Easy Bread Halwa Recipe: ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬ್ರೆಡ್ ಹಲ್ವಾ ರೆಸಿಪಿ
ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುವ ಸಿಹಿ ಪದಾರ್ಥಗಳಲ್ಲಿ ಹಲ್ವಾ ಮೊದಲ ಸ್ಥಾನದಲ್ಲಿದೆ. ಸಮಾನ್ಯವಾಗಿ ಹಲ್ವ ಹಲವಾರು ರೀತಿಯಲ್ಲಿ ತಯಾರಿಸಲಾಗುತ್ತದೆ ಆದರೆ ಬ್ರೆಡ್‌ನಿಂದ ತಯಾರಿಸುವ ಈ ಬ್ರೆಡ್ ಹಲ್ವಾ ತನ್ನದೆ ಅದ ವಿಶಿಷ್ಟ ರುಚಿಯಿಂದ ಎಲ್ಲರ ಗಮನ ಸೆಳೆದಿದೆ. ಇದರ ವಿಶೇಷವೆಂದರೆ ಇದನ್ನು ಸುಲಭವಾಗಿ ಮನೆಯಲ್ಲೆ ನಾವು ತಯಾರಿಸಬಹುದು. ಬೇಗ ಮಾಡುವುದಲ್ಲದೇ, ಎಲ್ಲರಿಗೂ ಇಷ್ಟವೂ ಆಗುತ್ತದೆ.
ಬೇಕಾಗುವ ಪದಾರ್ಥಗಳು:
ಬೇಕಾಗುವಷ್ಟು ಬ್ರೆಡ್ ಸ್ಲೈಸ್‌ಗಳು
ತುಪ್ಪ
ಹಾಲು
ಸಕ್ಕರೆ
ಕನ್‌ಡೆನ್ಸ್ಡ್ ಮಿಲ್ಕ್ (ಗಟ್ಟಿ ಹಾಲು)
ಏಲಕ್ಕಿ ಪುಡಿ
ಕೇಸರಿ
ಗೋಡಂಬಿ, ಬಾದಾಮಿ ಮತ್ತು ಪಿಸ್ತಾ
ಒಣ ದ್ರಾಕ್ಷಿ
ಹಾಲಿನ ಪುಡಿ (ಮಿಲ್ಕ್ ಪೌಡರ್)
ಚಿಟಿಕೆ ಉಪ್ಪು

ತಯಾರಿಸುವ ವಿಧಾನ:
ಮೊದಲು ಬ್ರೆಡ್ ತುಂಡುಗಳ ಅಂಚನ್ನು ತೆಗೆಯಬೇಕು, ನಂತರ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೂ ಹುರಿಯಬೇಕು. ನಂತರ ಅವುಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿರಿಸಿ.
ಅದೇ ಪಾತ್ರೆಯಲ್ಲಿ ಉಳಿದ ತುಪ್ಪ ಹಾಕಿ ಬ್ರೆಡ್ ತುಂಡನ್ನು ಹಾಕಿ ಸಣ್ಣ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಹಾಲು ಸೇರಿಸಿ ನಿಧಾನವಾಗಿ ಕಲಸುತ್ತಾ ಬ್ರೆಡ್ ಹಾಲು ಹೀರಿಕೊಳ್ಳುವವರೆಗೆ ಬೇಯಿಸಬೇಕು.
ಇದಕ್ಕೆ ಸಕ್ಕರೆ, ಗಟ್ಟಿಯಾದ ಸಕ್ಕರೆ ಮಿಶ್ರಿತ ಹಾಲು, ಏಲಕ್ಕಿ ಪುಡಿ ಮತ್ತು ಕೇಸರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು. ಕೊನೆಯಲ್ಲಿ ಹುರಿದ ಡ್ರೈ ಫ್ರೂಟ್ಸ್, ಹಾಲಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಎರಡು ನಿಮಿಷ ಚೆನ್ನಾಗಿ ಮಿಕ್ಸ್ ಆಗಲು ಬಿಟ್ಟರೆ, ರುಚಿ ರುಚಿಯಾದ ಬ್ರೆಡ್ ಹಲ್ವಾ ಸಿದ್ಧವಾಗುತ್ತದೆ.
ಈ ಬ್ರೆಡ್ ಹಲ್ವಾವನ್ನು ವಿಶೇಷವಾಗಿ ಹಬ್ಬದ ದಿನಗಳಲ್ಲಿ ಅಥವಾ ಸಿಹಿ ತಿನ್ನಬೇಕು ಅಂತ ಅನ್ನಿಸಿದಾಗ ತಯಾರಿಸಬಹುದು. ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಅತಿಥಿಗಳಿಗೂ ಉತ್ತಮ ಸಿಹಿ ಆಯ್ಕೆ. ಮನೆಯಲ್ಲಿರುವ ಸರಳ ಪದಾರ್ಥಗಳಿಂದಲೇ ರುಚಿಕರವಾದ ಡೆಸರ್ಟ್ ತಯಾರಿಸಬಹುದಾದ ಕಾರಣ, ಇದು ಎಲ್ಲರಿಗೂ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಈ ಹಲ್ವಾವನ್ನು ಬಿಸಿ ಬಿಸಿಯಾಗಿಯೂ ಅಥವಾ ತಣ್ಣಗಾದ ಮೇಲೆ ಬಡಿಸಬಹುದು.. ಮೇಲಿಂದ ಸ್ವಲ್ಪ ಕತ್ತರಿಸಿದ ಡ್ರೈ ಫ್ರೂಟ್ಸ್ ಅಥವಾ ಕೇಸರಿ ಹಾಕಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಮಕ್ಕಳಿಗೆ ಲಂಚ್ ಬಾಕ್ಸ್ ಡೆಸರ್ಟ್ ಆಗಿಯೂ ನೀಡಬಹುದು. ಒಮ್ಮೆ ಪ್ರಯತ್ನಿಸಿದರೆ ಮತ್ತೆ ಮತ್ತೆ ತಯಾರಿಸಬೇಕೆನಿಸುವಷ್ಟು ರುಚಿಕರವಾದ ಸಿಹಿ ಇದು.
ಯಾರೋ ಮನೆಗೆ ಅತಿಥಿಗಳು ಹೇಳದೇ ಕೇಳದೇ ಬಂದಾಗ, ನಾಲ್ಕೇ ನಾಲ್ಕು ಬ್ರೆಡ್ ಇದ್ದರೂ ಈ ಹಲ್ವಾ ಮಾಡಿ ಬಡಿಸಬಹುದು. ವಿಭಿನ್ನ ಟೇಸ್ಟ್ ಇರೋ ಈ ಹಲ್ವಾಗೆ ಡ್ರೈ ಫ್ರೂಟ್ಸ್ ಸೇರಿಸುವುದರಿಂದ ಸಹಜವಾಗಿ ರುಚಿ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಯಾವುದೇ ಸ್ವೀಟ್ಸ್ ಆಗಲಿ, ಅದಕ್ಕೆ ಒಣ್ಣ ಹಣ್ಣುಗಳನ್ನು ಸೇರಿಸಿದಾಗ ಅದು ಕೊಡುವ ರುಚಿಯೇ ಬೇರೆ. ಸ್ವಲ್ಪ ಕೇರ್‌ಫುಲ್ ಮಾಡಿದರೆ ರುಚಿ ಹಾಳಾಗುವ ಸಾಧ್ಯತೆಯೇ ಇಲ್ಲ. ಯಾವಾಗ ಟೈಮ್ ಸಿಗುತ್ತೆ ಆಗ ಒಮ್ಮೆ ಮಾಡಿ ನೋಡಿ. ರುಚಿ ಇಷ್ಟವಾಗದಿದ್ದರೆ ಕೇಳಿ.
ಹೀಗೆ ವಿಭಿನ್ನ ಅಡುಗೆ ಅಥವಾ ಸ್ವೀಟ್ ರೆಸಿಪಿ ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ ನಮಗೆ ತಿಳಿಸಿ, ನಾವು ಸುದ್ದಿ ರೂಪದಲ್ಲಿ ಪ್ರಕಟಿಸುತ್ತೇವೆ.














Click it and Unblock the Notifications