ಉತ್ತರ ಕನ್ನಡ ಕಣದಲ್ಲಿ ಎಲ್ಲರೂ ಕೋಟಿ ವೀರರು: ಇಲ್ಲಿದೆ ಎಲ್ಲಾ ಪಕ್ಷದ ಅಭ್ಯರ್ಥಿಗಳ ಆಸ್ತಿ ವಿವರ

ಕಾರವಾರ, ಏಪ್ರಿಲ್‌ 18: ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಬಹುತೇಕ ಹಳೆ ಅಭ್ಯರ್ಥಿಗಳೇ ಕಣದಲ್ಲಿದ್ದು ಬಹುತೇಕ ಎಲ್ಲ ಪ್ರಮುಖರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಬಹುತೇಕರ ಆಸ್ತಿ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚಾಗಿರುವುದು ಅಫಿಡವಿಟ್‌ನಿಂದ ತಿಳಿದು ಬರುತ್ತಿದೆ.

ಹಳಿಯಾಳ-ಜೋಯಿಡಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ವಿ. ದೇಶಪಾಂಡೆ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಘೋಷಣಾ ಪತ್ರದಲ್ಲಿ ತಮ್ಮ ಕುಟುಂಬ ಒಟ್ಟು 299.53 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

Uttara Kannada All Parties Candidate Asset Details

ಆರ್.ವಿ. ದೇಶಪಾಂಡೆಗಿಂತ ಪತ್ನಿ ರಾಧಾ ದೇಶಪಾಂಡೆ ಆಸ್ತಿಯೇ ಅತಿ ಹೆಚ್ಚಿದೆ. ದೇಶಪಾಂಡೆಯವರ ಹೆಸರಲ್ಲಿ 45,86,99,207 ರೂ ಆಸ್ತಿಯಿದೆ. ಅಲ್ಲದೇ 9,91,30,805 ರೂ. ಸಾಲವಿದೆ.

ಘೋಷಿತ ಆಸ್ತಿ ವಿವರಗಳಲ್ಲಿ ಚರಾಸ್ತಿ ಮೊತ್ತ 234,35,02,185 ರೂ ಇದ್ದು, ಸ್ಥಿರಾಸ್ತಿ 65,18,36,554 ರೂಪಾಯಿ ಆರ್.ವಿ.ದೇಶಪಾಂಡೆ ಹಾಗೂ ಅವರ ಪತ್ನಿ ರಾಧಾ ದೇಶಪಾಂಡೆ ಹೆಸರಲ್ಲಿ ಇದೆ. ದೇಶಪಾಂಡೆವರ ಬಳಿ ,61,949 ರೂಪಾಯಿ ನಗದು, ಅವರ ಪತ್ನಿ ರಾಧಾ ಬಳಿ 6,74,276 ರೂಪಾಯಿ ನಗದು ಇದೆ. ಬ್ಯಾಂಕು ಖಾತೆಯಲ್ಲಿ 19,73,962 ರೂಪಾಯಿ ಹಾಗೂ ಅವರ ಪತ್ನಿ ರಾಧಾ ದೇಶಪಾಂಡೆಯವರ ಹೆಸರಲ್ಲಿ 17,92,700 ರೂಪಾಯಿ ಇದೆ. ದೇಶಪಾಂಡೆಯವರ ಬಳಿ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮತ್ತು ಇತರೆ ಸೇರಿ 1,10,90,667 ರೂಪಾಯಿ, ಅವರ ಇನ್ನು ಪತ್ನಿ ರಾಧಾ ಬಳಿ 13,21,49,136 ರೂಪಾಯಿ ಇದೆ.

ದೇಶಪಾಂಡೆಯವರ ಬಳಿ 17,17,405 ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದರೆ, ಅವರ ಪತ್ನಿ ಬಳಿ 4,73,67,542 ರೂಪಾಯಿ ಮೌಲ್ಯದ ಚಿನ್ನಾಭರಣವಿದೆ. ಒಟ್ಟು ದೇಶಪಾಂಡೆ ಹೆಸರಿನಲ್ಲಿ 8,24,67,944 ರೂ ಮತ್ತು ಅವರ ಪತ್ನಿ ರಾಧಾ ಹೆಸರಲ್ಲಿ 1,66,62,861 ರೂ ಸಾಲವಿದೆ.

Uttara Kannada All Parties Candidate Asset Details

ವಿ.ಎಸ್ ಪಾಟೀಲ್ ಒಟ್ಟು ಆಸ್ತಿ 3.62 ಕೋಟಿ

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ವಿ.ಎಸ್‌. ಪಾಟೀಲ್ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು, ಒಟ್ಟು ಆಸ್ತಿ 3.62 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಕೃಷಿ ಮೂಲದಿಂದ ತಮ್ಮ ವಾರ್ಷಿಕ ಆದಾಯ 31,50,818 ರೂ ಇದ್ದು, ತಮ್ಮ ಕೈಯಲ್ಲಿ 60 ಸಾವಿರ ರೂಪಾಯಿ, ಪತ್ನಿ ಶಶಿಕಲಾ ಅವರ ಕೈಯಲ್ಲಿ 50 ಸಾವಿರ ರೂಪಾಯಿ ನಗದು ಹಣವಿದೆ.

ಕೆವಿಜಿ ಬ್ಯಾಂಕ್‌ನಲ್ಲಿ 44.133 ಲಕ್ಷ ರೂ ಮುಂಡಗೋಡದ ಎಸ್‌ಬಿಐದಲ್ಲಿ 2.59 ಲಕ್ಷ ರೂಪಾಯಿ ಕಲಕೇರಿ ಸೇವಾ ಸಹಕಾರಿ ಸಂಘದ ಶೇರು 32,000 ರೂಪಾಯಿಗಳಿದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಪತ್ನಿ ಶಶಿಕಲಾ ಅವರು ಕೆವಿಜಿ ಬ್ಯಾಂಕ್ ಖಾತೆಯಲ್ಲಿ 2,08,659,64 ರೂ. ಇನ್ನೊಂದು ಖಾತೆಯಲ್ಲಿ 86,485.66 ರೂ ಎಸ್‌ಬಿಐ ಖಾತೆಯಲ್ಲಿ 1,46,448.61 ರೂ. ಹಾಗೂ ಕಲಕೇರಿ ಸೇವಾ ಸಹಕಾರಿ ಸಂಘದಲ್ಲಿ 30 ಸಾವಿರ ರೂ ಶೇರು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಲದ ಜೊತೆಗೆ ರೂಪಾಲಿ ನಾಯ್ಕ ಆಸ್ತಿಯೂ ಡಬಲ್

ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿರುವ ಶಾಸಕಿ ರೂಪಾಲಿ ನಾಯ್ಕ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದ್ದು, ಚರಾಸ್ತಿ 3.50 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಸಾಲ ಕೂಡ ಡಬಲ್ ಆಗಿದೆ.

2018ರ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಲಾಗಿದ್ದ ತಮ್ಮ ಆಸ್ತಿ ವಿವರದಲ್ಲಿ ಅಂಕೋಲಾದ ಹಿಲ್ಲೂರಿನಲ್ಲಿ 2 ಎಕರೆ ಕೃಷಿ ಭೂಮಿ, ಕಾರವಾರದ ದೇವಳಿವಾಡದಲ್ಲಿ ಎರಡು ವಾಸ್ತವ್ಯದ ಮನೆ ಹೊಂದಿರುವುದಾಗಿ ಒಟ್ಟು 1.03 ಕೋಟಿ ಸ್ಥಿರಾಸ್ತಿ ಇರುವ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದರು.

ಆದರೆ ಇದೀಗ ಪ್ರಸ್ತುತ ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಅಫಿಡವಿಟ್‌ನಲ್ಲಿ ನಗೆಕೋವೆ, ನಿವಳಿ, ಮೈಸೂರಿನ ವರುಣಾದಲ್ಲಿ ಒಟ್ಟು 32 ಎಕರೆ 36 ಗುಂಟೆ ಕೃಷಿ ಭೂಮಿ, ಒಂದು ವಾಣಿಜ್ಯ ಕಟ್ಟಡ, ದೇವಳಿವಾಡಾದಲ್ಲಿ 3 ಗುಂಟೆಯ ಕೃಷಿಯೇತರ ಜಾಗ ಇರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಕೈಯಲ್ಲಿ 1,86,980 ರೂ. ಹೊಂದಿದ್ದು, ಯೂನಿಯನ್ ಬ್ಯಾಂಕ್‌ನಲ್ಲಿ 2.70 ಲಕ್ಷ ಠೇವಣಿ, ವಿವಿಧ ಬ್ಯಾಂಕ್‌ಗಳ 15 ಉಳಿತಾಯ ಖಾತೆಗಳಲ್ಲಿ 19.26 ಲಕ್ಷ ರೂ, ಮಲ್ಲಿಕಾರ್ಜುನ ಅರ್ಥ್ಮೂವರ್ಸ್ ಹೆಸರಿನ ಎರಡು ಖಾತೆಗಳಲ್ಲಿ 3 ಲಕ್ಷ ರೂ, 10 ಜೀವವಿಮೆ ಪಾಲಿಸಿಗಳಲ್ಲಿ 50 ಲಕ್ಷ, ಪತಿಯ ಹೆಸರಿನಲ್ಲಿ 1 ಲಕ್ಷದ ಒಂದು ಜೀವವಿಮೆ ಮಾಡಿಸಿದ್ದಾರೆ. 22.38 ಲಕ್ಷ ಮೌಲ್ಯದ 516 ಗ್ರಾಂ ಚಿನ್ನ, 1670 ಗ್ರಾಂ ಬೆಳ್ಳಿ, ಪತಿಯ ಹೆಸರಿನಲ್ಲಿ 5.60 ಲಕ್ಷ ಮೌಲ್ಯದ 140 ಗ್ರಾಂ ಚಿನ್ನ ಹೊಂದಿರುವ ರೂಪಾಲಿ, ವ್ಯಾಗನರ್, ಇನೋವಾ, ಹುಂಡೈ ಎಲೆಂಟ್ರಾ, ಟಾಟಾ ವೆಂಚರ್, ಟಾಟಾ ಹಿಟಾಚಿ ವಾಹನಗಳನ್ನು ಹೊಂದಿದ್ದಾರೆ. ಆದರೆ ಪತಿಯ ಹೆಸರಿನಲ್ಲಿ ಕೇವಲ ಪಲ್ಸರ್ ಬೈಕ್ ಮಾತ್ರವಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಈ ಸಾಲ 52.67 ಲಕ್ಷ ರೂ. ಸಾಲ ಇರುವುದಾಗಿ ತಿಳಿಸಿದ್ದರು. ಆದರೆ ಇದೀಗ ಯೂನಿಯನ್ ಬ್ಯಾಂಕ್‌ನಲ್ಲಿ 18.18 ಲಕ್ಷ, 4.86 ಲಕ್ಷ, 23.80 ಲಕ್ಷ, 7.60 ಲಕ್ಷ ಹೀಗೆ ಒಟ್ಟು 54.44 ಲಕ್ಷ ಹಾಗೂ ಕಾರವಾರದ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದದಲ್ಲಿ 91.44 ಲಕ್ಷ, ಒಟ್ಟು 1.45 ಕೋಟಿ ರೂ. ಸಾಲ ಮಾಡಿಕೊಂಡಿರುವ ಬಗ್ಗೆ ಅಫಿಡವಿಟ್‌ನಲ್ಲಿ ದಾಖಲಿಸಿದ್ದಾರೆ.

104 ಕೋಟಿಯ ಒಡೆಯ ಸತೀಶ್ ಸೈಲ್

ಕಾರವಾರ-ಅಂಕೋಲಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಸೈಲ್ ಒಟ್ಟು 46.48 ಕೋಟಿ ರೂ ಚಿರಾಸ್ತಿ ಹಾಗೂ 58.27 ಕೋಟಿ ರೂ. ಸ್ಥಿರಾಸ್ತಿ ಸೇರಿದಂತೆ ಒಟ್ಟು 104.76 ಕೋಟಿ ಆಸ್ತಿ ಘೋಷಿಸಿದ್ದಾರೆ.

ಸತೀಶ ಸೈಲ್ ಬಳಿ 1.06,717 ರೂ. ನಗದು, ಸತೀಶ ಸೈಲ್ ಪತ್ನಿ ಕಲ್ಪನಾ ಸೈಲ್ ಬಳಿ 3925 ರೂ ನಗದು, ವಿವಿಧ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸತೀಶ ಸೈಲ್ ಅವರ 66,67,464 ರೂ, ಕಲ್ಪನಾ ಸೈಲ್ 6,54,509 ರೂ, ಪುತ್ರಿ ಸಾದ್ವಿ ಅವರ ಹೆಸರಲ್ಲಿ 12,96,535 ರೂ, ಇನ್ನೋರ್ವ ಪುತ್ರಿ ಸಚಿ ಹೆಸರಲ್ಲಿ 19,845 ರೂ ಇದೆ. ಸತೀಶ್‌ ಸೈಲ್ ಹೆಸರಲ್ಲಿ 3,61,194 ರೂ ಮೌಲ್ಯದ ಪಿಠೋಪಕರಣಗಳನ್ನು ತೋರಿಸಲಾಗಿದೆ.

ಸತೀಶ ಸೈಲ್ ಬಳಿ 12,70,540 ರೂಪಾಯಿ ಮೌಲ್ಯದ 600 ಗ್ರಾಂ ಬಂಗಾರ, ಕಲ್ಪನಾ ಸೈಲ್ ಬಳಿ 45,77,840 ರೂಪಾಯಿ ಮೌಲ್ಯದ 2090 ಗ್ರಾಂ ಬಂಗಾರ, ಸಾದ್ವಿ ಬಳಿ 9,60,480 ರೂಪಾಯಿ ಮೌಲ್ಯದ 480 ಗ್ರಾಂ ಬಂಗಾರ, ಸಚಿ ಹೆಸರಲ್ಲಿ 6,36,318 ರೂಪಾಯಿ. ಮೌಲ್ಯದ 318 ಗ್ರಾಂ ಬಂಗಾರ ತೋರಿಸಲಾಗಿದೆ.

ಮಂಕಾಳ ವೈದ್ಯ ಬಳಿ 16 ಕೋಟಿ ಆಸ್ತಿ, 13 ಕೋಟಿ ಸಾಲ

ಭಟ್ಕಳ ಹೊನ್ನಾವರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಂಕಾಳು ವೈದ್ಯ 10 ಲಕ್ಷ ರೂ ನಗದು ಹೊಂದಿರುವುದಾಗಿ ತಮ್ಮ ನಾಮಪತ್ರದೊಂದಿಗಿನ ಆಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಪತ್ನಿ ಪುಷ್ಪಲತಾ ಅವರ ಬಳಿ 2 ಲಕ್ಷ ರೂ, ಮಗಳು ಬೀನಾ 1.5 ಲಕ್ಷ ರೂ ನಗದು ಹಣವನ್ನು ಹೊಂದಿದ್ದಾರೆ. ಮಂಕಾಳು ವೈದ್ಯ ಹೊಂದಿರುವ ಚರಾಸ್ತಿಯ ಮೌಲ್ಯ 16.53 ಕೋಟಿ ರೂ, ಅವರ ಪತ್ನಿ ಪುಷ್ಪಲತಾ ಹೊಂದಿರುವ ಚರಾಸ್ತಿಯ ಮೌಲ್ಯ 1.60 ರೂ, ಒಟ್ಟು ಕುಟುಂಬ ಹೊಂದಿರುವ ಚರಾಸ್ತಿಯ ಮೌಲ್ಯ 1.77, ಕೋಟಿ ರೂ, ಮಗಳು ಬೀನಾ ವೈದ್ಯ ಹೊಂದಿರುವ ಚರಾಸ್ತಿಯ ಮೌಲ್ಯ 51.01 ರೂ ಲಕ್ಷ ಆಗಿದೆ. ಅಲ್ಲದೇ ಮಂಕಾಳು ಅವರು 42.99 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+