ಸಮುದ್ರ ಮಧ್ಯೆ ಕೆಟ್ಟು ನಿಂತ ದೋಣಿ, ರಕ್ಷಣೆಗೆ ಧಾವಿಸಿದ ಕೋಸ್ಟ್ ಗಾರ್ಡ್
ಕಾರವಾರ, ನವೆಂಬರ್ 14 : ಎಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದ 'ಫಾಲಾಕ್ಷ' ಹೆಸರಿನ ಮೀನುಗಾರಿಕೆ ನಡೆಸುವ ದೋಣಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ, ಅಪಾಯಲ್ಲಿದ್ದ 8 ಮಂದಿ ಮೀನುಗಾರರ ಜೀವ ಉಳಿಸಿದ್ದಾರೆ.
ಸಮುದ್ರ ಮಧ್ಯದಲ್ಲಿ ಹಾಳಗಿ ನಿಂತಿದ್ದ ದೋಣಿಯನ್ನು ಸಮುದ್ರ ಕಾವಲು ಮತ್ತು ಸುರಕ್ಷಾ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಎಳೆದು ತಂದು ಕಾರವಾರ ಸಮೀಪದ ದೇವಗಡ ದ್ವೀಪದ ಬಳಿ ನಿಲ್ಲಿಸಿದ್ದಾರೆ.

ಉಡುಪಿಯ ಮಲ್ಪೆ ಸಮುದ್ರದಲ್ಲಿ ಭಾನುವಾರ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ದೋಣಿಯ ಎಂಜಿನ್ ಕೆಟ್ಟು ಮುಂದೆ ಚಲಿಸದಂತಾಗಿತ್ತು. ದೋಣಿಯಲ್ಲಿದ್ದ ಸುಮಾರು 8 ಮಂದಿ ಮೀನುಗಾರರು ಇದರಿಂದ ಭಯಭೀತಗೊಂಡಿದ್ದರು.

ಬಳಿಕ ಈ ಬಗ್ಗೆ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಸಂದೇಶ ರವಾನಿಸಿದಾಗ, ಗಸ್ತಿನಲ್ಲಿದ್ದ ಐಇಜಿಎಸ್ ಅಪೂರ್ವ ಎಂಬ ಕೋಸ್ಟ್ ಗಾರ್ಡ್ ನೌಕೆಯ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು.












Click it and Unblock the Notifications