ಲಂಡನ್‌ನ ಟಾಟಾ ಸ್ಟೀಲ್ ಘಟಕದಲ್ಲಿ ಬೆಂಕಿ: ಇಬ್ಬರಿಗೆ ಗಾಯ
ಲಂಡನ್, ಏಪ್ರಿಲ್ 26: ಇಂಗ್ಲೆಂಡ್‌ನ ಸೌತ್ ವೇಲ್ಸ್‌ನಲ್ಲಿರುವ ಟಾಟಾ ಸ್ಟೀಲ್ ಘಟಕದಲ್ಲಿ ಸಂಭವಿಸಿದ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಇಂಗ್ಲೆಂಡ್‌ನ ಅತ್ಯಂತ ದೊಡ್ಡ ಉಕ್ಕು ಕೈಗಾರಿಕೆಯಾಗಿರುವ ಟಾಟಾ ಸ್ಟೀಲ್ ಲಿಮಿಟೆಡ್‌ನ ಪೋರ್ಟ್ ಟ್ಯಾಲ್ಬೋಟ್‌ನಲ್ಲಿರುವ ಘಟಕದಲ್ಲಿ ಈ ಘಟನೆ ನಡೆದಿದೆ. ಕನಿಷ್ಠ ಮೂರು ಬಾರಿ ಸ್ಫೋಟದ ಸದ್ದು ಕೇಳಿಸಿದೆ. ಇಬ್ಬರಿಗೆ ಆಗಿರುವ ಗಾಯ ಅಪಾಯಕಾರಿಯೇನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಿನ 3.35ರ ಸಮಯಕ್ಕೆ ಸ್ಫೋಟ ಸಂಭವಿಸಿದೆ. ಉಕ್ಕು ತಯಾರಿಕೆಗೆ ಸರಕು ಸಾಗಿಸುತ್ತಿದ್ದ ರೈಲು ಒಂದರಿಂದ ಈ ಸ್ಫೋಟ ಸಂಭವಿಸಿದ್ದು, ಅದರಿಂದ ಘಟಕಕ್ಕೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
Latest update to TATA Steelworks incident:
— South Wales Police (@swpolice) 26 April 2019
At this time we believe only two casualties with minor injuries
Please avoid the area at this time
Full statement ⬇️ ^CD pic.twitter.com/ohmEKkaCpT
'ಆರಂಭಿಕ ಮಾಹಿತಿಗಳ ಪ್ರಕಾರ ಮೊಲ್ಟೊನ್ ಮೆಟಲ್ ಸಾಗಿಸುತ್ತಿದ್ದ ರೈಲಿನಿಂದ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಘಟಕದ ಕೆಲವು ಕಟ್ಟಡಗಳಿಗೆ ಇದರಿಂದ ಹಾನಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಟಾಟಾ ಸ್ಟೀಲ್ 2007ರಲ್ಲಿ ಪೋರ್ಟ್ ಟಾಲ್ಬೋಟ್‌ಅನ್ನು ಖರೀದಿ ಮಾಡಿತ್ತು. ಇದಕ್ಕೆ 12 ಬಿಲಿಯನ್ ಡಾಲರ್ ನೀಡಿತ್ತು. ಇಂಗ್ಲೆಂಡ್‌ನಲ್ಲಿ ಅಷ್ಟೇನೂ ಲಾಭಕರವಾಗಿಲ್ಲದ ಕಾರಣ ಟಾಟಾ ಈ ಪ್ರದೇಶದಲ್ಲಿನ ತನ್ನ ಕೆಲವು ಆಸ್ತಿಗಳನ್ನು ಮಾರುವಂತಾಗಿತ್ತು.












Click it and Unblock the Notifications