ಠಾಣೆಯಲ್ಲೇ ಪಿಎಸ್ಐ ಡ್ಯಾನ್ಸ್ ರಾಜಾ ಡ್ಯಾನ್ಸ್: ಇಲಾಖೆ ತಲೆತಗ್ಗಿಸುವ ಘಟನೆ

Recommended Video

      ಕೋಲಾರದ ಪೊಲೀಸ್ ಸ್ಟೇಷನ್ ನಲ್ಲಿ ತಲೆ ತಗ್ಗಿಸುವಂಥ ಘಟನೆ | Oneindia Kannada

      ಕೋಲಾರ, ನ 17: ಠಾಣೆಗೆ ಬಂದ ಇಬ್ಬರು ಆರೋಪಿಗಳನ್ನು ಹಿಗ್ಗಾಮುಗ್ಗ ಥಳಿಸಿ, ಅವಾಚ್ಯ ಶಬ್ದಗಳನ್ನು ಬಳಸಿ, ಆರೋಪಿಗಳ ಮುಂದೆಯೇ ಡ್ಯಾನ್ಸ್ ಮಾಡಿ, ಜೊತೆಗೆ ಅವರನ್ನೂ ಡ್ಯಾನ್ಸ್ ಮಾಡಲು ಹೇಳಿದ ಪಿಎಸ್ಐ, ಈಗ ಸಾಮಾಜಿಕ ಜಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ.

      ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಠಾಣೆಯ ಪಿಎಸ್ಐ ಹೊನ್ನೇಗೌಡ, ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ, ರಾಮಸಾಗರ ಗ್ರಾಮದ ಇಬ್ಬರನ್ನು ವಿಚಾರಣೆಗೆ ಕರೆಸಿದ್ದರು. ಮೊದಲು ಯೂನಿಫಾರಂನಲ್ಲಿ, ಕೈಯಲ್ಲಿ ಬೆತ್ತ ಹಿಡಿದುಕೊಂಡು ವಿಚಾರಣೆ ನಡೆಸಿದ ಪಿಎಸ್ಐ, ನಂತರ ಸಿವಿಲ್ ಡ್ರೆಸ್ ನಲ್ಲಿ ಬೆಂಡೆತ್ತಲು ಆರಂಭಿಸಿದ್ದಾರೆ.

      ತೆಲುಗು ನಟ ಪವನ್ ಕಲ್ಯಾಣ್ ಅವರ ಗಬ್ಬರ್ ಸಿಂಗ್ ಸಿನಿಮಾದ ರೀತಿಯಲ್ಲೇ ಆರೋಪಿಗಳ ವಿಚಾರಣೆ ನಡೆಸಿದ ಪಿಎಸ್ಐ, ನಂತರ ಆ ಸಿನಿಮಾದ ಹಾಡಿಗೆ ಆರೋಪಿಗಳ ಮುಂದೆಯೇ ಸ್ಟೆಪ್ ಹಾಕಿದ್ದಾರೆ. ಇಷ್ಟೂ ಸಾಲದು ಎನ್ನುವಂತೆ, ಆರೋಪಿಗಳಿಗೂ ಡ್ಯಾನ್ಸ್ ಮಾಡಲು ತಾಕೀತು ಮಾಡಿದ್ದಾರೆ.

      Bethamangala Police Station PSI inquiry in Telugu cinema style

      ಅತ್ಯಂತ ಕೆಟ್ಟ ಪದಗಳನ್ನು ಬಳಸುತ್ತಾ, ಜೋಗಿ ಚಿತ್ರದ ಹೊಡಿಮಗ.. ಹೊಡಿಮಗ ಹಾಡು ಹೇಳುತ್ತಾ, ಕಾಲಿಂದ ಒದೆಯುತ್ತಾ, ಗಬ್ಬರ್ ಸಿಂಗ್ ಸಿನಿಮಾ ಸ್ಟೈಲಿನಲ್ಲಿ ಪಿಎಸ್ಐ ವಿಚಾರಣೆ ನಡೆಸುತ್ತಿರುವುದನ್ನು ಠಾಣಾ ಸಿಬ್ಬಂದಿಯೇ ಮೊಬೈಲ್‌ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.

      'ಒಕ್ಕಲಿಗರ ಮನೆ ಬಳಿ ಹೋಗುತ್ತೀರಾ? ನಿಮಗೆ ಒಕ್ಕಲಿಗರ ಮನೆ ಹುಡುಗಿ ಬೇಕಾ ವಡ್ ನನ್ ಮಕ್ಳಾ' ಎಂದು ಪಿಎಸ್ಐ ವಿಚಾರಣೆ ನಡೆಸುತ್ತಿದ್ದರು. ಆರೋಪಿಗಳಿಬ್ಬರೂ ಭೋವಿ ಜನಾಂಗದವರಾಗಿದ್ದು, ವಿಚಾರಣೆ ನೆಪದಲ್ಲಿ ನಮ್ಮ ಜನಾಂಗದವರನ್ನು ವಡ್ಡ ಎಂದು ಪಿಎಸ್ಐ ಅವಮಾನಿಸಿದ್ದಾರೆ. ಅತ್ಯಂತ ಕೀಳುಮಟ್ಟದ ಪದವನ್ನು ಬಳಸಿ ವಿಚಾರಣೆ ನಡೆಸಲಾಗಿದೆ ಎನ್ನುವ ಕೂಗು ಪಿಎಸ್ಐ ವಿರುದ್ದ ಕೇಳಿಬಂದಿದೆ.

      ತಾಜಾ ಮಾಹಿತಿಯ ಪ್ರಕಾರ, ಭೋವಿ ಜನಾಂಗದ ನೂರಾರು ಮಂದಿ, ಶನಿವಾರ (ನ 17) ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದುಕೊಂಡು ಕೂತಿರುವ ಪ್ರತಿಭಟನಾಕಾರರು, ಪಿಎಸ್ಐ ಅವರನ್ನು ಅಮಾನತು ಮಾಡಿ, ಇಲ್ಲಾಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

      ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್‌ ಕುಮಾರ್‌ ಘಟನೆ ಸಂಬಂಧ ತನಿಖೆ ನಡೆಸಿ ಶನಿವಾರ (17) ವರದಿ ನೀಡುವಂತೆ ಡಿವೈಎಸ್ಪಿಗೆ ಆದೇಶಿಸಿದ್ದಾರೆ. ಕೆಲವು ದಿನಗಳ ಹಿಂದೆ, ಇದೇ ಠಾಣೆಯ ಇಬ್ಬರು ಪೇದೆಗಳು ಮದ್ಯಸೇವನೆ ಮಾಡಿ, ಕಂಗಾಡ್ಲ ಹಳ್ಳಿಯಲ್ಲಿ ರಂಪಾಟ ನಡೆಸಿದ್ದರು. ಈ ಇಬ್ಬರು ಪೇದೆಗಳನ್ನು ಜಿಲ್ಲಾ ಎಸ್ಪಿ ಅಮಾನತುಗೊಳಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+