ಬೆಳಗೆರೆಯ ಜೋಯಿಡಾ ಫಾರ್ಮ್ ಮೇಲೆ ಸಿಸಿಬಿ ಪೊಲೀಸ್ ದಾಳಿ
ಬೆಂಗಳೂರು, ಡಿಸೆಂಬರ್ 9: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸೂಪಾರಿ ನೀಡಿರುವ ಆರೋಪದಲ್ಲಿ ಬಂಧನವಾಗಿರುವ ಪತ್ರಕರ್ತ ರವಿ ಬೆಳಗೆರೆ ತನಿಖೆ ಚುರುಕಿನಿಂದ ನಡೆದಿದೆ.
ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸೂಪಾರಿ ನೀಡಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತಯೇ ಶುಕ್ರವಾರ ಸಂಜೆ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಅವರ ಕಚೇರಿ, ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.
ಇದೀಗ ಸಿಸಿಬಿ ಪೊಲೀಸರು ಉತ್ತರಕನ್ನಡ ಜಿಲ್ಲೆಯ ಜೊಯಿಡಾದಲ್ಲಿರುವ ರವಿ ಬೆಳಗೆರೆ ಅವರ ಜಂಗಲ್ ಬೋಟ್ ಬರ್ಭುಜಾ ಫಾರ್ಮ್ ಹೌಸ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಐದು ಜನರ ಪಿಎಸ್ ಐ ತಂಡವೊಂದು ಜೊಯಿಡಾದಲ್ಲಿರುವ ರವಿ ಬೆಳಗೆರೆ ಅವರ ಜಂಗಲ್ ಬೋಟ್ ಬರ್ಬೂಸಾ ಫಾರ್ಮ್ ಹೌಸ್ ಗೆ ತೆರಳಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ರವಿ ಬೆಳಗೆರೆ ಅವರು ಜೊಯಿಡಾದಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಮನೆ ಮತ್ತು ಕಚೇರಿಗಳಲ್ಲಿ ಸಿಸಿಬಿ ಪೊಲೀಸರು ತಪಾಸಣೆ ನಡೆಸಿ ಒಂದು ರಿವಾಲ್ವರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು, ಚಿಂಕೆ ಚರ್ಮ, ಒಂದು ಡಬ್ಬಲ್ ಬ್ಯಾರೆಲ್ ಗನ್, ಒಂದು ದೊಡ್ಡ ಆಮೆ ಚಿಪ್ಪು ಪತ್ತೆಯಾಗಿತ್ತು.
ಇದೆಲ್ಲ ಸಿಕ್ಕಿದ್ದರಿಂದ ಮತ್ತಷ್ಟು ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಬೆಳೆಗೆರೆ ಫಾರ್ಮ್ ಹೌಸ್ ಅನ್ನು ಸಹ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications