ಇದೇನು ಕಾಲ ಬಂತಪ್ಪಾ! 85 ವರ್ಷದ ಅಜ್ಜಿಯ ಮೇಲೆ ಮೊಮ್ಮಗನಿಂದ ಅತ್ಯಾಚಾರ
ಉತ್ತರಪ್ರದೇಶ: 85 ವರ್ಷದ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.
ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ, ಸಮಾಜ ಎಲ್ಲಿಗೆ ಬಂದು ನಿಂತಿದೆ, ಮಗು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೆ ತಮ್ಮ ಚಪಲವನ್ನು ತೀರಿಸಿಕೊಳ್ಳುವ ಈ ಕಾಮುಕರನ್ನು ಏನನ್ನಬೇಕು, ಕುಡಿದ ಮತ್ತಿನಲ್ಲಿ ಅಜ್ಜಿಯ ಮೇಲೆ ಅತ್ಯಾಚಾರ ಮಾಡುತ್ತಾನೆ ಎಂದಾದರೆ ಈತ ಎಷ್ಟು ವಿಕೃತ ಮನಸ್ಥಿತಿಯುಳ್ಳವನು ಎಂದು ಸಾಬೀತಾಗುತ್ತದೆ.
ಆರೋಪಿಯನ್ನು ಪಲೀಸರು ಕೂಡಲೇ ಬಂಧಿಸುದ್ದು ತನಿಖೆ ನಡೆಸುತ್ತಿದ್ದಾರೆ, ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿದ್ದ, ಕುಟುಂಬದವರೆಲ್ಲರೂ ಮನೆಗೆ ಬಂದ ಬಳಿಕ ವಿಚಾರ ತಿಳಿದಿದೆ.

ವೃದ್ಧೆಯನ್ನು ವೈದ್ಕೀಯ ತಪಾಸಣೆಗೆ ಒಳಪಡಿಸಲಾಗಿದೆ, ಯುಕನ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಯುವಕ ಮತ್ತು ವೃದ್ಧೆ ಒಂದೇ ಕುಟುಂಬದವರಾಗಿದ್ದು ಆಕೆ ಆತನಿಗೆ ಸಂಬಂಧದಲ್ಲಿ ಅಜ್ಜಿ ಆಗುತ್ತಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications