ಸ್ಥಳೀಯ ಸಂಸ್ಥೆ ಚುನಾವಣೆ: ಉತ್ತರ ಕನ್ನಡದಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲ

ಕಾರವಾರ, ಆಗಸ್ಟ್.03: ಉತ್ತರಕನ್ನಡ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಸೋಮವಾರ ಪ್ರಕಟಗೊಂಡಿದೆ. ಮೂರು ಕಡೆ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಎರಡು ಕಡೆ ಅತಂತ್ರ ಸ್ಥಿತಿ ಉಂಟಾಗಿದೆ.

31 ವಾರ್ಡ್ ಹೊಂದಿರುವ ಕಾರವಾರ ನಗರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದ್ದು, ಎರಡೂ ಪಕ್ಷ ತಲಾ 11 ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಎಸ್ ನಾಲ್ಕು ಹಾಗೂ ಐವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

31 ವಾರ್ಡ್ ಗಳನ್ನು ಹೊಂದಿರುವ ಶಿರಸಿ ನಗರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ 09, ಬಿಜೆಪಿ- 17, ಜೆಡಿಎಸ್-01, ಪಕ್ಷೇತರ- 04 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

Congress has won a clear majority in Uttara Kannada

16 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ದಾಂಡೇಲಿ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿ-11, ಪಕ್ಷೇತರ-4 ಸ್ಥಾನ ಪಡೆದರೆ, ಜೆಡಿಎಸ್ ಠೇವಣಿ ಕಳೆದುಕೊಂಡಿದೆ.

23 ವಾರ್ಡ್ ಗಳನ್ನು ಹೊಂದಿರುವ ಅಂಕೋಲಾ ಪುರಸಭೆಯಲ್ಲಿ ಕಾಂಗ್ರೆಸ್ 10, ಬಿಜೆಪಿ- 8, ಪಕ್ಷೇತರ-5 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅತಂತ್ರ ಸ್ಥಿತಿ ಉಂಟಾಗಿದೆ. ಜೆಡಿಎಸ್ ಖಾತೆ ತೆರೆದಿಲ್ಲ.

ಕುಮಟಾದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು, 16 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್- 6, ಜೆಡಿಎಸ್-1 ಸ್ಥಾನ ಗೆದ್ದುಕೊಂಡಿದೆ.

Congress has won a clear majority in Uttara Kannada

ಒಟ್ಟು 23 ವಾರ್ಡ್ ಗಳನ್ನು ಹೊಂದಿರುವ ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್- 14 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ-07, ಜೆಡಿಎಸ್-01, ಪಕ್ಷೇತರ-01 ರಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು 19 ವಾರ್ಡ್ ಗಳ ಯಲ್ಲಾಪುರ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ- 5, ಜೆಡಿಎಸ್-1, ಪಕ್ಷೇತರ- 1 ಸ್ಥಾನ ಗೆಲುವು ಕಂಡಿದೆ.

ಮುಂಡಗೋಡದಲ್ಲಿ ಒಂದೇ ಸ್ಥಾನದಲ್ಲಿ ಬಿಜೆಪಿ ಗೆಲುವು ಕಂಡಿದೆ. ಕಾಂಗ್ರೆಸ್- 09 ಸ್ಥಾನ ಗೆದ್ದರೆ, ಬಿಜೆಪಿ-10 ಸ್ಥಾನಗಳಲ್ಲಿ ಗೆಲುವು ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+