ಸಮೋಸಾ ತಿನ್ನುವಾಗ ಉಸಿರು ಕಟ್ಟಿ ಮುಂಡಗೋಡದಲ್ಲಿ ಬೌದ್ಧ ಭಿಕ್ಕು ಸಾವು
ಕಾರವಾರ, ಜೂನ್ 30: ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಡಲು ಆಗದೇ ಬೌದ್ಧ ಭಿಕ್ಕು ಮೃತಪಟ್ಟ ಘಟನೆ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಲ್ಲಿ ನಡೆದಿದೆ.
ಮಂಗೋಲಿಯಾ ದೇಶದ ಭಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು. ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದ ಈ ಭಿಕ್ಕುವಿಗೆ ನಿನ್ನೆ ಸಮೋಸಾ ತಿನ್ನುವಾಗ ಬಿಕ್ಕಳಿಕೆ ಬಂದಿದೆ. ಈ ಸಂದರ್ಭದಲ್ಲೇ ಗಂಟಲಲ್ಲಿ ಸಮೋಸ ಸಿಕ್ಕಿಕೊಂಡು, ಉಸಿರಾಟಕ್ಕೆ ತೊಂದರೆ ಪಟ್ಟು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications