ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಕಂದಾಯ ನಿರೀಕ್ಷಕ
ಕಾರವಾರ, ಮೇ 29: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಕಂದಾಯ ನಿರೀಕ್ಷಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಕಂದಾಯ ನಿರೀಕ್ಷಕ ಎ.ವಿ ಪಾಟೀಲ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರಾಮನಗರದಲ್ಲಿ ಕೂಲಿ ಕೆಲಸ ಮಾಡುತಿದ್ದ ಶೈಲಾ ಎನ್ನುವವರ ಬಳಿ ವಿಭಾಗಪತ್ರ ಮಾಡಿಕೊಡಲು ಎರಡು ಸಾವಿರ ರೂಪಾಯಿಯ ಲಂಚವನ್ನು ಕೇಳಿದ್ದರು ಎನ್ನಲಾಗಿದೆ.
ಲೇಹ್ ನಲ್ಲಿ ಪತ್ರಕರ್ತರಿಗೆ ಬಿಜೆಪಿ ನಾಯಕರು ಲಂಚ ಕೊಟ್ಟರೆ?
ಈ ಹಿನ್ನೆಲೆಯಲ್ಲಿ ಎಸಿಬಿಗೆ ದೂರು ಬಂದಿದ್ದು, ಅದರನ್ವಯ ಸ್ಥಳಕ್ಕೆ ತೆರಳಿದ್ದಾರೆ. ಎಸಿಬಿ ಡಿವೈಎಸ್ ಪಿ ಗಿರೀಶ್ ನೇತ್ರತ್ವದ ತಂಡವು ಪಾಟೀಲ್, ಲಂಚವನ್ನು ತೆಗೆದುಕೊಳ್ಳುತ್ತಿದ್ದ ವೇಳೆ ವಶಕ್ಕೆ ಪಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಧಿಕಾರಿಗಳಿಂದ ಎ.ವಿ. ಪಾಟೀಲ್ ವಿಚಾರಣೆ ನಡೆಯುತ್ತಿದೆ.