ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ

ಕೊಪ್ಪಳ, ಜನವರಿ 15: ವಧುವಿಲ್ಲದೆ ವರನೊಬ್ಬನಿಗೆ ಮದುವೆ ರಿಜಿಸ್ಟರ್ ಮಾಡಿಸಿದ ಘಟನೆ ಕೊಪ್ಪಳದ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿದೆ.

ಸಾಮಾನ್ಯವಾಗಿ ಪ್ರೇಮ ವಿವಾಹದಲ್ಲಿ ರಿಜಿಸ್ಟರ್ ಮದುವೆಯಾಗುತ್ತಿದ್ದರು, ಇದೀಗ ಅರೇಂಜ್ಡ್ ಮದುವೆಯಾದರೂ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಚೇರಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಹೀಗಿರುವಾಗ ವಧುವಿಲ್ಲದೆ ವರನೊಬ್ಬನಿಗೆ ಮದುವೆ ಮಾಡಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಲಯನ್ಸ್ ಕ್ಲಬ್ ಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕನಾಗಿರುವ ಗುರುಪಾದಯ್ಯ ಹಿರೇಮಠ್ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ. ಇವರಿಗೆ ಈ ಮೊದಲೇ ಒಂದು ವಿವಾಹವಾಗಿದ್ದರೂ, ಎರಡನೇ ಮದುವೆಗೆ ಹುಡುಗಿಯನ್ನು ನೋಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

Bride register marriage without bridegroom in Koppal

ಅವರಿಗೆ ಈಗಾಗಲೇ ಒಂದು ಮದುವೆಯಾಗಿದೆ, ಎರಡನೇ ಮದುವೆಗೆ ಹುಡುಗಿಯನ್ನು ನೋಡಲು ಹೋಗಿದ್ದಾರೆ, ಹುಡುಗಿ ಇಷ್ಟವಾಗಿದ್ದು ತಕ್ಷಣವೇ ಫೋಟೊವೊಂದನ್ನು ಕೇಳಿ ಪಡೆದು ಕೊಂಡಿದ್ದಾರೆ. ಬಳಿಕ ಹುಡುಗಿಯ ಮನೆಯವರಿಗೆ ಗುರುಪಾದಯ್ಯನ ಮೊದಲನೇ ಮದುವೆ ವಿಷಯ ತಿಳಿಯುತ್ತಿದ್ದಂತೆ ನಿರಾಕರಿಸಿದ್ದಾರೆ, ಅದಕ್ಕೆ ಕೋಪಗೊಂಡ ಆತ ಸಬ ರಿಜಿಸ್ಟರ್ ಕಚೇರಿಗೆ ತೆರಳಿ ಮದುವೆ ಡಾಕ್ಯುಮೆಂಟ್ಸ್ ರೆಡಿ ಮಾಡಿಸಿ ಬಳಿಕ ಫೋರ್ಜರಿ ಸೈನ್ ಮಾಡಿ ವಧುವಿಲ್ಲದೆ ಮದುವೆಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+