ಬಿ.ಪಿಯ ಲಂಡನ್ ಕೇಂದ್ರ ಕಚೇರಿ ಬಂದ್ ಮಾಡಿಸಿದ ಹವಾಮಾನ ಹೋರಾಟಗಾರರು

ಲಂಡನ್, ಫೆಬ್ರವರಿ 5: ಹವಾಮಾನ ಪರ ಹೋರಾಟಗಾರರ ಪ್ರತಿಭಟನೆಗೆ ಬೆದರಿ ಲಂಡನ್‌ನಲ್ಲಿನ ಬಹುರಾಷ್ಟ್ರೀಯ ತೈಲ ಮತ್ತು ಅನಿಲ ಕಂಪೆನಿ ಬಿ.ಪಿಯ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಘಟನೆ ಬುಧವಾರ ನಡೆದಿದೆ.

ಗ್ರೀನ್ ಪೀಸ್ ಸಂಸ್ಥೆಯ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇಂಟ್ ಜೇಮ್ಸ್‌ ಸ್ಕ್ವೇರ್‌ನಲ್ಲಿರುವ ಬಿ.ಪಿಯ ಲಂಡನ್ ಕೇಂದ್ರ ಕಚೇರಿಯ ಮುಂದೆ ಸುಮಾರು 500 ಸೋಲಾರ್ ಪ್ಯಾನೆಲ್‌ಗಳನ್ನು ಇರಿಸುವ ಮೂಲಕ ಮುಖ್ಯ ಪ್ರವೇಶ ಭಾಗವನ್ನು ಮುಚ್ಚಲು ಪ್ರಯತ್ನಿಸಿದರು. ಬಿ.ಪಿಯ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಲೂನಿ ಕಚೇರಿ ಪ್ರವೇಶಿಸಿದ ಮೊದಲ ದಿನವೇ ಈ ಘಟನೆ ನಡೆದಿದೆ.

ಕೆಲವರು ರಸ್ತೆ ಮತ್ತು ಇತರೆ ಮಾರ್ಗಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಡ್ಡಲಾಗಿ ಹಿಡಿದು ಅಡಿಯಲ್ಲಿ ಕುಳಿತುಕೊಂಡರು. ಇನ್ನು ಕೆಲವರು ಬಿ.ಪಿ. ಲೋಗೋ ಇರುವ ತೈಲ ಬ್ಯಾರೆಲ್‌ಗಳನ್ನು ಕಟ್ಟಡದ ಆರು ಬಾಗಿಲುಗಳಿಗೆ ಅಡ್ಡ ಇರಿಸಿ ಸಿಬ್ಬಂದಿ ಒಳ ಪ್ರವೇಶಿಸದಂತೆ ತಡೆದರು. ಬಳಿಕ ಘೋಷಣೆಗಳನ್ನು ಕೂಗಿದರು. ಪೊಲೀಸರು ಒಂಬತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

 Greenpeace Climate Protest Blocks BP HQ On CEOs First Day

ಹವಾಮಾನ ವೈಪರೀತ್ಯ ಸಂಬಂಧ 2015ರ ಪ್ಯಾರಿಸ್ ಒಪ್ಪಂದಕ್ಕೆ ಬದ್ಧರಾಗುವಂತೆ ಹವಾಮಾನ ಹೋರಾಟಗಾರರು ಬಿ.ಪಿ. ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿ.ಪಿ. ಪ್ರಾಯೋಜಕತ್ವದ ಕಾರ್ಯಕ್ರಮಗಳಿಗೆ ತೆರಳಿ ಅಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಹೊಸ ಅನಿಲ ಮತ್ತು ತೈಲ ಯೋಜನೆಗೆ ಬಿ.ಪಿ. 71 ಬಿಲಿಯನ್ ಡಾಲರ್ ಹಣ ವಿನಿಯೋಗಿಸಲು ಚಿಂತನೆ ನಡೆಸಿದೆ. ಹೀಗೆ ಕಚ್ಚಾ ತೈಲಗಳನ್ನು ಉರಿಸುವ ಮೂಲಕ ನಾವು ತಾಪಮಾನ ಹೆಚ್ಚಿಸುತ್ತಿದ್ದೇವೆ. ಇಷ್ಟು ಹಣ ವಿನಿಯೋಗಿಸುವ ಕಂಪೆನಿಗೆ ತಾಪಮಾನ ತಗ್ಗಿಸುವ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+