ಕೊರೊನಾ ಜಾಗೃತಿ ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಸೋಂಕು

ಲಂಡನ್, ಮಾರ್ಚ್ 11: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ದೇಶದ ಸರ್ಕಾರಗಳು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಗತ್ಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹಾಗಿದ್ದರೂ ಸೋಂಕು ಮಾತ್ರ ಹರಡುತ್ತಲೇ ಹೋಗುತ್ತಿದೆ.

ದುರಂತ ಅಂದ್ರೆ, ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಈಗ ಕೊರೊನಾ ಸೋಂಕು ತಗುಲಿದೆ. ಹೌದು, ಇಂಗ್ಲೆಂಡ್ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ತನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಯುತ್ತಿದ್ದಂತೆ ತಮ್ಮದೇ ಮನೆಯಿಂದ ಹೊರಬರದೇ ಗೃಹಬಂಧನದಲ್ಲಿದ್ದಾರಂತೆ. ಕಳೆದ ಗುರುವಾರ ನಾಡಿನ್ ಡೋರಿಸ್ ಅವರಿಗೆ ರೋಗದ ಲಕ್ಷಣ ಪತ್ತೆಯಾಗಿತ್ತು. ತಕ್ಷಣ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ.

Coronavirus Attack To England Health Minister Nadine Dorries

ಅದೇ ದಿನ ಪ್ರಧಾನಮಂತ್ರಿ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ನಾಡಿನ್ ಭಾಗಿಯಾಗಿದ್ದರು. ಆದ್ದರಿಂದ ಆಕೆಯ ಬಳಿ ಸಂಪರ್ಕದಲ್ಲಿದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ನಾಡಿನ್ 'ಕೊರೊನಾ ರೋಗದಿಂದ ನಾನು ಬೇಗ ಗುಣಮುಖವಾಗಲಿ ಎಂದು ಶುಭಕೋರಿದ ಎಲ್ಲರಿಗೂ ಧನ್ಯವಾದ. ಎಲ್ಲವೂ ಒಳ್ಳೆಯದು ಆಗುತ್ತೆ. ಆದರೆ ನನ್ನ ಜೊತೆ ವಾಸವಿರುವ 84 ವರ್ಷದ ತಾಯಿ ಕುರಿತು ನನಗೆ ಚಿಂತೆಯಾಗಿದೆ. ಯಾಕಂದ್ರೆ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಅವರನ್ನು ವೈದ್ಯರು ಪರೀಕ್ಷೆ ಮಾಡಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ, ಸದಾ ಕೈಗಳನ್ನು ತೊಳೆದುಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಇದುವರೆಗೂ 383 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಇದರಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಜಗತ್ತಿನಾದ್ಯಂತ 1.21 ಲಕ್ಷ ಜನರಿಗೆ ಸೋಂಕು ತಗುಲಿದ್ದು, 4383 ಜನ ಪ್ರಾಣ ಕಳೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+