ಭಟ್ಕಳದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕು
ಕಾರವಾರ, ಮೇ 09: ಭಟ್ಕಳ ಪಟ್ಟಣದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 21ಕ್ಕೆ ಏರಿದಂತಾಗಿದೆ.
ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ 7 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಸಂಜೆ ಬುಲೆಟಿನ್ ನಲ್ಲಿ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ಖಚಿತಪಡಿಸಲಾಗಿದೆ.

ಸೋಂಕಿತ ಮಹಿಳೆ ಕುಟುಂಬದ 8 ಜನರಿಗೆ ಹಾಗೂ ಕುಟುಂಬದ ಸಂಪರ್ಕದಲ್ಲಿದ್ದ 4 ಜನರಿಗೆ ನಿನ್ನೆ ಸೋಂಕು ಧೃಡಪಟ್ಟಿತ್ತು. ಕಳೆದ ನಾಲ್ಕು ದಿನದ ಹಿಂದೆ ಇದೇ ಕುಟುಂಬದ 18 ವರ್ಷದ ಯುವತಿಗೆ ಕೊರೊನಾ ಸೋಂಕು ಕಂಡುಬಂದಿತ್ತು. ಇಂದು ಸಂಜೆ ದೃಢಪಟ್ಟ ಮಹಿಳೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಮಗುವಿನ ಚಿಕಿತ್ಸೆಗೆ ಪತಿಯೊಂದಿಗೆ ಹೋದ ಸಂದರ್ಭದಲ್ಲಿ ತೆರಳಿದ್ದು, ಅಲ್ಲೇ ಸೋಂಕು ತಗುಲಿರಬಹುದು ಎನ್ನಲಾಗಿತ್ತು.
ಭಟ್ಕಳಕ್ಕೆ ಬಂದ ನಂತರ ಸೋಂಕು ಕುಟುಂಬದವರಿಗೆ ಹರಡಿತ್ತು. ಇದೀಗ ಮಹಿಳೆಗೂ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಪರ್ಕದಿಂದ ಇನ್ನೂ ಕೆಲವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications