ನೀರವ್ ಮೋದಿ ಸಂಬಳ ₹ 18 ಲಕ್ಷ, ಮನೆ ಬಾಡಿಗೆ ₹ 15 ಲಕ್ಷ!

ಲಂಡನ್, ಮಾರ್ಚ್ 21: ಬುಧವಾರದಂದು ಲಂಡನ್ನಿನಲ್ಲಿ ಬಂಧನಕ್ಕೊಳಗಾದ ಪಿಎನ್ ಬಿ ಹಗರಣದ ದೇಶಭ್ರಷ್ಟ ಆರ್ಥಿಕ ಅಪರಾಧಿ ನೀರವ್ ಮೋದಿ ಲಂಡನ್ನಿನ ಡೈಮಂಡ್ ಕಂಪನಿಯೊಂದರಲ್ಲಿ ತಿಂಗಳಿಗೆ 20,000(ಸುಮಾರು 18 ಲಕ್ಷ ರೂ.ಗಿಂತ ಹೆಚ್ಚು) ಪೌಂಡ್ ಸಂಬಳಕ್ಕೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅವರ ವಕೀಲರು ಕೋರ್ಟಿನಲ್ಲಿ ತಿಳಿಸಿದ್ದಾರೆ.

"ಅವರು ಸಮರ್ಪಕವಾಗಿ ತೆರಿಗೆ ಕಟ್ಟುತ್ತಿದ್ದಾರೆ ಎಂಬ ಸಾಕ್ಷಿಯಾಗಿ ಅವರ ಪರ ವಕೀಲರು ನೀರವ್ ಮೋದಿಯ ಸ್ಯಾಲರಿ ಸ್ಲಿಪ್ ಕೋರ್ಟ್ ಮುಂದೆ ಹಾಜರು ಪಡಿಸಿದರು.

48 ವರ್ಷ ವಯಸ್ಸಿನ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂ. ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

Nirav Modi is working as an employee in London for 20000 pounds

20,000 ಪೌಂಡ್ ವೇತನಕ್ಕಾಗಿ ದುಡಿಯುತ್ತಿರುವ ಮೋದಿ, ತಾವು ವಾಸವಿದ್ದ ಮನೆಗೆ ಕಟ್ಟುತ್ತಿದ್ದ ಬಾಡಿಗೆ ತಿಂಗಳಿಗೆ 15 ಲಕ್ಷ ರೂ!

ಸಾವಿರು ಕೋಟಿ ರೂ ವಂಚನೆ ಮಾಡಿ ಸಾಲ ಮರುಪಾವತಿಸದೆ ದೇಶದಿಂದ ಪರಾರಿಯಾಗಿದ್ದ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಲಂಡನ್ನಿಗೆ ಮನವಿ ಮಾಡಿತ್ತು. ಬುಧವಾರ ಅವರನ್ನು ಬಂಧಿಸಲಾಗಿದ್ದು, ಅವರ ಜಾಮೀನು ಅರ್ಜಿಯನ್ನೂ ತಳ್ಳಿಹಾಕಲಾಗಿದೆ. ಮಾರ್ಚ್ 25 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+