ಕೊಂಕಣ ರೈಲ್ವೆ ಮಾರ್ಗ ವಿದ್ಯುದೀಕರಣ ಬಹುತೇಕ ಪೂರ್ಣ: ಲೋಕೋ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ
ಕಾರವಾರ, ಮಾರ್ಚ್ 10: ಮಹಾರಾಷ್ಟ್ರದ ರೋಹಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ಥೋಕೂರಿನವರೆಗಿನ 738.94 ಕಿ.ಮೀ ಕೊಂಕಣ ರೈಲ್ವೆ ಮಾರ್ಗದಲ್ಲಿ ಈಗಾಗಲೇ 441.52 ಕಿ.ಮೀ ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ರತ್ನಗಿರಿಯಿಂದ ಕಾರವಾರದವರೆಗಿನ 297.421 ಕಿ.ಮೀ.ನಲ್ಲಿ ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡಿರುವಲ್ಲಿ ಲೋಕೋ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ.
ಎಲೆಕ್ಟ್ರಿಕ್ ರೈಲು ಭಾನುವಾರ ತನ್ನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬೆಳಿಗ್ಗೆ 9.40 ಕ್ಕೆ ಥೋಕೂರಿನಿಂದ ಹೊರಟು ಮಧ್ಯಾಹ್ನ 12.44ಕ್ಕೆ ಕಾರವಾರ ತಲುಪಿದೆ. ಮಧ್ಯಾಹ್ನ 1.40ಕ್ಕೆ ಕಾರವಾರ ಬಿಟ್ಟ ರೈಲು ಸಂಜೆ 4 ಗಂಟೆಗೆ ಥೋಕೂರ್ ಗೆ ಹಿಂತಿರುಗಿದೆ. ಈ ವರ್ಷ ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷೆ
ಕಾಮಗಾರಿ ಪೂರ್ಣಗೊಂಡಿರುವ ರೋಹಾದಿಂದ ರತ್ನಗಿರಿಯವರೆಗಿನ 202.78 ಕಿ.ಮೀ, ಕಾರವಾರದಿಂದ ಕುಂದಾಪುರದ ಬಿಜೂರಿನ 131 ಕಿ.ಮೀ ನವರೆಗೆ ವಿದ್ಯುತ್ ಚಾಲಿತ ಲೋಕೋದ (ಎಂಜಿನ್ ಬೋಗಿ) ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷಿಸಲಾಗಿದೆ.
ಇನ್ನು ಬಿಜೂರಿನಿಂದ ಥೋಕೂರಿನ 107.40 ಕಿ.ಮೀ ವ್ಯಾಪ್ತಿಯಲ್ಲೂ ಲೋಕೋ ಪ್ರಾಯೋಗಿಕ ಸಂಚಾರದ ಜೊತೆಗೆ ರೈಲ್ವೆ ಸುರಕ್ಷತಾ ಆಯೋಗ (ಸಿಆರ್ಎಸ್)ದ ತಪಾಸಣೆ ಕೂಡ ಪೂರ್ಣಗೊಂಡಿದೆ.

ಗಂಟೆಗೆ 110 ಕಿ.ಮೀ. ವೇಗದಲ್ಲಿ ಲೋಕೋ ಓಡಾಟ
ಕಾರವಾರದಿಂದ ಥೋಕೂರಿನವರೆಗೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ಲೋಕೋ ಓಡಾಟ ನಡೆಸಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಉಂಟಾಗಿಲ್ಲ. ಇದು ಕೊಂಕಣ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರೈಲುಗಳಿಗೆ 300 ಕಿ.ಮೀ ನಷ್ಟು ಓಡಲು 1,500 ಲೀಟರ್ ಡೀಸೆಲ್ ಬೇಕು. ಗೂಡ್ಸ್ ರೈಲುಗಳಿಗೆ ಇದಕ್ಕಿಂತ ಹೆಚ್ಚು ಡೀಸೆಲ್ ಬೇಕಾಗುತ್ತದೆ. ದೇಶದಲ್ಲಿ ಅತೀ ಹೆಚ್ಚು ರೈಲುಗಳು ಸಂಚರಿಸುವ ಪ್ರದೇಶಗಳಲ್ಲಿ ಈ ಕೊಂಕಣ ಮಾರ್ಗವೂ ಒಂದಾಗಿದೆ. ಹೀಗಾಗಿ ವಿದ್ಯುದೀಕರಣದಿಂದ ಪ್ರತಿ ವರ್ಷ ಡೀಸೆಲ್ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಲಾಭ ಪಡೆಯಬಹುದಾಗಿದೆ.

ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ
ಡೀಸೆಲ್ ತುಂಬಿಸಲು ಕಾದು ನಿಲ್ಲುವ ಸಮಯ ಕೂಡ ಉಳಿಯಲಿದೆ ಎಂದು ಆಲೋಚಿಸಿ, ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ ನೀಡಲು ಕೊಂಕಣ ರೈಲ್ವೆ ನಿಗಮವು 2017ರ ನವೆಂಬರ್‌ನಲ್ಲಿ ಈ ಕಾಮಗಾರಿ ಆರಂಭಿಸಿತು.
ರೋಹಾದಿಂದ ಗೋವಾದ ವೆರ್ನಾದವರೆಗೆ ಎಲ್ ಆ್ಯಂಡ್ ಟಿ ಮತ್ತು ವೆರ್ನಾದಿಂದ ಥೋಕೂರಿನವರೆಗೆ ಎಸ್.ಟಿ.ಎಸ್ ಕಲ್ಪತರು ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದವು. ವಿದ್ಯುತ್ ಚಾಲಿತ ಲೋಕೋಗಳ ಓಡಾಟದಿಂದಾಗಿ ರೈಲುಗಳ ವೇಗವೂ ಹೆಚ್ಚಾಗಲಿದ್ದು, ಪ್ರಯಾಣದ ಅವಧಿ ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.
Recommended Video

ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳ ಓಡಾಟ
ಎಲೆಕ್ಟ್ರಿಕ್ ರೈಲು ಭಾನುವಾರ ತನ್ನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬೆಳಿಗ್ಗೆ 9.40 ಕ್ಕೆ ಥೋಕೂರಿನಿಂದ ಹೊರಟು ಮಧ್ಯಾಹ್ನ 12.44ಕ್ಕೆ ಕಾರವಾರ ತಲುಪಿದೆ. ಮಧ್ಯಾಹ್ನ 1.40ಕ್ಕೆ ಕಾರವಾರ ಬಿಟ್ಟ ರೈಲು ಸಂಜೆ 4 ಗಂಟೆಗೆ ಥೋಕೂರ್ ಗೆ ಹಿಂತಿರುಗಿದೆ. ಈ ವರ್ಷ ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications