ಬೆಂಗಳೂರು ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೊಸ ಅತಿಥಿ ಆಗಮನ, 'ದಶ್ಯಾ'ಗೆ ಮರಿ ಹಿಪ್ಪೋ ಜನನ, ಪ್ರವಾಸಿಗರಿಗೆ ಯಾವಾಗ ವೀಕ್ಷಣೆ?

ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಹೊಸ ಅತಿಥಿಯ ಆಗಮನವಾಗಿದ್ದು, ಇಡೀ ಉದ್ಯಾನದಲ್ಲಿ ಸಂತಸ ಮನೆ ಮಾಡಿದೆ. ಉದ್ಯಾನದ ಸಿಬ್ಬಂದಿಗೆ ನೂತನ ಹುರುಪು ಬಂದಂತಾಗಿದೆ. 'ದಶ್ಯಾ' ಹೆಸರಿನ ಹಿಪೋ ಮರಿ ಹಾಕಿದ್ದಾಳೆ, ಬಾಣಂತಿಯನ್ನು ನೋಡಿಕೊಂಡಂತೆ ಅದನ್ನು ಪ್ರತ್ಯೇಕವಾಗಿಟ್ಟು ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ತಾಯಿ ಮತ್ತು ಮರಿಯನ್ನು ಐಸೋಲೇಟ್ ಮಾಡಿ ಆರೈಕೆ ಮಾಡಲಾಗುತ್ತಿದೆ. ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ಈಗಲೇ ಪುಟಾಣಿ ಹಿಪೋವನ್ನು ವೀಕ್ಷಿಸಬಹುದಾ ಅಥವಾ ಯಾವಾಗ ನೋಡಬಹುದು? ಎಂಬ ಪ್ರಶ್ನೆಗೆ ಉತ್ತರ ಮುಂದಿದೆ.

ಉದ್ಯಾನದಲ್ಲಿ ಕೆಲಸ ಮಾಡುವ ನಮಗೆ ನಮ್ಮ ಮನೆಯಲ್ಲಿ ಪಾಪು ಆದಾಗ ಉಂಟಾಗುವಷ್ಟು ಖುಷಿ ಈಗ ಆಗುತ್ತಿದೆ. 'ದಶ್ಯಾ' ತಾಯಿ ಹಿಪೋ ಮತ್ತು ನಾಗ 'ತಂದೆ' ಹಿಪೋವಿಗೆ ಮೂರನೇ ಮರಿ ಜನಿಸಿದೆ. ಮರಿ ಗಂಡಾ? ಹೆಣ್ಣಾ? ಎಂದು ಪರಿಶೀಲಿಸಲು ಸಹ ಹೋಗಿಲ್ಲ. ಕಾರಣ ಈ ಸಂದರ್ಭದಲ್ಲಿ ತಾಯಿ, ಮುಗೆ ಹೆಚ್ಚಿನ ಒತ್ತಡ ಆಗದಂತೆ ಹೆಚ್ಚು ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾಗಿದೆ. ನುರಿತ ಹಿಪೋ ತಜ್ಞರು, ಸಿಬ್ಬಂದಿ ಹಾಗೂ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸ್ವಯಂ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಮೂಲಕ ಐಸೋಲೆಷನ್ ಮಾಡಿ ಆರೈಕೆ ಮಾಡಲಾಗುತ್ತಿದೆ.

Bannerghatta Biological Park

ಈ ಬಗ್ಗೆ ಮಾಹಿತಿ ಹಂಚಿಕೊಂಡ ಉದ್ಯಾನದ ಉಪ ನಿರ್ದೇಶಕ, ಪ್ರಾಣಿ ತಜ್ಞ ಡಾ.ಪ್ರಯಾಗ್, ಎಚ್‌.ಎಸ್. ಅವರು ಸಾರ್ವಜನಿಕರಿಗೆ ಕಾಣದಂತೆ ತಾಯಿ, ಮರಿಯನ್ನು ನೋಡಿಕೊಳ್ಳಲಾಗುತ್ತಿದೆ. ಯಾರಿಂದಲೂ ಮರಿ ಮತ್ತು ತಾಯಿಗೆ ಅನಗತ್ಯ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಏಕೆಂದರೆ ಹಿಪ್ಪೋ ಮರಿ ಹಾಕಿದಾಗ ಕೆಲವು ಬಾರಿ ವಿನಾಯಕಾರಣ ತೊಂದರೆ ಮಾಡಿದರೆ ತಾಯಿನೇ ಮಗುವನ್ನು ತಿಂದಿರುವ ಉದಾಹರಣೆಗಳು ಇರುವ ಕಾರಣ ಹೆಚ್ಚಿನ ಜಾಗ್ರತೆ ವಹಿಸಿದ್ದೇವೆ. ಅಗತ್ಯವಿದ್ಯಾಗ ಮಾತ್ರವೇ ವೈದ್ಯರು, ಸಿಬ್ಬಂದಿ ಹೋಗುತ್ತಾರೆ, ಪರೀಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?
ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?

24/7 ಕ್ಯಾಮೆರಾ ಮೂಲಕ ವಾಚಿಂಗ್

ದಶ್ಯ ಮರಿ ಹಾಕುತ್ತಿದ್ದಂತೆ ತಂದೆ ಹಿಪೋ 'ನಾಗ'ನನ್ನು ಪ್ರತ್ಯೆಕವಾಗಿ ಇಡಲಾಗಿದೆ. ಇದರಿಂದ ಅಮ್ಮ ಮತ್ತು ಮರಿ ಎರಡರ ಮಧ್ಯೆ ಪರಸ್ಪರ ಆತ್ಮೀಯತೆ, ನಂಬಿಕೆ ಹೆಚ್ಚಾಗಲು ಅನುಕೂಲವಾಗುತ್ತದೆ. ಆದಷ್ಟು ದೂರದಿಂದ ಗಮನಿಸುವುದು, ಊಟ ಕೊಡುವಾಗ, ಆರೋಗ್ಯ ತಪಾಸಣೆ ವೇಳೆ ಮಾತ್ರವೇ ಅವುಗಳ ಹತ್ತಿರ ಹೋಗಲಾಗುತ್ತಿದೆ. ನಿತ್ಯವು ತಾಯಿ, ಮರಿಯ ಆರೋಗ್ಯ, ಯೋಗ ಕ್ಷೇಮದ ಅಪ್ಡೇಟ್ ಪಡೆಯಲಾಗುತ್ತದೆ. ಇದಕ್ಕಾಗಿ 24/7 ಇಬ್ಬರು ಕೀಪರ್‍‌ಗಳನ್ನು ವೀಕ್ಷಣೆಗೆ ನಿಯೋಜಿಸಲಾಗಿದ್ದು, ಅವರು ಕ್ಯಾಮೆರಾ ಮೂಲಕ ನಿರಂತರವಾಗಿ ಗಮನಿಸುತ್ತಿರುತ್ತಾರೆ ಎಂದು ಹೇಳಿದರು.

ಡಯೇಟರಿ ಫುಡ್ ವಿತರಣೆ, ತೂಕ ಏರಿಕೆ

ಮೇ 27ರಂದು ಮರಿ ಹಾಕಿದ ಬಳಿಕ ದೂರದಿಂದ ಫೋಟೋ/ವಿಡಿಯೋಗಳನ್ನು ಸೆರೆ ಹಿಡಿದು ಮೇಲಾಧಿಕಾರಿಗಳಿಗೆ ಕಳುಹಿಸಿ ಮಾಹಿತಿ ನೀಡಿದ್ದೇವೆ. ಇತರ ಪ್ರಾಣಿಗಳಿಗಿಂತಲೂ ಆದ್ಯತೆಯ ಮೇರೆಗೆ 'ದಶ್ಯಾ'ಗೆ ಉತ್ತಮ ಆಹಾರ ನೀಡಲಾಗುತ್ತಿದೆ. ಆಯಾ ಸಮಯಕ್ಕೆ ಬೂಸಾ, ತವಡು, ಕ್ಯಾರೆಟ್, ಕೋಸು ಸೇರಿದಂತೆ ಅದಕ್ಕೆ ಇಷ್ಟವಾದ ಇನ್ನಿತರ ಆಹಾರಗಳನ್ನು ನೀಡಲಾಗುತ್ತಿದೆ. ಪ್ರಾಣಿ ಡಯಟ್ ಫುಡ್ ಅನ್ನು ಹೆಚ್ಚಿಗೆ ಕೊಡಲಾಗುತ್ತಿದೆ. ಹೀಗಾಗಿ ತಾಯಿಯ ದೇಹದ ತೂಕವು ಆರೋಗ್ಯಕರ ರೀತಿಯಲ್ಲಿ ಹೆಚ್ಚಾಗುತ್ತಿದೆ ಎಂದು ಹತ್ತು ವರ್ಷದ ಸಿಬ್ಬಂದಿ ವೆಂಕಟೇಶ್ ವಿವರಿಸಿದರು.

21 ದಿನ ಬಳಿಕ ಆರೈಕೆಯಲ್ಲಿ ಪ್ರಮುಖ ಬದಲಾವಣೆ?

ಮುಂದಿನ 21ದಿನಗಳವರೆಗೂ ಒತ್ತು ಕೊಟ್ಟು ಮೇಲ್ವಿಚಾರಣೆ ಮಾಡಲಿದ್ದೇವೆ. 21 ದಿನಗಳ ಬಳಿಕ ತಾಯಿಯ ಹಾಲು ಬಿಟ್ಟು ಮರಿ ಸ್ವಂತವಾಗಿ ಆಹಾರ ತಿನ್ನಲು ಪ್ರಾರಂಭಿಸುತ್ತೋ ಆಗ ಅಗತ್ಯತೆ ನೋಡಿಕೊಂಡು ಆರೈಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಿದ್ದೇವೆ ಎಂದು ಈ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಹಿಪೋ ನೋಡಿಕೊಂಡಿದ್ದ ಬ್ಬಂದಿಯೊಬ್ಬರು ತಿಳಿಸಿದರು.

ಪ್ರವಾಸಿಗರಿಂದ ದಶ್ಯ 'ಮರಿ' ವೀಕ್ಷಣೆಗೆ ಯಾವಾಗ?

ತಾಯಿ, ಮರಿ ಆಕ್ಟಿವ್ ಇದೆ. ಸದ್ಯ ಮರಿಯ ಆರೈಕೆಗೆ ಆದ್ಯತೆ ನೀಡುತ್ತಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ತಾಯಿ ಮತ್ತು ಮರಿಯನ್ನು ಒಟ್ಟಿಗೆ ನೋಡಲು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರಾಣಿ ಜೀವಶಾಸ್ತ್ರಜ್ಞೆ ಐಶ್ವರ್ಯ ಅವರು ಃಹೇಳಿದರು. ಸದ್ಯ ತಾಯಿ, ಮರಿಯ ಸುಂದರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+