ಭಟ್ಕಳದಲ್ಲಿ ಭಯ ಹುಟ್ಟಿಸಿದೆ ಕೊರೊನಾ; ಇಂದು ಮತ್ತೆ 7 ಕೇಸ್

ಭಟ್ಕಳ, ಮೇ 09: ಪಟ್ಟಣದಲ್ಲಿ ಇಂದು ಮತ್ತೆ ಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಖಚಿತಪಡಿಸಿದೆ.

Recommended Video

      ಉಡುಪಿಗೆ ಯಾರೇ ಬಂದ್ರೂ ಕ್ವಾರಂಟೇನ್ ನಲ್ಲಿಡೋದು ಪಕ್ಕಾ | Udupi | Oneindia Kannada

      ನಿನ್ನೆ ಒಂದೇ ದಿನ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಸುಮಾರು 60 ಜನರ ಗಂಟಲು ದ್ರವದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ, ನಿನ್ನೆ ದೃಢಪಟ್ಟಿದ್ದ 18 ವರ್ಷದ ಯುವತಿಯ ಕುಟುಂಬದ ಆರು ಹಾಗೂ ಆಕೆಯ ಸ್ನೇಹಿತರೊಬ್ಬರು ಸೇರಿ ಒಟ್ಟು ಏಳು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

      ಒಂದೂವರೆ ವರ್ಷದ ಬಾಲಕಿ, ಎರಡು ವರ್ಷ ಆರು ತಿಂಗಳ ಬಾಲಕಿ, 17, 23 ವರ್ಷದ ಯುವತಿ, 65, 68 ವರ್ಷದ ವೃದ್ಧ ಹಾಗೂ 50 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಓಣಿಯಲ್ಲಿದ್ದವರು ಎನ್ನಲಾಗಿದ್ದು, ಇದು ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ‌.

      7 More Coronavirus Positive Cases Found Today In Bhatkal

      ಈ ಏಳು ಮಂದಿಯಲ್ಲಿ ಸೋಂಕಿನ ಪ್ರಕರಣ ದೃಢಪಡುವ ಮೂಲಕ ಸದ್ಯ ಪಟ್ಟಣವೊಂದರಲ್ಲೇ ಒಟ್ಟು 31 ಪ್ರಕರಣಗಳು ಪತ್ತೆಯಾದಂತಾಗಿದೆ. 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸದ್ಯ 20 ಸಕ್ರಿಯ ಪ್ರಕರಣಗಳು ಇವೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಇದೀಗ ಭಟ್ಕಳ ಮಾತ್ರವಲ್ಲ, ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+