ಸಿನಿಮಾ ನಿಷೇಧಿಸಿದ್ದಕ್ಕೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ 20 ಲಕ್ಷ ದಂಡ

ಕೊಲ್ಕತ್ತಾ, ಏಪ್ರಿಲ್ 11: ರಾಜಕೀಯ ವಿಡಂಬನೆಯ ಸಿನಿಮಾ ಒಂದನ್ನು ನಿಷೇಧಿಸಿದ್ದಕ್ಕೆ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರಿಂಕೋರ್ಟ್ 20 ಲಕ್ಷ ದಂಡ ವಿಧಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭವಿಷ್ಯೋತ್ತರ್ ಭೂತ್ (ಭವಿಷ್ಯದ ಭೂತಗಳು) ಎಂಬ ರಾಜಕೀಯ ವಿಡಂಬನೆಯ ಸಿನಿಮಾವನ್ನು ಮಮತಾ ಬ್ಯಾನರ್ಜಿ ಸರ್ಕಾರ ನಿಷೇಧಿಸಿತ್ತು, ಇದರ ವಿರುದ್ಧ ಚಿತ್ರದ ನಿರ್ಮಾಪಕರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಚಿತ್ರದ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ ಎಂದು ಹೇಳಿದೆ.

Supreme court impose fine on west bengal government for banning a movie

ದಂಡದ ಹಣವನ್ನು ಚಿತ್ರದ ನಿರ್ಮಾಪಕರಿಗೆ ಹಾಗೂ ಚಲನಚಿತ್ರ ಮಂದಿರಗಳಿಗೆ ನೀಡಬೇಕು ಎಂದು ಆದೇಶದಲ್ಲಿ ಹೇಳಿದ್ದು, ಕೂಡಲೆ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಬೇಕು ಹಾಗೂ ಚಿತ್ರಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸುಪ್ರಿಂ ಹೇಳಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಕಲೆಯ ಉದ್ದೇಶವೇ ಪ್ರಶ್ನಿಸುವುದು ಮತ್ತು ಪ್ರಚೋದಿಸುವುದು. ಆದರೆ ಸಮಾಜದಲ್ಲಿ ಕೆಲವು ಸಂಘಟಿತ ಗುಂಪುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ತರುತ್ತಿವೆ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಫೆಬ್ರವರಿ 15 ರಂದು ಭವಿಷ್ಯೋತೇರ್ ಭೂತ್ ಚಿತ್ರವು ತೆರೆಕಂಡಿತ್ತು, ಆದರೆ ಚಿತ್ರದಲ್ಲಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವ ಅಂಶವಿದೆ, ಹಾಗೂ ಚಿತ್ರವು ರಾಜಕೀಯ ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಚಿತ್ರವನ್ನು ನಿಷೇಧ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+