ಯಲ್ಲಾಪುರದಲ್ಲಿ ಗಂಡನ ಸಹೋದರನಿಂದಲೇ ಲೈಂಗಿಕ ಕಿರುಕುಳ: ತಾಯಿ-ಮಗಳು ಆತ್ಮಹತ್ಯೆ

ಯಲ್ಲಾಪುರ, ಡಿಸೆಂಬರ್ 26 : ತನ್ನ ಗಂಡನ ಸಹೋದರನ ಲೈಂಗಿಕ ಕಿರುಕುಳದಿಂದ ಮನನೊಂದು ತಾಯಿ ಹಾಗೂ ಮಗಳು ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ದಲ್ಲಿ ನಡೆದಿದೆ.

ಯಲ್ಲಾಪುರದ ಲಾಲಗುಳಿ ನಿವಾಸಿ ಮಾಲಿನಿ ಪಟಗಾರ (36) ಮೇಘನಾ ಪಟಗಾರ (11) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮಾಲಿನಿ ಪಟಗಾರ ಗಂಡನನ್ನು ಕಳೆದುಕೊಂಡು ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ರೋಹಿದಾಸ ಪಟಗಾರ ಎನ್ನುವಾತ ತನಗೆ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ನೊಂದು ಮಗಳಿಗೂ ಈ ಸ್ಥಿತಿ ಬರಬಾರದೆಂದು ಆಕೆಯನ್ನೂ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ಮಾಲಿನಿ ತೋಟದ ಬಾವಿಗೆ ಹಾರಿದ್ದಾಳೆ.

Mother-daughter committed suicide in Yellapur

ಆರೋಪಿ ರೋಹಿದಾಸ್ ಮಾಲಿನಿ ಗಂಡನ ಸಹೋದರನಾಗಿದ್ದು, ಯಲ್ಲಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+