ಕೋವಿಡ್ ಲಸಿಕೆಗೆ ಭಾರೀ ಬೇಡಿಕೆ; ಕ್ರಿಮ್ಸ್‌ನಲ್ಲಿ ಜನಜಂಗುಳಿ

ಕಾರವಾರ, ಜೂನ್ 23; ಇಷ್ಟು ದಿನ ಲಸಿಕೆ ಇಲ್ಲ, ಲಸಿಕೆ ಪಡೆದರೆ ಬೇರೆ ರೀತಿಯ ಪರಿಣಾಮಗಳಾಗುತ್ತವೆ ಎಂಬ ಗಾಳಿ ಸುದ್ದಿಯಿಂದಾಗಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದ ಜನ ಇದೀಗ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಲಸಿಕಾ ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿವೆ.

ಮಂಗಳವಾರ ಕಾರವಾರ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (​ಕ್ರಿಮ್ಸ್) ಮುಂದೆ ಲಸಿಕೆಗಾಗಿ ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೋಮವಾರ ಆಯೋಜನೆ ಮಾಡಿದ್ದ ಲಸಿಕಾ ಮೇಳಕ್ಕೂ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಸುಮಾರು 35,659 ಜನರು ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆಯಲು ಮಂಗಳವಾರವೂ ಕ್ರಿಮ್ಸ್ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಾಲೇಜಿನ ಮುಂಭಾಗದಿಂದ ಸುಮಾರು ಅರ್ಧ ಕಿಲೋ ಮೀಟರ್‌ನಷ್ಟು ಜನರು ಸಾಲಿನಲ್ಲಿ ನಿಂತುಕೊಂಡು ಲಸಿಕೆ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 10 ಸಾವಿರ ಜನರು ಲಸಿಕೆಯನ್ನ ಹಾಕಿಸಿಕೊಂಡಿದ್ದು, ಬುಧವಾರದಿಂದ ಲಸಿಕೆಯ ಅಲಭ್ಯತೆ ಕಾಡತೊಡಗಲಿದೆ.

Heavy Demand For Covid Vaccine Long Queue In Karwar

ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ಜಿಲ್ಲೆಯಲ್ಲಿ 740 ಡೋಸ್ ಕೋವಿಶೀಲ್ಡ್, 850 ಡೋಸ್ ಕೋವ್ಯಾಕ್ಸಿನ್ ಮಾತ್ರವಿದೆ. ಭಟ್ಕಳ, ಹಳಿಯಾಳ, ಮುಂಡಗೋಡ, ಸಿದ್ದಾಪುರ ತಾಲೂಕಿನಲ್ಲಿ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆ ಇಲ್ಲ. ಆರೋಗ್ಯ ಇಲಾಖೆಯ ವಾಹನ ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಗುರುವಾರದ ಒಳಗೆ ಸುಮಾರು 8 ಸಾವಿರ ಡೋಸ್ ಲಸಿಕೆ ಬರುವ ಸಾಧ್ಯತೆ ಇದೆ.

ಬುಧವಾರ ಮಧ್ಯಾಹ್ನದ ವೇಳೆಗೆ ಬಹುತೇಕ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರದಲ್ಲಿ ಲಸಿಕೆ ಖಾಲಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕ್ರಿಮ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರೂ, ಲಸಿಕೆಯ ಅಭಾವ ಇರುವ ಹಿನ್ನಲೆಯಲ್ಲಿ ಬೇರೆ ಕಡೆ ಲಸಿಕಾ ಕೇಂದ್ರವನ್ನು ಪ್ರಾರಂಭಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

Heavy Demand For Covid Vaccine Long Queue In Karwar

ಇನ್ನು ಕೋವಿಡ್ ಲಸಿಕಾ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಮೇಶ್ ರಾವ್, "ಜುಲೈ ವೇಳೆಗೆ ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಲಸಿಕೆ ಬರಲಿದೆ. ಆಗ ಬೇರೆ-ಬೇರೆ ಕಡೆ ಲಸಿಕಾ ಕೇಂದ್ರಗಳನ್ನ ಮಾಡಿ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯ ಮಾಡಲಿದ್ದೇವೆ. ಸದ್ಯ ಲಸಿಕೆಯ ಅಭಾವವಿದ್ದು, ಗುರುವಾರದ ವೇಳೆಗೆ 8 ಸಾವಿರ ಡೋಸ್ ಬರಲಿದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+