Toll Tax : ಪೂರ್ಣಗೊಳ್ಳದ ಹೆದ್ದಾರಿಗೆ ಮೂರು ಬಾರಿ ಟೋಲ್‌ ದರ ಏರಿಕೆ: ಕರಾವಳಿಯಲ್ಲಿ ತೀವ್ರ ವಿರೋಧ

ಕಾರವಾರ, ಏಪ್ರಿಲ್‌ 1: ರಾಷ್ಟ್ರೀಯ ಹೆದ್ದಾರಿ 66ನ್ನು ಗೋವಾ ಗಡಿಯಿಂದ ಕುಂದಾಪುರದವರೆಗೆ ಚತುಷ್ಪಥಗೊಳಿಸುವ ಕಾರ್ಯ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನು ಪೂರ್ಣಗೊಂಡಿಲ್ಲ. ಆದರೆ ಈಗಾಗಲೇ ಗುತ್ತಿಗೆ ಪಡೆದ ಐಆರ್ ಬಿ ಕಂಪೆನಿ ಟೋಲ್ ಸಂಗ್ರಹ ಪ್ರಾರಂಭಿಸಿತ್ತಾದರೂ ಇದೀಗ ಮತ್ತೆ ಇಂದಿನಿಂದ (ಏಪ್ರಿಲ್‌1) ರಿಂದ ಟೋಲ್ ದರವನ್ನು ಏರಿಕೆ ಮಾಡಲು ಮುಂದಾಗಿದ್ದು ಪ್ರಯಾಣಿಕರಿಗೆ ದೊಡ್ಡ ಶಾಕ್ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಗೋವಾದ ಮಾಜಾಳಿಯಿಂದ ಕುಂದಾಪುರದವರೆಗೆ ಈಗಾಗಲೇ ಐಆರ್.ಬಿ ಕಂಪೆನಿ ಕಾಮಗಾರಿ ನಡೆಸುತ್ತಿದೆ. ಆದರೆ ಜಿಲ್ಲೆಯ ಬಹುತೇಕ ತಾಲೂಕು ವ್ಯಾಪ್ತಿಯ ಹೆದ್ದಾರಿಯೂ ಅರೆಬರೆಯಾಗಿದ್ದು, ಪ್ರಯಾಣೀಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಇದೆ. ಇಷ್ಟಾದರೂ ಶೇ.75 ರಷ್ಟು ರಸ್ತೆ ನಿರ್ಮಾಣವಾಗಿದ್ದು, ಅದಕ್ಕೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಗುತ್ತಿಗೆ ಪಡೆದ ಐಆರ್ ಟೋಲ್‌ವೇಸ್ ಪ್ರೈ ಕಳೆದ ಮೂರು ವರ್ಷದಿಂದಲೇ ಟೋಲ್ ಸಂಗ್ರಹ ಪ್ರಾರಂಭಿಸಿದೆ.

National Highway 66 Toll PriceHiked By 10-15%

ಅರೆಬರೆಯಾಗಿರುವ ಹೆದ್ದಾರಿ ಶುಲ್ಕ ಹೆಚ್ಚಳಕ್ಕೆ ವಿರೋಧ

ಜಿಲ್ಲೆಯಲ್ಲಿ ಹೆದ್ದಾರಿ ಪೂರ್ಣಗೊಂಡಿಲ್ಲ.‌ ಕಾರವಾರದಲ್ಲಿ ಫೈ ಓವರ್ ಕಾಮಗಾರಿ ಪೂರ್ಣವಾಗಿಲ್ಲ. ಒಂದೇ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅರಗಾ, ಬಿಣಗಾ, ಮುದಗಾ, ಅಂಕೋಲಾದ ಶಿರೂರು, ಘಟ್ಟಗಳಲ್ಲಿ ರಸ್ತೆ ಪೂರ್ಣವಾಗಿಲ್ಲ. ಕುಮಟಾ, ಹೊನ್ನಾವರ, ಭಟ್ಕಳದ ಪಟ್ಟಣಗಳಲ್ಲಿ ರಸ್ತೆ ಕಾಮಗಾರಿ ಮುಕ್ತಾಯವಾಗಿಲ್ಲ.

ಅನಿರೀಕ್ಷಿತ ತಿರುವುಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಿರುವಾಗಲೇ ಇದೀಗ ಮೂರನೇ ಬಾರಿಗೆ ಮತ್ತೆ ಏ.1 ರಿಂದ ಟೋಲ್ ಶುಲ್ಕ ಹೆಚ್ಚಳಕ್ಕೆ ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

National Highway 66 Toll PriceHiked By 10-15%

ಟೋಲ್ ದರ ಎಷ್ಟು ಹೆಚ್ಚಳ

ಬೇಲೆಕೇರಿ ಹಾಗೂ ಹೊಳೆಗದ್ದೆ ಟೋಲ್‌ಗಳಲ್ಲಿ ಇದುವರೆಗೆ ನಾಲ್ಕು ಚಕ್ರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 90, ಒಂದೇ ದಿನದಲ್ಲಿ ಹೋಗಿ ಬರುವುದಕ್ಕೆ 135 ರೂ. ಜಿಲ್ಲೆಯ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 45 ರೂ. ಹಾಗೂ ಮಾಸಿಕ ಪಾಸ್‌ಗೆ 3025 ರೂ. ಇತ್ತು. ಅದನ್ನು ಈಗ ಏಕಮುಖ ಸಂಚಾರಕ್ಕೆ 110, ಒಂದೇ ದಿನದಲ್ಲಿ ಹೋಗಿ ಬರಲು 165 ಹಾಗೂ ಜಿಲ್ಲೆಯ ನೋಂದಣಿ ವಾಹನಗಳಿಗೆ 55 ರೂ. ಮಾಸಿಕ ಪಾಸ್ ದರ ಬೇಲೆಕೇರಿಯಲ್ಲಿ 3,690 ರೂ, ಹೊಳೆಗದ್ದೆಯಲ್ಲಿ 3615 ರೂಪಾಯಿಗೆ ಏರಿಸಲಾಗಿದೆ.

ಲಘು ವಾಣಿಜ್ಯ ವಾಹನಗಳಿಗೆ ಬೇಲೆಕೇರಿಯಲ್ಲಿ ಏಕ ಮುಖ ಸಂಚಾರಕ್ಕೆ 140 ರೂ. ಇರುವುದನ್ನು 175 ರೂ., ದ್ವಿಮುಖ ಸಂಚಾರಕ್ಕೆ 215 ಇರುವುದು 260 ರೂ., ಸ್ಥಳೀಯ ವಾಹನಗಳಿಗೆ 70 ಇರುವುದನ್ನು 85 ರೂ.ಗೆ ಪಾಸ್‌ಗೆ 4740 ರೂ. ಇರುವುದನ್ನು 5795 ರೂ. ಗೆ ಹೆಚ್ಚಿಸಲಾಗಿದೆ.

National Highway 66 Toll PriceHiked By 10-15%

ಹೊಳೆಗದ್ದೆಯಲ್ಲಿ ಇದುವರೆಗೆ ಬೇಲೆಕೇರಿಯ ದರವೇ ಇದ್ದು ಇನ್ನು ಮುಂದೆ ಏಕಮುಖ ಸಂಚಾರಕ್ಕೆ 170, ದ್ವಿಮುಖಕ್ಕೆ 255, ಸ್ಥಳೀಯ ವಾಹನಗಳಿಗೆ 85, ಪಾಸ್‌ಗೆ 5715 ರೂ. ನಿಗದಿ ಮಾಡಲಾಗಿದೆ. ಬೇಲೆಕೇರಿಯಲ್ಲಿ ಬಸ್ ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರಕ್ಕೆ 290 ರೂ. ಇರುವುದನ್ನು 360 ರೂ, ದ್ವಿಮುಖ ಸಂಚಾರಕ್ಕೆ 440 ರೂ.ನಿಂದ 535 ರೂ., ಸ್ಥಳೀಯ ವಾಹನಗಳಿಗೆ 145 ರಿಂದ 180 ರೂ. ಗೆ ಹೆಚ್ಚಿಸಲಾಗಿದೆ.

ಮಾಸಿಕ ಪಾಸ್ ದರ 11930 ಕ್ಕೆ ಏರಿಕೆಯಾಗಿದೆ. ಹೊಳೆಗದ್ದೆಯಲ್ಲಿ ಇದುವರೆಗೆ ಬೇಲೆಕೇರಿಯಷ್ಟೇ ದರ ಜಾರಿಯಲ್ಲಿತ್ತು.ಇನ್ನು ಮುಂದೆ ಏಕ ಮುಖ ಸಂಚಾರಕ್ಕೆ 355 ರೂ. ಇಡೀ ದಿನಕ್ಕೆ 530, ಜಿಲ್ಲೆಯ ವಾಹನಗಳಿಗೆ 175 ಹಾಗೂ ಪಾಸ್‌ಗೆ 11930 ರೂ. ದರ ನಿಗದಿ ಮಾಡಲಾಗಿದೆ. ಮಲ್ಟಿ ಎಕ್ಸೆಲ್ ವಾಹನಗಳಿಗೆ ದರ ಭಾರೀ ಹೆಚ್ಚಿದೆ.

ಟೋಲ್ ಶುಲ್ಕ ಇಳಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಅರೆಬರೆ ಕಾಮಗಾರಿ ನಡುವೆ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸಹ ಮನವಿ ನೀಡಲಾಗಿದೆ. ಆದರೆ ಇದೀಗ ಮತ್ತೆ ಐಆರ್ ಬಿ ಕಂಪೆನಿ ಟೋಲ್ ದರ ಏರಿಕೆ ಮಾಡುವುದಾಗಿ ತಿಳಿಸಿದೆ. ಮೊದಲು ಹೆದ್ದಾರಿ ಪೂರ್ಣಗೊಳಿಸಿ ಆಮೆಲೇ ಟೋಲ್ ಸಂಗ್ರಹ ಮಾಡಬೇಕಿತ್ತು. ಆದರೆ ಮೊದಲೇ ಸುಲಿಗೆ ಮಾಡಲು ಪ್ರಾರಂಭಿಸಿ ಇದೀಗ ಮತ್ತೆ ಮತ್ತೆ ಟೋಲ್ ದರ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರ ಮೇಲೆ ಪ್ರಹಾರ ಮಾಡಿದಂತಾಗಿದೆ. ಕೂಡಲೇ ಸರ್ಕಾರ ಸಂಬಂಧಪಟ್ಟ ಕಂಪೆನಿಗೆ ಟೋಲ್ ದರ ಇಳಿಸಲು ಸೂಚಿಸಬೇಕು ಇಲ್ಲದೆ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+