ಬಾಳೆಹಣ್ಣು ತಿಂದ್ರೆ ಗ್ಯಾಸ್ಟ್ರಿಕ್ ಆಗುತ್ತಾ? ಯಾರು ತಿನ್ನಬಾರದು?

ಬಾಳೆಹಣ್ಣು ನಮ್ಮ ದೈನಂದಿನ ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಪೌಷ್ಟಿಕ ಹಣ್ಣಾಗಿದೆ. ಇದರಲ್ಲಿ ವಿಟಮಿನ್ B6, ವಿಟಮಿನ್ C, ಪೊಟ್ಯಾಶಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್ ಹಾಗೂ ಫೈಬರ್ ಹೆರಳವಾಗಿದ್ದು, ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತದೆ. ಸಕ್ಕರೆ ಅಂಶ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿರುವ ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಹಲವು ಆರೋಗ್ಯಕರವಾದ ಪ್ರಯೋಜನಗಳನ್ನು ದೇಹಕ್ಕೆ ದೊರೆಯುತ್ತದೆ.

ವೈದ್ಯರ ಪ್ರಕಾರ, ಬಾಳೆಹಣ್ಣನ್ನು ಮಿತವಾಗಿ ಸೇವಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಇದರಲ್ಲಿರುವ ಫೈಬರ್ ಮತ್ತು ಪೆಕ್ಟಿನ್ ಅಧಿಕ ಪ್ರಮಾಣದಲ್ಲಿರುತ್ತದೆ ಇದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕರುಳಿನಲ್ಲಿರುವ ಪ್ರೋಬಯಾಟಿಕ್ಸ್ ಬೆಳವಣಿಗೆಗೂ ನೆರವಾಗುತ್ತದೆ.

Banana Benefits and Side Effects

ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ನಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೃದಯಾಘಾತ ಮತ್ತು ಪಾರ್ಶ್ವವಾಯು (ಸ್ಟ್ರೋಕ್) ಅಪಾಯವನ್ನು ಕಡಿಮೆ ಮಾಡುವಲ್ಲಿಯೂ ಇದು ನೆರವಾಗುತ್ತದೆ. ಅಲ್ಲದೆ, ಟ್ರಿಪ್ಟೋಫಾನ್ ಎಂಬ ಅಮಿನೋ ಆಮ್ಲವು ದೇಹದಲ್ಲಿ ಸೆರೋಟೋನಿನ್ ಉತ್ಪತ್ತಿಗೆ ಸಹಾಯ ಮಾಡುವುದರಿಂದ ಮನಸ್ಥಿತಿ ಉತ್ತಮವಾಗಿರಲು ಮತ್ತು ಒತ್ತಡ ಕಡಿಮೆಯಾಗಲು ಸಹಕಾರಿ ಎಂದು ತಜ್ಞರು ಹೇಳುತ್ತಾರೆ.

ಫ್ರಿಜ್‌ನಲ್ಲಿ ಮೊಟ್ಟೆ ಎಷ್ಟು ದಿನ ಇಡಬಹುದು? ಬಹುತೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ
ಫ್ರಿಜ್‌ನಲ್ಲಿ ಮೊಟ್ಟೆ ಎಷ್ಟು ದಿನ ಇಡಬಹುದು? ಬಹುತೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ

ಬಾಳೆಹಣ್ಣು ಮಿತವಾಗಿ ತಿಂದರೆ ಹಲವು ಪ್ರಯೋಜನ

ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ನಮ್ಮ ದೇಹದ ನರಗಳು ಮತ್ತು ಸ್ನಾಯುಗಳ ಸರಿಯಾದ ಕಾರ್ಯನಿರ್ವಣೆಗೆ ಮಾಡಿ ನಮ್ಮ ಆರೋಗ್ಯ ಕಾಪಾಡಿ ಸ್ನಾಯು ಸೆಳೆತ ಮತ್ತು ದೈಹಿಕ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತವೆ. ಬಾಳೆಹಣ್ಣಿನಲ್ಲಿ ಕೊಬ್ಬಿನ ಅಂಶ ಬಹಳ ಕಡಿಮೆ ಇರುವುದರಿಂದ ಆರೋಗ್ಯಕರ ಆಹಾರ ಎಂದು ವೈದ್ಯರು ಹೇಳುತ್ತಾರೆ.

ಯಾರಿಗೆ ಎಚ್ಚರಿಕೆ ಅಗತ್ಯ?

ಆದರೆ ಬಾಳೆಹಣ್ಣನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಪೊಟ್ಯಾಶಿಯಂ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸುವುದು ಸೂಕ್ತ.

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಬೇಕೇ? ಈ 7 ಆಹಾರಗಳು ದೇಹಕ್ಕೆ ತಂಪು ನೀಡುತ್ತವೆ
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಬೇಕೇ? ಈ 7 ಆಹಾರಗಳು ದೇಹಕ್ಕೆ ತಂಪು ನೀಡುತ್ತವೆ

ಸಾಮಾನ್ಯವಾಗಿ ಬಾಳೆಹಣ್ಣು ಗ್ಯಾಸ್ಟ್ರಿಕ್‌ಗೆ ಕಾರಣವಾಗುವುದಿಲ್ಲ. ಬದಲಿಗೆ ಹೊಟ್ಟೆಯ ಒಳಪದರವನ್ನು ರಕ್ಷಿಸಿ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ, ವಿಶೇಷವಾಗಿ ಜೀರ್ಣಕ್ರಿಯೆ ನಿಧಾನವಾಗಿರುವವರಿಗೆ ಅಥವಾ ಇರಿಟೇಬಲ್ ಬವಲ್ ಸಿಂಡ್ರೋಮ್‌ (IBS) ಸಮಸ್ಯೆ ಇರುವವರಿಗೆ ಬಾಳೆಹಣ್ಣು ಸೇವನೆಯ ನಂತರ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಸ್ವಸ್ಥತೆ ಕಾಣಿಸಬಹುದು. ಹಾಗೆಯೇ ಮೂತ್ರಪಿಂಡದ ಕಾಯಿಲೆ ಇರುವವರು, ರಕ್ತದಲ್ಲಿನ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿರುವವರು ಹಾಗೂ ವೈದ್ಯರು ಪೊಟ್ಯಾಶಿಯಂ ನಿಯಂತ್ರಿಸಲು ಸೂಚಿಸಿರುವವರು ಬಾಳೆಹಣ್ಣನ್ನು ಮಿತವಾಗಿ ಸೇವಿಸಬೇಕು.

ಮಧುಮೇಹ ಇರುವವರು ಕೂಡ ಬಾಳೆಹಣ್ಣು ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಾಳೆಹಣ್ಣಿನಲ್ಲಿರುವ ಸಹಜ ಸಕ್ಕರೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವವರು ಸಂಪೂರ್ಣವಾಗಿ ಹಣ್ಣಾದ ಬಾಳೆಹಣ್ಣಿನ ಬದಲು ಸ್ವಲ್ಪ ದೋರೆ ಬಾಳೆಹಣ್ಣನ್ನು ಬೆಳಿಗ್ಗೆ ಅರ್ಧ ಮತ್ತು ಸಂಜೆ ಅರ್ಧದಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಾಳೆಹಣ್ಣು ಆರೋಗ್ಯಕರ ಹಣ್ಣಾಗಿದ್ದರೂ ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಸೇವನೆ ಮಾಡಿದರೆ ಇದರ ಪೌಷ್ಟಿಕ ಲಾಭಗಳನ್ನು ಸುಲಭವಾಗಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+