• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಹಸ್ಯ ಅಂತ್ಯಕ್ರಿಯೆ' ಬಗ್ಗೆ ಮಾಹಿತಿಯಿಲ್ಲ: ಮಮತಾ ಬ್ಯಾನರ್ಜಿ ವಿರುದ್ದ ಬಿಜೆಪಿ ಗಂಭೀರ ಆರೋಪ

|

ನವದೆಹಲಿ, ಮೇ 6: ಕೋವಿಡ್ 19 ಗೆ ಸಂಬಂಧ ಪಟ್ಟಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬಗ್ಗೆ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

"ಮಮತಾ ಬ್ಯಾನರ್ಜಿ ಸರಕಾರ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ನಲ್ಲಿ ಹಲವು ವ್ಯತ್ಯಾಸಗಳಿವೆ"ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ ಆರೋಪಿಸಿದ್ದಾರೆ.

ಕೊವಿಡ್ ವಾರಿಯರ್ಸ್‌ಗೆ 10 ಲಕ್ಷ ಆರೋಗ್ಯ ವಿಮೆ ಘೋಷಿಸಿದ ದೀದಿ

"ನಿಮ್ಮ ಸರಕಾರವು ನೀಡುತ್ತಿರುವ ಮಾಹಿತಿಯು ಸತ್ಯಾಸತ್ಯತೆಯ ಬಗ್ಗೆ ನಮಗೆ ಆತಂಕವಿದೆ" ಎಂದು ಮಮತಾಗೆ, ಕೈಲಾಶ್ ವರ್ಗೀಯಾ ಪತ್ರ ಬರೆದಿದ್ದಾರೆ.

"ಮೇ 4ರಂದು ಬಿಡುಗಡೆಯಾಗಿರುವ ಆರೋಗ್ಯ ಬುಲೆಟಿನ್ ನ ದತ್ತಾಂಶಕ್ಕೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳು ಸ್ಪಷ್ಟವಾಗಿ ಕಾಣುತ್ತಿವೆ. ಅಂತವುಗಳನ್ನು ನಾವು ಪಟ್ಟಿ ಮಾಡಿದ್ದೇವೆ".

"ನಿಮ್ಮ ಆಡಳಿತ ಪಾರದರ್ಶಕತೆಯಿಂದ ಇರುವ ಮಾಹಿತಿಯನ್ನು ಒದಗಿಸುತ್ತದೆ ಎಂದು ಭಾವಿಸುತ್ತೇವೆ" ಎಂದು ಪತ್ರದಲ್ಲಿ ಕೈಲಾಶ್ ವರ್ಗೀಯಾ ಬರೆದಿದ್ದಾರೆ.

ಕೊರೊನಾ ಸೋಂಕಿನಿಂದ ಕೊಲ್ಕತ್ತಾದ ಆರೋಗ್ಯ ಅಧಿಕಾರಿ ಸಾವು

"ಕೋವಿಡ್ ಪರೀಕ್ಷೆಗಳಿಂದ ವಂಚಿತರಾದವರ ಬಗ್ಗೆ ಬುಲೆಟಿನ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ರಹಸ್ಯವಾಗಿ ನಡೆಸಿದ ಅಂತ್ಯಕ್ರಿಯೆಯ ಬಗ್ಗೆಯೂ ಮಾಹಿತಿಯಿಲ್ಲ. ಇದರಿಂದ ಸರಕಾರ ಘೋಷಿಸುವ ಪರಿಹಾರದಲ್ಲೂ ಗೊಂದಲವಾಗುವ ಸಾಧ್ಯತೆಯಿಲ್ಲದಿಲ್ಲ" ಎಂದು ಕೈಲಾಶ್ ವಿಜಯ್ ವರ್ಗೀಯಾ ಪತ್ರದಲ್ಲಿ ಬರೆದಿದ್ದಾರೆ.

English summary
In letter to West Bengal CM Mamata, BJP questions Bengal’s Covid-19 data,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X