ಕೊವಿಡ್ 19ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದವರಿಗೆ ಸ್ಟೆರಾಯ್ಡ್ ಔಷಧ
ಲಂಡನ್, ಸೆಪ್ಟೆಂಬರ್ 3: ಕೊವಿಡ್ 19ರೋಗದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಗಳಿಗೆ ಕಾರ್ಟಿಕೋಸ್ಟೆರಾಯ್ಡ್ ಔಷಧ ನೀಡಬಹುದಾಗಿದೆ. ಇದರಿಂದ ಶೇ.20 ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ.
Recommended Video
ಈ ಅಧ್ಯಯನವು ಚಿಕಿತ್ಸೆಯ ಕುರಿತ ಸಲಹೆಗೆ ಅನುಮತಿ ನೀಡಲು ಕೇಳಲಾಗಿದೆ. ಕಡಿಮೆ ಹೈಡ್ರೋಕಾರ್ಟಿಸೋನ್ ಮತ್ತು ಮೀಥೈಲ್ ಪ್ರೆಡ್ನಿಸೋನ್ ನೀಡಿ ದತ್ತಾಂಶ ಸಂಗ್ರಹಿಸಲಾಗಿದೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಈ ಸ್ಟೆರಾಯ್ಡ್ ಮೂಲಕ ಬದುಕಿಸಿಕೊಳ್ಳಬಹುದು ಎಂಬ ಭರವಸೆ ಮೂಡಿದೆ.
ಶೇ.68ರಷ್ಟು ಮಂದಿ ರೋಗಿಗಳು ಸ್ಟೆರಾಯ್ಡ್ ತೆಗೆದುಕೊಂಡ ಬಳಿಕವೇ ಚೇತರಿಕೆ ಕಂಡಿದ್ದಾರೆ. ಸ್ಟೆರಾಯ್ಡ್ ಬಳಕೆ ಹಾಗೂ ಅದರ ಫಲಿತಾಂಶ ಕುರಿತು ನಾವೂ ಕೂಡ ಚಿಂತನೆ ನಡೆಸುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸ್ಟೆರಾಯ್ಡ್ ಕಡಿಮೆ ಬೆಲೆಯಲ್ಲಿ ಲಭ್ಯವಿರಲಿದೆ. ಕೊವಿಡ್ 19 ನಿಂದ ತೀವ್ರತರದ ಪರಿಣಾಮವನ್ನು ಎದುರಿಸುತ್ತಿರುವವರನ್ನು ಉಳಿಸಬಹುದಾಗಿದೆ.
ಬ್ರಿಟನ್, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಸ್ಪೇನ್, ಅಮೆರಿಕದಲ್ಲಿ ಪ್ರಯೋಗ ನಡೆಸಲಾಗಿದೆ. ಡೆಕ್ಸಾಮೆಥಸೋನ್ ಕೊರೊನಾ ಸೋಂಕಿನಿಂದ ತೀವ್ರವಾಗಿ ಬಳಲುತ್ತಿರುವ ವ್ಯಕ್ತಿಯ ಜೀವ ಉಳಿಸಲು ಸಹಕಾರಿಯಾಗಿದೆ.
ವೆಂಟಿಲೇಟರ್‌ನಲ್ಲಿರುವ ಬಹುತೇಕ ರೋಗಿಗಳ ಜೀವವನ್ನು ಉಳಿಸಬಹುದು ಎಂದು ಸಾಬೀತಾಗಿದೆ. ಸುಮಾರು 25 ಮಿಲಿಯನ್ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.












Click it and Unblock the Notifications