• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಷಿ ಸುನಕ್‌ಗೆ ಬೆಂಬಲ ನೀಡಬೇಡಿ ಎಂದ ಬೋರಿಸ್‌ ಜಾನ್ಸನ್‌

|
Google Oneindia Kannada News

ಬ್ರಿಟನ್‌ನಲ್ಲಿ ಪ್ರಧಾನಿ ಆಯ್ಕೆಯ ಚುನಾವಣಾ ಕಣ ಚುರುಕುಗೊಂಡಿದೆ. ಅಭ್ಯರ್ಥಿಯಾದ ರಿಷಿ ಸುನಕ್‌ ಅವರನ್ನು ಬಿಟ್ಟು ಯಾರನ್ನಾದರೂ ಬೆಂಬಲಿಸಿ ಎಂದು ಹಂಗಾಮಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಬೆಂಬಲಿಗರಿಗೆ ಸೂಚಿಸಿದ್ದಾರೆ. ಬೋರಿಸ್‌ ಜಾನ್ಸನ್ ವೈಯಕ್ತಿಕವಾಗಿ ತಮ್ಮ ಪಕ್ಷದವರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ಕಾರಣ ರಿಷಿ ಸುನಕ್ ಎಂದು ದೂಷಿಸುತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿ ರಾಜೀನಾಮೆಯ ಪರ್ವವೇ ಮುಂದುವರೆದಿದ್ದರಿಂದ ಜುಲೈ 7ರಂದು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ಜಾನ್ಸನ್‌ ರಾಜೀನಾಮೆ ನೀಡಿದ್ದರು. ತಾನು ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ ಅಥವಾ ಚುನಾವಣೆ ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಜಾನ್ಸನ್, ಸೋಲನುಭವಿಸಿರುವ ಅಭ್ಯರ್ಥಿಗಳೊಂದಿಗೆ ಸಂಭಾಷಣೆ ನಡೆಸಿ, ರಿಷಿ ಸುನಕ್‌ ಪ್ರಧಾನಿಯಾಗಬಾರದು ಎಂದು ಒತ್ತಾಯಿಸಿರುವುದು ಆಶ್ಚರ್ಯವಾಗಿದೆ.

ಇಂಗ್ಲೆಂಡ್‌ ODI, T20 ತಂಡಕ್ಕೆ ಜಾಸ್‌ ಬಟ್ಲರ್ ನಾಯಕ ಇಂಗ್ಲೆಂಡ್‌ ODI, T20 ತಂಡಕ್ಕೆ ಜಾಸ್‌ ಬಟ್ಲರ್ ನಾಯಕ

ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ. ಜೂನಿಯರ್ ಟ್ರೇಡ್ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ಆದರೂ ಪರವಾಗಿಲ್ಲ. ಅದರೆ ರಿಷಿ ಸುನಕ್ ಮಾತ್ರ ತಮ್ಮ ಉತ್ತರಾಧಿಕಾರಿಯಾಗಬಾರದು. ಇಡೀ ನಂ.10 (ಡೌನಿಂಗ್ ಸ್ಟ್ರೀಟ್) ರಿಷಿ ಅವರನ್ನು ಇಷ್ಟಪಡುವುದಿಲ್ಲ. ಬೋರಿಸ್ ಕೆಳಗಿಳಿಯುವುದಕ್ಕೆ ಸಾಜ್ (ಸಾಜಿದ್ ಜಾವೆದ್) ಅವರನ್ನು ದೂಷಿಸುವುದಿಲ್ಲ. ರಿಷಿಯನ್ನು ದೂಷಿಸುತ್ತಾರೆ. ಅವರು ಇದನ್ನು ತಿಂಗಳುಗಳಿಂದ ಯೋಜನೆ ರೂಪಿಸುತ್ತಿದ್ದಾರೆ ಎಂದು ಬೋರಿಸ್‌ ಹೇಳಿದ್ದಾರೆ.


ಸಂಸತ್ತಿನ ಟೋರಿ ಸದಸ್ಯರ ಮೊದಲ ಎರಡು ಸುತ್ತಿನ ಮತದಾನದಲ್ಲಿ ವಿಜೇತರಾದ ಸುನಕ್, ವಾರಾಂತ್ಯದಲ್ಲಿ ಉಳಿದ ಎದುರಾಳಿಗಳೊಂದಿಗೆ ದೂರದರ್ಶನದ ಚರ್ಚೆಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಜೂನಿಯರ್ ಟ್ರೇಡ್ ಸಚಿವ ಪೆನ್ನಿ ಮೊರ್ಡಾಂಟ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರ ಹೆಸರನ್ನ ಮುನ್ನಲೆಗೆ ತಂದಿದ್ದಾರೆ. ಜಾನ್ಸನ್ ಮಿತ್ರರೊಬ್ಬರು ರಿಷಿಯನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಗೆಲ್ಲಿಸಿ ಎಂಬ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.
Boris Johnson said not to support Rishi Sunak for the post of Prime Minister

ಇನ್ನೂ ರಿಷಿ ಸುನಕ್‌ ಬೆಂಬಲಿಗ ಟೋರಿ ಬ್ಯಾಕ್‌ಬೆಂಚ್ ಸಂಸದ ರಿಚರ್ಡ್ ಹೋಲ್ಡನ್ ಮಾತನಾಡಿ, ಜಾನ್ಸನ್‌ ಅವರ ಈ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬ್ರಿಟನ್‌ನಲ್ಲಿ ಬೋರಿಸ್‌ ಜಾನ್ಸನ್ ಆಡಳಿತ ವಿರೋಧಿಸಿ ಕನ್ಸರ್‌ವೇಟಿವ್‌ ಪಕ್ಷದ ಸಚಿವೆಲ್ಲರೂ ರಾಜೀನಾಮೆ ನೀಡಿದ್ದರು. ಜಾನ್ಸನ್‌ ಎಷ್ಟೇ ಪ್ರಯತ್ನಿಸಿದರೂ ಸರ್ಕಾರವನ್ನ ಉಳಿಸಿಕೊಳ್ಳಲು ಆಗದೇ ತಾವು ಕೂಡ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಇದೀಗ ಅವರು ಹಂಗಾಮಿ ಪ್ರಧಾನಿಯಾಗಿ ಆಡಳಿತ ನಿಭಾಯಿಸುತ್ತಿದ್ದಾರೆ. ಈಗಾಗಲೇ ಪ್ರಧಾನಿ ಚುನಾವಣೆಯ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕೂಡ ಅಭ್ಯರ್ಥಿಯಾಗಿದ್ದಾರೆ. ಆದರೆ ಸುನಕ್‌ ಅವರನ್ನ ಬೆಂಬಲಿಸದಂತೆ ಸೋತವರ ಬಳಿ ಬೋರಿಸ್‌ ಜಾನ್ಸನ್‌ ಕೇಳಿಕೊಂಡಿರುವುದು, ಆಶ್ಚರ್ಯದ ಸಂಗತಿಯಾಗಿದೆ.

English summary
In Britain, the election campaign for the selection of the Prime Minister has intensified. Acting Prime Minister Boris Johnson has advised his supporters to support anyone but not to Rishi Sunak.Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X