ಕೊವಿಡ್ 19 ರೋಗಿಗಳನ್ನು ನೋಡಿಕೊಂಡ ಮಹಿಳೆಗೆ ಊರಿನಿಂದ ಬಹಿಷ್ಕಾರ
ಕೊಲ್ಕತ್ತ, ಏಪ್ರಿಲ್ 14: ಒಂದೆಡೆ ವೈದ್ಯರು, ನರ್ಸ್‌ಗಳು, ಪೊಲೀಸರನ್ನು ಕೊರೊನಾ ವಾರಿಯರ್ಸ್ ಎಂದು ಬಾಯ್ತುಂಬಾ ಹೊಗಳುತ್ತಿದ್ದರೆ ಇನ್ನೊಂದೆಡೆ ವೈದ್ಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಘಟನೆಯೂ ನಡೆಯುತ್ತಿದೆ.
ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊವಿಡ್ 19 ರೋಗಿಗಳನ್ನು ನೋಡಿಕೊಳ್ಳುತ್ತಿರುವ ಮಹಿಳೆಯೊಬ್ಬಳಿಗೆ ಊರಿನಿಂದ ಬಹಿಷ್ಕರಿಸಿರುವ ಘಟನೆ ಸಂಭವಿಸಿದೆ.
ಕೊಲ್ಕತ್ತದಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಅನುದಾನಿತ ಆರೋಗ್ಯ ಘಟಕ ಬಿಜಿ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೊಲ್ಕತಾದಿಂದ 80 ಕಿ.ಮೀ ದೂರದಲ್ಲಿರುವ ನದಿಯಾದ ರಾಣಾಘಾಟ್ ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯಾಗಿ ಕರ್ತವ್ಯನಿರ್ಹವಿಸುತ್ತಿದ್ದಾರೆ. ಪ್ರತಿ ವಾರ ವಾರಾಂತ್ಯದ ಸಮಯಕ್ಕೆ ಊರಿಗೆ ಬಂದು ಸಹೋದರಿ ಹಾಗೂ ತಾಯಿಯನ್ನು ನೋಡುತ್ತಿರುತ್ತಾರೆ.
ಇದರಂತೆ ಕಳೆದ ವಾರ ಕೂಡ ತನ್ನ ತಾಯಿ ಹಾಗೂ ಸಹೋದರಿಯನ್ನು ನೋಡುವ ಸಲುವಾಗಿ ಗ್ರಾಮಕ್ಕೆ ಬಂದಿದ್ದಾರೆ. ಆದರೆ, ಊರಿನ ಗ್ರಾಮಸ್ಥರು ಹಾಗೂ ನೆರೆಮನೆಯವರೂ ಇದಕ್ಕೆ ಅವಕಾಶ ನೀಡಿಲ್ಲ.
ಜನರ ಮನವೊಲಿಸಲು ನಾನು ಪ್ರಯತ್ನ ಮಾಡಿದೆ. ಆದರೆ, ಅವರು ಕೇಳಲು ಸಿದ್ಧರಿರಲಿಲ್ಲ. ಸರ್ಕಾರ ಮಾರ್ಗಸೂಚೆಗಳನ್ನು ಅನುಸರಿಸಿದ್ದು, ಆಸ್ಪತ್ರೆಯಿಂದ ಹೊರಬರುವುದಕ್ಕೂ ಮುನ್ನ ದೇಹ ಪೂರ್ತಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಹೇಳಿದರೂ ಅವರು ಕೇಳಲಿಲ್ಲ. ಬಳಿಕ ರಾಣಾಘಾಟ್ ಟೌನ್ ನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ರಾತ್ರಿ ಕಳೆದು ಮರಳಿ ಕೊಲ್ಕತಾಗೆ ಮರಳಿದ್ದೆ ಎಂದು ವರು ಹೇಳಿದ್ದಾರೆ.












Click it and Unblock the Notifications