ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಿಜೆಪಿ ಮುಖಂಡ ಸಾವು
ಕೋಲಾರ, ಜೂನ್ 17: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿದ್ದ ಕಾರಣ, ಕೋಲಾರ ಬಿಜೆಪಿ ಮುಖಂಡ ಟಿಎಸ್ ನಾಗಪ್ರಕಾಶ್ ಅವರಿಗೂ ಬೆಂಕಿ ತಗುಲಿ ಮೃತಪಟ್ಟಿದ್ದಾರೆ.
ಕೋಲಾರದ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾವನ್ನಪ್ಪಿದ್ದರೆ ಮನೆಯಲ್ಲಿದ್ದ ಇನ್ನೂ ನಾಲ್ವರಿಗೆ ಗಂಭೀರ ಘಾಯಗಳಾಗಿದೆ.ಶೋಭಾ, ಸ್ವರೂಪ್ ಅಂಕಿತಾ ಮತ್ತು ಸತ್ಯನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಲ್ಲಿ ನಾಗಪ್ರಕಾಶ್ ಅವರಿಗೆ ಬೆಂಕಿ ತಗುಲಿದೆ, ದಟ್ಟ ಹೊಗೆಯ ಕಾರಣ ಉಸಿರಾಡಲೂ ಕಷ್ಟವಾಗಿ ಅಸುನೀಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಭಾನುವಾರ ಸಂಜೆ ಪಟ್ಟಣದ ಸ್ಮಶಾನದಲ್ಲಿ ನೆರವೇರಿದೆ.
ಭಾನುವಾರ ಮುಂಜಾನೆ ನಾಲ್ಕರ ಸುಮಾರಿಗೆ ಘಟನೆ ನಡೆದಿದ್ದು ಬೆಂಕಿ ಹೊತ್ತಿದ್ದ ಕಾರಣ ಮನೆಯಲ್ಲಿದ್ದ ಟಿವಿ ಮತ್ತಿತರೆ ವಸ್ತುಗಳು ಸುಟ್ಟುಹೋಗಿದೆ.












Click it and Unblock the Notifications