Zee News Exit Poll Results 2023: ಝೀ ನ್ಯೂಸ್ ಸಮೀಕ್ಷೆಯಲ್ಲಿ ಕೈಗೆ ಅಧಿಕಾರ; ಬಿಜೆಪಿ, ಜೆಡಿಎಸ್‌ಗೆಷ್ಟು ಸ್ಥಾನ?

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಬುಧವಾರ, ಮೇ 10) ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ಸುಮಾರು ಶೇ.70ರಷ್ಟು ಮತದಾನವಾಗಿದೆ.

ಮತದಾನದ ನಂತರ ಕರ್ನಾಟಕದ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ಝೀ ನ್ಯೂಸ್ ಸಮೀಕ್ಷೆಯಲ್ಲಿ ಆಡಳಿತರೂಢ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ವಿಪಕ್ಷ ಕಾಂಗ್ರೆಸ್ ಮುಂದಿನ ಐದು ವರ್ಷಗಳಿಗೆ ಅಧಿಕಾರಕ್ಕೇರಲಿದೆ.

 Zee News Exit Poll Results 2023

ಕಾಂಗ್ರೆಸ್‌ಗೆ 103ರಿಂದ 118 ಸ್ಥಾನಗಳು ಬರಲಿವೆ ಎಂದು ಝೀ ನ್ಯೂಸ್ ಸಮೀಕ್ಷೆ ತಿಳಿಸಿದ್ದು, ಸ್ಪಷ್ಟ ಬಹುಮತದತ್ತ ಸಾಗಲಿದೆ ಎಂದು ಹೇಳಲಾಗಿದೆ. ಇನ್ನು ಬಿಜೆಪಿ ಪಕ್ಷ 79ರಿಂದ 94 ಸ್ಥಾನಗಳನ್ನು ಮಾತ್ರ ಗಳಿಸಲಿದೆ. ಇನ್ನು ಜೆಡಿಎಸ್ 25ರಿಂದ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ. ಅಲ್ಲದೇ ಪಕ್ಷೇತರರು 2ರಿಂದ 5 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.

ಝೀ ನ್ಯೂಸ್ ಚುನಾವಣೋತ್ತರ ಸಮೀಕ್ಷೆ 2023: ಮತ ಹಂಚಿಕೆ
ಕಾಂಗ್ರೆಸ್ - ಶೇ.41

ಬಿಜೆಪಿ - ಶೇ.36

ಜೆಡಿಎಸ್ - ಶೇ.17

ಝೀ ನ್ಯೂಸ್-ಮೆಟ್ರಿಜ್ ಸಹಯೋಗದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 103-118 ಸ್ವತಂತ್ರ ಸರ್ಕಾರ ರಚಿಸುವ ಸಮೀಪದಲ್ಲಿ ಬರಲಿದೆ.

ಕರ್ನಾಟಕ ಚುನಾವಣಾ ಕಣದಲ್ಲಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ತಮ್ಮ ಗೆಲುವಿನ ವಿಶ್ವಾಸವನ್ನು ಹೊಂದಿವೆ. ಭಾರತೀಯ ಜನತಾ ಪಕ್ಷವು ಎಲ್ಲಾ 224 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 223 ಅಸೆಂಬ್ಲಿ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ 208 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ.

ಜೆಡಿಎಸ್ ಕಿಂಗ್ ಮೇಕರ್
ಝೀ ನ್ಯೂಸ್ ಚುನಾವಣೋತ್ತರ ಸಮೀಕ್ಷೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುತ್ತಿರುವಂತೆ ಕಂಡುಬಂದರೂ, ಕಡಿಮೆ ನಿರೀಕ್ಷಿತ ಸಂಖ್ಯೆಯನ್ನು ಪರಿಗಣಿಸಿದರೆ 103 ಸ್ಥಾನಗಳನ್ನು ಎನ್ನಲಾಗುತ್ತದೆ. ಅದೇ ರೀತಿ, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅತ್ಯುತ್ತಮ ಅಂದರೆ 93 ಮತ್ತು 33 ಸ್ಥಾನಗಳು ಪಡೆಯಲಿವೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅತಂತ್ರ ಅಸೆಂಬ್ಲಿಯ ಸಾಧ್ಯತೆಯನ್ನು ಕಡೆಗಣಿಸಲಾಗುವುದಿಲ್ಲ. ಹೀಗಾಗಿ ಜೆಡಿಎಸ್ ಪಕ್ಷವನ್ನು ಮತ್ತೆ ಕಿಂಗ್ ಮೇಕರ್ ಸ್ಥಾನದಲ್ಲಿರುತ್ತದೆ.

2,613 ಅಭ್ಯರ್ಥಿಗಳ ಪೈಕಿ 2,427 ಪುರುಷರು ಮತ್ತು 185 ಮಹಿಳಾ ಅಭ್ಯರ್ಥಿಗಳಿದ್ದು, ಒಬ್ಬ ಅಭ್ಯರ್ಥಿಯು ಇತರರ ವಿಭಾಗದಲ್ಲಿದ್ದಾರೆ. ರಾಜ್ಯದಲ್ಲಿ 5.30 ಕೋಟಿ ನೋಂದಾಯಿತ ಮತದಾರರಿದ್ದಾರೆ. ಅದರಲ್ಲಿ 2.6 ಕೋಟಿ ಪುರುಷ ಮತದಾರರು ಮತ್ತು 2.6 ಮಹಿಳಾ ಮತದಾರರಿದ್ದರೆ, 4,927 ಮತದಾರರು ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+