ಉತ್ತರ ಕನ್ನಡ: ಮತ್ತೆ ಎಸ್‌ಪಿ ವರ್ಗಾವಣೆ ಸುದ್ದಿ ಸದ್ದು!

ಕಾರವಾರ, ಸೆಪ್ಟೆಂಬರ್ 28: ಕಳೆದ ಎರಡು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ವರ್ಗಾವಣೆ ವಿಚಾರ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ವರ್ಗಾವಣೆ ಆದೇಶರದ್ದಿನ ಬಳಿಕ ಮತ್ತೆ ಇದೀಗ ಇದೇ ವಿಚಾರ ಸಾರ್ವಜನಿಕರಲ್ಲಿ ಚರ್ಚೆಗೆ ಬಂದಿದೆ.

ಕಳೆದ ಎರಡು ವರ್ಷದಿಂದ ಶಿವಪ್ರಕಾಶ್ ದೇವರಾಜು ಎಸ್‌ಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿನಾಯಕ ಪಾಟೀಲ್ 2019ರ ಆಗಸ್ಟ್‌ನಲ್ಲಿ ವರ್ಗಾವಣೆಯಾದ ಬಳಿಕ ಶಿವಪ್ರಕಾಶ್ ದೇವರಾಜು ಜಿಲ್ಲೆಗೆ ನಿಯೋಜನೆಗೊಂಡಿದ್ದರು.

ಎರಡು ವರ್ಷಗಳ ಕಾಲ ಅವರನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎನ್ನಲಾಗಿತ್ತಾದರೂ ಎರಡು ವರ್ಷ ಪೂರ್ಣಗೊಳ್ಳುವುದಕ್ಕೂ ಪೂರ್ವವೇ ಎಸ್‌ಪಿ ವರ್ಗಾವಣೆಗಾಗಿ ಪ್ರಕ್ರಿಯೆಗಳು ಜೋರಾಗಿಯೇ ನಡೆದಿತ್ತು.

 Uttara Kannada SP Transfer Discussion Again

ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಶಿವಪ್ರಕಾಶ್ ದೇವರಾಜು ವರ್ಗಾವಣೆ ಪ್ರಯತ್ನ ನಡೆದು, ವರ್ಗಾಯಿಸಿ ಎರಡು ತಿಂಗಳ ಹಿಂದೆ ಅವರ ಜಾಗಕ್ಕೆ ವರ್ತಿಕಾ ಕಟಿಯಾರ್ ನಿಯೋಜಿಸಿ ಆದೇಶಿಸಲಾಗಿತ್ತು. ಆದರೆ ವರ್ತಿಕಾ ಕಟಿಯಾರ್ ಜಿಲ್ಲೆಗೆ ಆಗಮಿಸದ ಹಿನ್ನಲೆಯಲ್ಲಿ ಎಸ್‌ಪಿಯಾಗಿ ಶಿವಪ್ರಕಾಶ್ ದೇವರಾಜು ಮುಂದುವರೆಸಲಾಗಿತ್ತು.

ಸದ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತೆ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇನ್ನು ಕೆಲ ದಿನಗಳಲ್ಲಿಯೇ ವರ್ಗಾವಣೆ ಆಗುವ ಸಾಧ್ಯತೆ ಇದೆ ಎನ್ನುವುದು ಸದ್ಯದ ಸುದ್ದಿ. ಈ ಹಿಂದೆ ಜಿಲ್ಲೆಗೆ ಎಸ್‌ಪಿಯಾಗಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದ ಕೆ. ಜಿ. ದೇವರಾಜ್ ಜಿಲ್ಲೆಗೆ ಎಸ್‌ಪಿಯಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಇತ್ತು.

ಆದರೆ ಕೆ. ಜಿ. ದೇವರಾಜ್ ಅನಾರೋಗ್ಯದ ಹಿನ್ನಲೆಯಲ್ಲಿ ಜೊತೆಗೆ ನೌಕಾದಳ ಹಾಗೂ ಕೈಗಾದವರು ಜಿಲ್ಲೆಗೆ ನೇರ ಐಪಿಎಸ್ ಅವರನ್ನೇ ಎಸ್‌ಪಿಯನ್ನಾಗಿ ನೇಮಕ ಮಾಡುವಂತೆ ಒತ್ತಡ ಹಾಕಿರುವ ಕಾರಣ ಕೆ. ಜಿ. ದೇವರಾಜ್ ಬದಲು ಬೇರೆ ಐಪಿಎಸ್ ಅಧಿಕಾರಿಗೆ ಅವಕಾಶ ಸಿಗಲಿದೆ ಎಂಬುದು ಈಗಿನ ಸುದ್ದಿ.

ಮೂಲಗಳ ಪ್ರಕಾರ ಬೀದರ್‌ನಲ್ಲಿ ಹಾಲಿ ಎಸ್‌ಪಿಯಾಗಿರುವ, ಈ ಹಿಂದೆ ಶಿರಸಿಯಲ್ಲಿ ಎಎಸ್‌ಪಿಯಾಗಿ ಕೆಲಸ ಮಾಡಿದ್ದ ಕೋಲಾರ ಮೂಲದ ಐಪಿಎಸ್ ಅಧಿಕಾರಿ ಡಿ. ಎಲ್. ನಾಗೇಶ್ ಆಗಮಿಸುವ ಸಾಧ್ಯತೆ ಇದೆ ಎಂಬುದು ತಾಜಾ ಸಮಾಚಾರ.

ಇನ್ನೊಂದೆಡೆ ಮಂಗಳೂರಿನಲ್ಲಿ ಡಿಸಿಪಿಯಾಗಿರುವ ಹರಿರಾಮ್ ಶಂಕರ್ ಎನ್ನುವ ಐಪಿಎಸ್ ಅಧಿಕಾರಿಯೂ ಸಹ ಜಿಲ್ಲೆಗೆ ವರ್ಗಾವಣೆ ಆಗಿ ಬರುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಇನ್ನು ಕೆಲ ದಿನದಲ್ಲಿಯೇ ಈ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+