7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!
ಬೆಂಗಳೂರು, ಮಾರ್ಚ್ 30: ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕೆ.ಎಚ್.ಮುನಿಯಪ್ಪ ಅವರ ಎಂಟನೇ ಬಾರಿ ಆಯ್ಕೆ ಆಗಲೆಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಈ ಹಿಂದೆ ಯುಪಿಎ ಆಡಳಿತವಿದ್ದಾಗ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಈ ಬಾರಿಯೂ ಅವರು ಮೈತ್ರಿ ಅಭ್ಯರ್ಥಿಯಾಗಿ ಕೋಲಾರದಿಂದ ಕಣಕ್ಕೆ ಇಳಿದಿದ್ದು, ಕೆಲವು ಅಡೆತಡೆಗಳಿದ್ದರೂ ಸಹ ಅವರೇ ಗೆಲ್ಲುವ ಅಭ್ಯರ್ಥಿ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಮಪತ್ರದಲ್ಲಿ ಸಲ್ಲಿಸಿರುವ ವಿವರದಂತೆ ಕೆ.ಎಚ್.ಮುನಿಯಪ್ಪ ಅವರು ಬೆಂಗಳೂರು ವಿವಿಯಲ್ಲಿ ಬಿ.ಎ. ಮತ್ತು ಎಲ್‌ಎಲ್‌ಬಿ ವ್ಯಾಸಾಂಗ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಅವರ ವಿರುದ್ಧ 'ಜಾತಿ ನಿಂದನೆ'ಗೆ ಸಂಬಂಧಿಸಿದ ಪ್ರಕರಣವೊಂದು ಇದೆ.
ಕೆ.ಎಚ್.ಮುನಿಯಪ್ಪ ಅವರು ಈ ಆರ್ಥಿಕ ವರ್ಷದಲ್ಲಿ 50.71 ಲಕ್ಷ ಹಣಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ. ಅವರ ಪತ್ನಿ 55.46 ಲಕ್ಷಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ. ಮುನಿಯಪ್ಪ ಅವರ ಬಳಿ 15.75 ಲಕ್ಷ ನಗದು ಹಣವಿದೆ. ಪತ್ನಿ ಬಳಿ 1.22 ಲಕ್ಷ ನಗದು ಇದೆ.
ಮುನಿಯಪ್ಪ ಅವರ ಬ್ಯಾಂಕ್ ಖಾತೆಯಲ್ಲಿ 3.60 ಲಕ್ಷ ಹಣ ಇದೆ. ಪತ್ನಿ ಅವರ ಬ್ಯಾಂಕ್ ಖಾತೆಯಲ್ಲಿ 3.53 ಲಕ್ಷ ಹಣ ಇದೆ. 1 ಲಕ್ಷ ಮೌಲ್ಯದ ಷೇರುಗಳಿದ್ದರೆ, ಇಪಿಎಫ್ ಖಾತೆಯಲ್ಲಿ 6.26 ಲಕ್ಷ ಹಣ ಇದೆ. ಪತ್ನಿ ಹೆಸರಲ್ಲಿ 1.85 ಕೋಟಿ ಮೌಲ್ಯದ ಷೇರು ಇದೆ. ಎಲ್‌ಐಸಿಯಲ್ಲಿ 1.45 ಲಕ್ಷ ಹಣ ಇದೆ.

ಮುನಿಯಪ್ಪ ಬಳಿ ಇರುವ ಕಾರುಗಳೆಷ್ಟು?
ಮುನಿಯಪ್ಪ ಅವರ ಹೆಸರಿನಲ್ಲಿ 20.15 ಲಕ್ಷ ಮೌಲ್ಯದ ಒಂದು ಇನ್ನೋವಾ ಕಾರಿದೆ. ಅವರ ಮಡದಿ ಹೆಸರಲ್ಲಿ ಯಾವುದೇ ಮೋಟಾರು ವಾಹನಗಳು ಇಲ್ಲ. ಮುನಿಯಪ್ಪ ಬಳಿ 3 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದರೆ ಪತ್ನಿ ಬಳಿ 29.31 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. 45.89 ಲಕ್ಷ ಹಣವನ್ನು ಕಚೇರಿ ಮತ್ತು ಪೀಠೋಪಕರಣ ಇನ್ನಿತರೆ ವಸ್ತುಗಳಿಗೆ ಬಳಸಿದ್ದಾರೆ. ಸಾಲ ಹಾಗೂ ಮುಂಗಡವಾಗಿ ಮುನಿಯಪ್ಪ ಅವರ ಪತ್ನಿ 1.80 ಕೋಟಿ ರೂಪಾಯಿ ನೀಡಿದ್ದಾರೆ.

ಕೆ.ಎಚ್.ಮುನಿಯಪ್ಪ ಅವರ ಜಮೀನೆಷ್ಟಿದೆ?
ಕೆ.ಎಚ್.ಮುನಿಯಪ್ಪ ಅವರ ಬಳಿ 8 ಎಕರೆ 18 ಗುಂಟೆ ಕೃಷಿ ಜಮೀನಿದೆ. ಇದರಲ್ಲಿ ನಾಲ್ಕು ಎಕರೆ ಸರ್ಕಾರ ಕೊಟ್ಟಿದ್ದರೆ ಇನ್ನುಳಿದದದ್ದು ಪಿತ್ರಾರ್ಜಿತ, ಇದರ ಅಭಿವೃದ್ಧಿಗೆ ಮುನಿಯಪ್ಪನವರು 50 ಲಕ್ಷ ಖರ್ಚು ಮಾಡಿದ್ದಾರೆ, ಆದರೆ ಇದರ ಈಗಿನ ಮಾರುಕಟ್ಟೆ ಮೌಲ್ಯವನ್ನು ಅವರು ಹೇಳಿಲ್ಲ.

ಮುನಿಯಪ್ಪ ಪತ್ನಿ ಭಾರಿ ಸಿರಿವಂತೆ
ಕೆ.ಎಚ್.ಮುನಿಯಪ್ಪ ಅವರ ಪತ್ನಿ ಬಳಿ ಬರೋಬ್ಬರಿ 243.2 ಎಕರೆ ಕೃಷಿ ಜಮೀನಿದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 637.72 ಕೋಟಿ ರೂಪಾಯಿಗಳು. ಇತ್ತೀಚೆಗೆ ಕೆ.ಎಚ್.ಮುನಿಯಪ್ಪ ಅವರ ಜಮೀನಿನ ಸಂಬಂಧ ವಿವಾದವೊಂದು ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಡದಿ ಹೆಸರಲ್ಲಿ ಭಾರಿ ಮೊತ್ತದ ಸ್ಥಿರಾಸ್ತಿ
ಕೆ.ಎಚ್.ಮುನಿಯಪ್ಪ ಅವರ ಹೆಸರಿನಲ್ಲಿ 8 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡವೊಂದು ಇದೆ. ಪತ್ನಿ ಹೆಸರಲ್ಲಿ ಯಾವುದೇ ವಾಣಿಜ್ಯ ಕಟ್ಟಡ ಇಲ್ಲ. ಪತ್ನಿ ಹೆಸರಲ್ಲಿ ಐದು ವಸತಿ ಕಟ್ಟಡಗಳಿವೆ ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 14.11 ಕೋಟಿ. ಕೆ.ಎಚ್.ಮುನಿಯಪ್ಪ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 8.50 ಕೋಟಿ ರೂಪಾಯಿ, ಮುನಿಯಪ್ಪ ಪತ್ನಿಯ ಒಟ್ಟು ಸ್ಥಿರಾಸ್ತಿ ಮೌಲ್ಯ 641.83 ಕೋಟಿ.

ಮುನಿಯಪ್ಪ ಮೇಲಿನ ಸಾಲವೆಷ್ಟು?
ಕೆ.ಎಚ್.ಮುನಿಯಪ್ಪ ಅವರ ಮೇಲೆ 4.53 ಕೋಟಿ ಸಾಲವಿದೆ. ಅವರ ಪತ್ನಿ ಅವರ ಮೇಲೆ 9.84 ಕೋಟಿ ಸಾಲವಿದೆ. ಕೆ.ಎಚ್.ಮುನಿಯಪ್ಪ ಅವರು 4.31 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ, ಪತ್ನಿ ಅವರು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ.

ಕೆ.ಎಚ್.ಮುನಿಯಪ್ಪ ಒಟ್ಟು ಆಸ್ತಿ ಎಷ್ಟು?
ಕೆ.ಎಚ್.ಮುನಿಯಪ್ಪ ಅವರ ಒಟ್ಟು ಆಸ್ತಿ, 10 ಕೋಟಿ ಇದೆ. ಅದೇ ಅವರ ಪತ್ನಿ ಅವರ ಒಟ್ಟು ಆಸ್ತಿ 645.28 ಕೊಟಿ ರೂಪಾಯಿಗಳು, ಕೆ.ಎಚ್.ಮುನಿಯಪ್ಪ ಅವರಿಂಗಲೂ ಅವರ ಮಡದಿ 64 ಪಟ್ಟು ಹೆಚ್ಚು ಶ್ರೀಮಂತರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications