ಕೋಲಾರದಲ್ಲಿ ಟಿಕ್‌ಟಾಕ್ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು
ಕೋಲಾರ, ಜುಲೈ 13: ಟಿಕ್ ಟಾಕ್ ವಿಡಿಯೋ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಟಿಕ್ ಟಾಕ್ ಎನ್ನುವುದು ಕೇವಲ ಮನೋರಂಜನೆ ಮಾತ್ರವಾಗಿರದೆ ಯುವಜನತೆಯ ಮನಸ್ಸಿನ ಜೊತೆ ಚೆಲ್ಲಾಟವಾಡುತ್ತಿದೆ.

ಬ್ಲೂವೇಲ್‌ನಂತೆ ಇದೀಗ ಟಿಕ್ ಟಾಕ್ ಭೂತ ಎಳೆ ವಯಸ್ಸಿನ ಮಕ್ಕಳ ಮನಸ್ಥಿತಿಯನ್ನು ಹಾಳುಗೆಡವುತ್ತಿದೆ. ಟಿಕ್ ಟಾಕ್ ವಿಡಿಯೋ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ಉಸಿರುಗಟ್ಟಿ ವಿದ್ಯಾರ್ಥಿನಿ ಮಾಲಾ ಮೃತಪಟ್ಟಿದ್ದಾರೆ.
ಈ ಘಟನೆ ಕೋಲಾರದ ವಡಗೇರಹಳ್ಳಿಯಲ್ಲಿ ನಡೆದಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇತ್ತೀಚೆಗಷ್ಟೇ ತುಮಕೂರಿನಲ್ಲೂ ಕೂಡ ಇಂತಹದ್ದೇ ಘಟನೆಯೊಂದು ನಡೆದಿತ್ತು. ದೂರದಿಂದ ಓಡಿಬಂದು ಸ್ನೇಹಿತನ ಸಹಾಯದಿಂದ ಹಾರಿ ಉಲ್ಟಾ ನೆಗೆದು ಅದನ್ನು ಸ್ಲೋಮೋಶನ್‌ನಲ್ಲಿ ಶೂಟ್ ಮಾಡಿ ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡುವುದು ಕುಮಾರನ ಉದ್ದೇಶವಾಗಿತ್ತು.
ಆದರೆ ಆ ರೀತಿ ಮಾಡಲು ಹೋಗಿ ಕುತ್ತಿಗೆ ನೆಲಕ್ಕೆ ತಾಗಿ ಬೆನ್ನುಮೂಳೆ ಮುರಿದು ಸ್ವಲ್ಪ ಸಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ರೀತಿ ಜೀವಕ್ಕೆ ಕುತ್ತು ತರುವಂತಹ ಆಪ್‌ಗಳಿಗೆ ಯುವಕರು ಯಾಕೆ ಮುಗಿಬೀಳುತ್ತಾರೋ ಅರ್ಥವಾಗುವುದಿಲ್ಲ.












Click it and Unblock the Notifications