ಅನಂತಕುಮಾರ್ ಹೆಗಡೆಗೆ ಏಳನೇ ಬಾರಿ ಸ್ಪರ್ಧೆಗೆ ಟಿಕೆಟ್ ನೀಡಿದ ಬಿಜೆಪಿ

Recommended Video

      Lok Sabha Elections 2019 : ಅನಂತ್ ಕುಮಾರ್ ಹೆಗಡೆಗೆ 7ನೇ ಬಾರಿಗೆ ಟಿಕೆಟ್ ಕೊಟ್ಟ ಬಿಜೆಪಿ | Oneindia Kannada

      ಕಾರವಾರ, ಮಾರ್ಚ್ 22:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಇದೀಗ ಏಳನೇ ಬಾರಿ ಸ್ಪರ್ಧೆಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿದೆ.

      ನವದೆಹಲಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಗೆ ದೇಶದ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಕೇಂದ್ರೀಯ ಚುನಾವಣಾ ಸಮಿತಿಯ ಕಾರ್ಯದರ್ಶಿ ಜಗತ್ ಪ್ರಕಾಶ್ ನಡ್ಡಾ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅನಂತಕುಮಾರ್ ಹೆಗಡೆಯವರ ಹೆಸರು ಕೂಡ ಇದೆ.

      ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

      ಕೇವಲ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಅನಂತಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ನೀಡದಂತೆ ಬಿಜೆಪಿಯ ಕಾರ್ಯಕರ್ತರಿಂದಲೂ ಒತ್ತಾಯ ಕೇಳಿ ಬಂದಿತ್ತು. ಅವರ ಬದಲು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಲು ಬೇಡಿಕೆ ಇಡಲಾಗಿತ್ತು.

      BJP has given ticket to Ananth Kumar Hegde for the seventh time

      ಜೊತೆಗೆ, ರಾಜ್ಯ ಘಟಕಕ್ಕೆ ಉತ್ತರ ಕನ್ನಡದಿಂದ ಇಬ್ಬರ ಹೆಸರು ಕೂಡ ಶಿಫಾರಸ್ಸುಗೊಂಡಿತ್ತು. ಅದರಲ್ಲಿ ಅನಂತಕುಮಾರ್ ಹೆಗಡೆ ಒಬ್ಬರಾದರೆ, ಇನ್ನೊಬ್ಬರು ಕುಮಟಾದ ಪ್ರಖ್ಯಾತ ಸ್ತ್ರೀ ವೈದ್ಯ ಡಾ.ಜಿ.ಜಿ.ಹೆಗಡೆ ಅವರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಹಾಲಿ ಸಂಸದರಿಗೇ ಅವಕಾಶ ನೀಡುವ ನಿಲುವು ತಳೆದ ಪಕ್ಷದ ವರಿಷ್ಠರು, ಯಾವುದೇ ಒತ್ತಡಗಳಿಗೂ ಮಣಿಯದೇ ಅನಂತಕುಮಾರ ಹೆಗಡೆಯವರನ್ನೇ ಘೋಷಣೆ ಮಾಡಿದೆ.

      1990ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡಿದ್ದ ಅವರು, ನಂತರ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಸ್ಥಾನದ ಹೊಣೆ ವಹಿಸಿಕೊಂಡಿದ್ದರು. 1996ರಲ್ಲಿ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅವರು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.

      ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ಕ್ಷೇತ್ರವನ್ನು ಬಿಜೆಪಿಗೆ ಕೈಗೆ ತಂದುಕೊಟ್ಟರು. ನಂತರದಲ್ಲಿ 1998, 2004, 2009, 2014ರಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.

      1999ರಲ್ಲಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಅವರು ಅನಂತಕುಮಾರ್ ಹೆಗಡೆ ಅವರನ್ನು ಒಮ್ಮೆ ಸೋಲಿಸಿದ್ದರು. ಅವರಿಗೆ 2017ರಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರನ್ನಾಗಿಯೂ ಮಾಡಲಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+