ಚುನಾವಣಾ ಆಯೋಗದ ನೋಟಿಸ್‌ಗೆಲ್ಲಾ ಬಗ್ಗುವುದಿಲ್ಲ ಎಂದ ಮಮತಾ

ಜಮಮ್‌ಪುರ, ಏಪ್ರಿಲ್ 9: ಚುನಾವಣಾ ಆಯೋಗ ನೀಡಿರುವ ನೋಟಿಸ್‌ಗೆ ಬಗ್ಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರೀಯ ಪಡೆಗಳಿಂದ ಮತದಾರರಿಗೆ ಬೆದರಿಕೆ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಆರ್ ಪಿಎಫ್ , ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ಅದರ ಮಧ್ಯಪ್ರವೇಶದ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

ಬಿಜೆಪಿ ಹೇಳುವುದನ್ನು ಕೇಳುವ ಚುನಾವಣಾ ಆಯೋಗ, ಟಿಎಂಸಿ ಮಾತು ಕೇಳುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವಂತೆಯೇ ತಾನು ಕೂಡಾ ಚುನಾವಣೆ ದಿನದಂದು ಪ್ರಚಾರ ಮಾಡುವುದಾಗಿ ತಿಳಿಸಿದರು.

Dont Care About ECs Showcause letters: Mamata

ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪುನರುಚ್ಚರಿಸಿದ ಮಮತಾ, ಚುನಾವಣೆ ದಿನ ಪ್ರಧಾನ ಮಂತ್ರಿ ಪ್ರಚಾರ ಮಾಡಿದ್ದಾರೆ. ಆದರೂ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಎಲ್ಲಿಯೂ ಆಯೋಗ ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವಾಗ ಪ್ರಧಾನಿ ಹೇಗೆ ಪರೀಕ್ಷಾ ಪೇ ಚರ್ಚಾ ನಡೆಸಿದರು, ಇದು ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

ಪುರ್ಬಾ ಬರ್ಧಾಮನ್‌ನ ಜಮಾಲ್‌ಪುರದಲ್ಲಿ ನಡೆದ ರ‍್ಯಾಲಿ ಮಾತನಾಡಿದ ಅವರು, ಸಿಆರ್ ಪಿಎಫ್ ಬಿಜೆಪಿ ಪರ ಕೆಲಸವನ್ನು ನಿಲ್ಲಿಸುವವರೆಗೂ ಅದರ ಮದ್ಯಪ್ರವೇಶದ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ. ಅದು ಆ ಕೆಲಸ ಮಾಡಿದ ನಂತರ ಸಲ್ಯೂಟ್ ಹೊಡೆಯುತ್ತೇನೆ. ಚುನಾವಣಾ ಆಯೋಗದ ಶೋಕಾಸ್ ಪತ್ರಗಳಿಗೆ ನಾನು ಹೆದರುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+