ವೈರಲ್ ವಿಡಿಯೋ: ಮಂದಿರ-ಮಸೀದಿಗೆ ಪ್ರದಕ್ಷಿಣೆ ಹಾಕುವ ಊರ ಹಂದಿ!
ಕೊಪ್ಪಳ, ಜುಲೈ 17: ಊರಹಂದಿಯೊಂದು ಪ್ರತಿದಿನ ಮಂದಿರ ಮತ್ತು ಮಸೀದಿಗೆ ಪ್ರದಕ್ಷಿಣೆ ಹಾಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಪ್ಪಳ ನಗರದ ಊರ ದೇವಿಗೆ ಹಾಗೂ ಮಸೀದಿಗೆ ಈ ಹಂದಿ ಪ್ರತಿದಿನ ಪ್ರದಕ್ಷಿಣೆ ಹಾಕುತ್ತಿದ್ದು, ಅಚ್ಚರಿಕೊಂಡ ಜನರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
2016 ರ ಡಿಸೆಬರ್ ನಲ್ಲಿ ಬೀದಿ ನಾಯಿಯೊಂದು ಕೊಲ್ಲೂರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಯಾತ್ರಾರ್ಥಿಗಳೊಂದಿಗೆ ಸುಮಾರು 700 ಕಿ.ಮೀ. ದೂರವನ್ನು ಕ್ರಮಿಸಿ, ನಂತರ ಅದೇ ಯಾತ್ರಾರ್ಥಿಗಳೊಂದಿಗೆ ವಾಪಸ್ ಬಂದು ಸುದ್ದಿಯಾಗಿತ್ತು. ಅಯ್ಯಪ್ಪನ ದರ್ಶನಕ್ಕಾಗಿ 700 ಕಿ.ಮೀ.ನಡೆದ ಈ ದೈವಭಕ್ತ ನಾಯಿಯ ಕತೆ ಒಂದೆಡೆಯಾದರೆ, ಇದೀಗ ಕೊಪ್ಪಳದ ಹಂದಿಯದ್ದು ಮತ್ತೊಂದು ಕತೆ!

ಈ ಹಂದಿ ಮಂದಿರ ಮತ್ತು ಮಸೀದಿ ಎರಡಕ್ಕೂ ಪ್ರದಕ್ಷಿಣೆ ಹಾಕುತ್ತ ಸರ್ವಧರ್ಮ ಸಮನ್ವಯದ ಸಂದೇಶ ಸಾರುತ್ತಿದೆ!












Click it and Unblock the Notifications