂದು ಸಬೂಬು ನೀಡಿದ್ದ.ಶನಿವಾರ ಮದುವೆ ಆದ ಬಳಿಕ ರುಕ್ಸಾನಾ ಕುಟುಂಬದವರು ವರದಕ್ಷಿಣೆ ನೀಡಿ ಮಗಳಿಗೆ ತನ್ನ ಪತಿಯ ನಿವಾಸಕ್ಕೆ ಕಳುಹಿಸಿಕೊಟ್ಟರು.

ರುಕ್ಸಾನಾ ಆರೋಗ್ಯ ವಿಚಾರಿಸಲೆಂದು ಖುತುಬುದ್ದೀನ್ ಆಕೆಯ ಪತಿಯ ಮನೆಗೆ ತೆರಳಿದ್ದರು. ರುಕ್ಸಾನಾ ಪತಿ ಉಸ್ಮಾನ್ ಹಾಗೂ ಆತನ ಕುಟುಂಬಸ್ಥರು ಬೈಕನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ತಂದೆ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ.
ಬಳಿಕ ರುಕ್ಸಾನಾ ಕುಟುಂಬದವರು ಉಸ್ಮಾನ್ ಹಾಗೂ ಆತನ ಮನೆಯವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಖುತುಬುದ್ದೀನ್ ಅವರ ಮಾತು ಕೇಳದೇ ಉಸ್ಮಾನ್ ಎಲ್ಲರ ಮುಂದೆ ರುಕ್ಸಾನಾಗೆ ತಲಾಖ್ ನೀಡಿದ್ದಾನೆ.












Click it and Unblock the Notifications