ಉತ್ತರ ಪ್ರದೇಶದ ಕಾರ್ಖಾನೆಯಲ್ಲಿ ಸ್ಫೋಟ: ಕನಿಷ್ಠ 10 ಸಾವು
ಬದೋಹಿ (ಉತ್ತರ ಪ್ರದೇಶ) ಫೆಬ್ರವರಿ 23: ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ಕಾರ್ಪೆಟ್ ಕಾರ್ಖಾನೆಯೊಂದರಲ್ಲಿ ಉಂಟಾದ ಸ್ಫೋಟದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ.
ರೊಹ್ಟಾ ಬಜಾರ್ ಎಂಬಲ್ಲಿನ ಅಂಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಕಾರ್ಖಾನೆಯಲ್ಲಿ ಮೊದಲು ಪಟಾಕಿಗಳನ್ನು ತಯಾರಿಸಲಾಗಿತ್ತಿತ್ತು. ಒಂದಷ್ಟು ಪಟಾಕಿಗಳನ್ನು ಕಟ್ಟಡ ಒಳಭಾಗದಲ್ಲಿ ಶೇಖರಿಸಿ ಇರಿಸಲಾಗಿತ್ತು. ಅವುಗಳಿಂದ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಇಡೀ ಕಟ್ಟಡ ಧ್ವಂಸವಾಗಿ ಕುಸಿದು ಬಿದ್ದಿದೆ. ಸಮೀಪದಲ್ಲಿದ್ದ ಮೂರು ಮನೆಗಳು ಕೂಡ ಕಂಪನದ ತೀವ್ರತೆಗೆ ಕುಸಿದಿವೆ. ಸ್ಫೋಟದಿಂದಾಗಿ ಕಾರ್ಖಾನೆ ಕಟ್ಟಡ ಅವಶೇಷಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ.

ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಯತ್ನಿಸಿದರು.
ಈ ಕಟ್ಟಡವು ಕಾರ್ಪೆಟ್ ತಯಾರಿಕೆಯ ಕಾರ್ಖಾನೆಯಾಗಿದೆ. ಇದಕ್ಕೂ ಮುನ್ನ ಇಲ್ಲಿ ಅಕ್ರಮವಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications