KEA Recruitmnet: ಕೊನೇ ಕ್ಷಣದಲ್ಲಿ ತೊಂದರೆ ಬೇಡ, ಪೊಲೀಸ್ ಹುದ್ದೆ ಆಕಾಂಕ್ಷಿಗಳು ಕೆಇಎ ಗೈಡ್‌ಲೈನ್ಸ್ ಗಮನಿಸಿ

ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಪರಿಣಾಮಕಾರಿಯಾಗಿ ಸುಧಾರಿಸುವ ನಿಟ್ಟಿನಲ್ಲಿ ಖಾಲಿ ಇರುವ ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯ ಬರೋಬ್ಬರಿ 3991 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯನ್ನು ನಿರ್ವಹಿಸಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಭ್ಯರ್ಥಿಗಳ ಅಗತ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಕುರಿತು ಮಹತ್ವದ ಸೂಚನೆ ನೀಡಿದ್ದಾರೆ.

ನಾಳೆಯಿಂದಲೇ ಹುದ್ದೆ ಭರ್ತಿ ಪ್ರಕ್ರಿಯೆ ಶುರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಇದೇ ಜೂನ್ 10ರಿಂದ ಆರಂಭವಾಗಲಿದೆ. ಕನಿಷ್ಠ SSLC ಮತ್ತು PUC ಉತ್ತೀರ್ಣವಾದವರಿಗೂ ಸರ್ಕಾರಿ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

KEA

ಭರ್ತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ ತಮಗೆ ಅನ್ವಯವಾಗುವ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ-ಸಿ ಜಾತಿ ಪ್ರಮಾಣ ಪತ್ರಗಳ RD ಸಂಖ್ಯೆ ನಮೂದಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಪ್ರಾದಿಕಾರದ ಸೂಚನೆ ಪಾಲಿಸದೇ, ಅಗತ್ಯ ದಾಖಲೆಗಳನ್ನು ಮರೆತು ಕೊನೆ ಕ್ಷಣದಲ್ಲಿ ತೊಂದರೆ ಅನುಭವಿಸುವುದು ಬೇಡ ಎಂದಿದ್ದಾರೆ.

Recruitment: 3995 ಪೊಲೀಸ್ ಹುದ್ದೆಗಳ ಭರ್ತಿ ಆರಂಭ, ನೇಮಕಾತಿ ಬಗ್ಗೆ ಪ್ರಿಯಾಂಕ್ ಖರ್ಗೆ ಅಪ್ಡೇಟ್
Recruitment: 3995 ಪೊಲೀಸ್ ಹುದ್ದೆಗಳ ಭರ್ತಿ ಆರಂಭ, ನೇಮಕಾತಿ ಬಗ್ಗೆ ಪ್ರಿಯಾಂಕ್ ಖರ್ಗೆ ಅಪ್ಡೇಟ್

ಯಾರೆಲ್ಲ ಅಭ್ಯರ್ಥಿಗಳು ಗ್ರಾಮೀಣ, ಕನ್ನಡ ಮಾಧ್ಯಮ ವ್ಯಾಸಂಗ ಓದಿಸಿದ್ದು, ನೇಮಕಾತಿ ವೇಳೆ ಅದೆಲ್ಲನ್ನು ಕ್ಲೇಮ್ ಮಾಡುವವರು ಅಗತ್ಯ ನಮೂನೆಗಳಲ್ಲಿ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಿರುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬಯಸಿದರೆ ಕಡ್ಡಾಯವಾಗಿ ಒಬಿಸಿ ಯವರು ನಾನ್ ಕ್ರೀಮಿ ಲೇಯರ್ (ಎನ್ ಸಿ ಎಲ್) ಸರ್ಟಿಫಿಕೇಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಂಬಂಧಿಸಿದ ಕೋಟಾದಡಿ ಅರ್ಜಿ ಭರ್ತಿ ಮಾಡಿ

ಇನ್ನೂ ಪೊಲೀಸ್ ನೇಮಕಾತಿಯ ಅರ್ಜಿಗಳ ಜೊತೆಗೆ ಅಪ್ ಲೋಡ್ ಮಾಡುವ ನಿಮ್ಮ ಭಾವಚಿತ್ರ ಮತ್ತು ಸಹಿ 50 ಕೆಜಿ ಒಳಗಡೆ ಇರಬೇಕು. ಒಟ್ಟು ಹುದ್ದೆಗಳಲ್ಲಿ 596 ಹುದ್ದೆಗಳು ಹೈದರಾಬಾದ್ ಕರ್ನಾಟಕ, 3,395 ಹುದ್ದೆಗಳು ನಾನ್ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಿಮೀತವಾಗಿದೆ. ನಿಮಗೆ ಸಂಬಂಧಿಸಿದ ಕೋಟಾದಡಿ ಅರ್ಜಿಯನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಜುಲೈ 3 ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://cetonline.karnataka.gov.in/kea/ಗೆ ಭೇಟಿ ನೀಡಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೂ ಸರ್ಕಾರಿ ನೌಕರರಿಗೆ ಅರ್ಜಿ ಸಲ್ಲಿಸಲು ಅವಕಾಸ ದೊರೆತ ಕಾರಣ ಈ ನೇಮಕಾತಿ ಮಹತ್ವ ಪಡೆದಿದೆ. ಈ ಹಿಂದಿನ ಕೆಲವು ನೇಮಕಾತಿ, ಪರೀಕ್ಷೆಗಳಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಕೃಷಿ, ಪೊಲೀಸ್ ನೇಮಕಾತಿಯನ್ನು ಕರ್ನಾಟಕ ಪರಿಕ್ಷಾ ಪ್ರಾಧಿಕಾರವು ವತಿಯಿಂದ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+